ಟಿಕ್ ಟಾಕ್ ಇದು ಜನಜೀವನದ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದರೆ ಜನ ಕುಂತಲ್ಲಿ ನಿಂತಲ್ಲಿ ಎಲ್ಲಾ ಕಡೆಗಳಲ್ಲಿಯೂ ಜನ ಟಿಕ್ ಟಾಕ್ ನಲ್ಲಿ ಮುಳುಗಿ ಹೋಗಿರುತ್ತಾರೆ. ಅಲ್ಲದೆ ಈ ಒಂದು ಆ್ಯಪ್ ನಿಂದಾಗಿ ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದೀಗಾ ಇದೇ ಟಿಕ್ ಟಾಕ್ ನಿಂದ ಮಹಿಳಾ ಪೇದೆಯೊಬ್ಬರು ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ.
ಹೌದು ಹಲವು ದಿನಗಳ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಆಗ ತಾನೇ ಹುಟ್ಟಿದ ಮಗುವಿನ ಜೊತೆ ಬಾಲಿವುಡ್ ಸಾಂಗ್ ವೊಂದಕ್ಕೆ 3ಜನ ನರ್ಸ್ಗಳು ಟಿಕ್ ಟಾಕ್ ಮಾಡುವ ಮೂಲಕ ಕೆಲಸ ಕಳೆದುಕೊಂಡಿದ್ದರು. ಇದೇ ಸಾಲಿಗೆ ಸೇರಿದ ಮಹಿಳಾ ಪೊಲೀಸ್ ಪೇದೆಯೊಬ್ಬರು ಠಾಣೆಯಲ್ಲಿ ಕರ್ತವ್ಯದ ವೇಳೆ ಟಿಕ್ಟಾಕ್ ಮಾಡುವ ಕೆಲಸ ಕಳೆದುಕೊಂಡಿದ್ದಾರೆ.
ಗುಜರಾತಿನ ಮೆಹ್ಸಾನಾ ನಗರದ ಠಾಣೆಯಲ್ಲಿ ಪೇದೆಯಾಗಿದ್ದ ಅರ್ಪಿತಾ ಚೌಧರಿ ಎಂಬುವವರು ಇದೇ ತಿಂಗಳ 20ರಂದು ಠಾಣೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿ ಬಾಲಿವುಡ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಟಿಕ್ ಟಾಕ್ ಪ್ಲಾಟ್ ಫಾರ್ಮ್ ನಲ್ಲಿ ಹರಿದಾಡಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು.
ಇನ್ನೂ ಈ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತನಿಖೆಗೆ ನಡೆಸುವುದಾಗಿ ಆದೇಶಿಸಲಾಗಿತ್ತು. ತನಿಖೆ ವೇಳೆ ಅರ್ಪಿತಾ ಚೌಧರಿ ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರ ಧರಿಸದೆ ಲಾಕಪ್ ಮುಂದೆ ಡಾನ್ಸ್ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಮೇಲಾಧಿಕಾರಿಗಳು ಅರ್ಪಿತಾರನ್ನ ಸೇವೆಯಿಂದ ವಜಾಗೊಳಿಸಿದ್ದಾರೆ.
Comments are closed.