ನವದೆಹಲಿ (ಜು.05): ಆದಾಯ ತೆರಿಗೆ ಸಲ್ಲಿಸಲು ಪ್ಯಾನ್ ಕಾರ್ಡ್ ಕಡ್ಡಾಯ ಎಂಬ ನಿಯಮವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಡಿಲಗೊಳಿಸಿದ್ದಾರೆ. ಪ್ಯಾನ್ಗೆ ಬದಲಾಗಿದೆ ಆಧಾರ್ ಕಾರ್ಡ್ ಮೂಲಕವೂ ಇನ್ಮುಂದೆ ಆದಾಯ ತೆರಿಗೆಯನ್ನು ಸಲ್ಲಿಸಬಹುದು ಎಂದು ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
ಆದಾಯ ತೆರಿಗೆ ಸಲ್ಲಿಕೆಯ ನಿಯಮದ ಪ್ರಕಾರ ಈ ಹಿಂದೆ ಪ್ಯಾನ್ ಕಡ್ಡಾಯವಾಗಿತ್ತು. ಆದರೆ ಈ ನಿಯಮವನ್ನು ಸಡಿಲಿಸಿದ್ದು, ಪ್ಯಾನ್ ಬದಲಾಗಿ ಆಧಾರ್ ಕಾರ್ಡ್ ಮೂಲಕವೂ ಐಟಿ ಸಲ್ಲಿಸಬಹುದಾಗಿದೆ.
ಭಾರತದಲ್ಲಿ 120 ಕೋಟಿಕ್ಕೂ ಹೆಚ್ಚು ಭಾರತೀಯರು ಆಧಾರ್ ಕಾರ್ಡ್ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲವಾಗಲು ನಿಯಮವನ್ನು ಸಡಿಲಗೊಳಿಸಲಾಗಿದೆ. ಈ ಮೂಲಕ ಪ್ಯಾನ್ ಇಲ್ಲದವರು ಆಧಾರ್ ಕಾರ್ಡ್ ಮೂಲಕವೂ ತೆರಿಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ಯಾನ್ ಕಾರ್ಡ್ ಇಲ್ಲದವರು ಕೂಡ ಆಧಾರ್ ನಂಬರ್ ಬಳಸುವ ಮೂಲಕ ಆದಾಯ ತೆರಿಗೆ ಸಲ್ಲಿಸಬಹುದಾಗಿದೆ ಎಂದರು.
Comments are closed.