ಭಾರತದಲ್ಲಿ ಸ್ವಚ್ಛತೆಯ ಬಗೆಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಭಾರತವನ್ನು ಕಸದಿಂದ ಮುಕ್ತಿಗೊಳಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿತ್ತು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸ್ವಚ್ಛಭಾರತ ಅಭಿಯಾನವನ್ನು ಸಹ ಜಾರಿಗೆ ತಂದರು.
ಇದೀಗಾ ದೆಹಲಿ ನಗರವನ್ನು ಕಸಮುಕ್ತವನ್ನಾಗಿಸಿ ಸ್ವಚ್ಛಗೊಳಿಸುವ ಉದ್ದೇಶದಿಂದ ದೆಹಲಿ ಮುನ್ಸಿಪಾಲ್ ಕಾರ್ಪೋರೇಷನ್ ನೂತನ ಉಪಾಯವನ್ನು ಮಾಡಿದ್ದು, ಸ್ಮಾರ್ಟ್ ಡಸ್ಟ್ ಬಿನ್ ಗಳನ್ನು ರಾಜಧಾನಿಯ ಬೀದಿಗಳಲ್ಲಿ ಅಳವಡಿಸಿಲು ಮುಂದಾಗಿದೆ.
ಸ್ಮಾರ್ಟ್ ಡಸ್ಟ್ ಬಿನ್ ಗಳು ದೆಹಲಿಗೆ ಲಗ್ಗೆ ಇಟ್ಟಿದ್ದು, ಈ ಡಸ್ಟ್ ಬಿನ್ ಗಳನ್ನು ಭೂಮಿಯ ಒಳಗಡೆ ನಿರ್ಮಾಣ ಮಾಡಲಾಗಿದೆ. ಜೊತೆಗೆ ಸೆನ್ಸಾರ್ ಗಳನ್ನು ಡಸ್ಟ್ ಬಿನ್ ಗಳೊಂದಿಗೆ ಅಳವಡಿಸಲಾಗಿದೆ. ಇದು ಶೇ 90 ರಷ್ಟು ಕಸ ತುಂಬಿಕೊಂಡ ತಕ್ಷಣ ಸೆನ್ಸಾರ್ ಗಳು NDMCಗೆ ಮಾಹಿತಿ ನೀಡುತ್ತದೆ.
ನಂತರ NDMC ತನ್ನ ಟ್ರಂಕ್ ಗಳ ಮೂಲಕ ಮಾನವ ರಹಿತವಾಗಿ ಹೈಡ್ರೋಲಿಕ್ ಯಂತ್ರವನ್ನು ಬಳಸಿ ಸ್ಥಳದಿಂದ ಕಸವನ್ನು ತುಂಬಿಕೊಳ್ಳುತ್ತವೆ. ಈ ಸ್ಮಾರ್ಟ್ ಐಡಿಯಾದಿಂದ ಕಸದ ರಾಶಿ ಬೀದಿಗಳಲ್ಲಿ ಹೆಚ್ಚಾಗಿ ಇರುವುದಿಲ್ಲ ಹಾಗೂ ಯಾವುದೆ ಜಾನುವಾರುಗಳ ಹೊಟ್ಟೆಗೆ ಪ್ಲಾಸ್ಟಿಕ್ ಗಳು ಸೇರುವುದಿಲ್ಲ.