ಬೀದರ್: ಬೀದರ್‌ನಲ್ಲಿರುವ ಬ್ರಿಮ್ಸ್ ಆಸ್ಪತ್ರೆ ಕಟ್ಟದ ಮೇಲ್ಛಾವಣಿ ಕುಸಿದ ಹಿನ್ನೆಲೆ, ಸಂಸದ ಭಗವಂತ್ ಖೂಬಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಮೂರು ದಿನದಲ್ಲೇ ಈ ಆಸ್ಪತ್ರೆಯಲ್ಲಿ 2 ಅವಘಡ ನಡೆದಿದ್ದು, ಎರಡು ದಿನದ ಹಿಂದೆಯಷ್ಟೇ ಬಾಣಂತಿಗೆ ಬದಲಿ ರಕ್ತ ನೀಡುವ ಮೂಲಕ ವೈದ್ಯರು ನಿರ್ಲಕ್ಷ್ಯ ತೋರಿದ್ದರು. ನಂತರ ಮೇಲ್ಛಾವಣಿ ಕುಸಿದಿದ್ದು, ಕುತ್ತಾಬಿ ಕಾಮ್ ನಹಿ ಕರ್ತೆ ತುಮ್ಹಾರೆ ಜೈಸಾ ಎಂದು ವೈದ್ಯರುಗಳನ್ನು ನಾಯಿಗೆ ಹೋಲಿಸಿದ್ದಾರೆ.
ಸಣ್ಣ ಮಳೆಗೆ ನಿನ್ನೆ ಮೆಲ್ಛಾವಣಿ ಕುಸಿತ ವಿಚಾರಕ್ಕೆ ಸಂಬಂಧಿಸಿದಂತೆ, ಬ್ರಿಮ್ಸ್ ನಿರ್ದೇಶಕರಿಗೆ ಸೇರಿದಂತೆ ವೈದ್ಯರನ್ನ ತರಾಟೆಗೆ ತಗೆದುಕೊಂಡ ಸಂಸದ ಖೂಬಾ, ನಿರ್ಲಕ್ಷ್ಯ ತೊರಿದ್ದ ಸಿಬ್ಬಂದಿಗಳಿಗೆ ಯಾಕೆ ಅಮಾನತು ಮಾಡಿಲ್ಲಾ.? ಆಸ್ಪತ್ರೆಯಲ್ಲಿ ಏನ್ ಕೆಲಸ ಮಾಡುತ್ತಿದ್ದೀರಾ..? ನಿಮ್ಮ ಜೀವನಕ್ಕಾಗಿ ಕೆಲಸ ಮಾಡುತ್ತಿದ್ದೀರಾ ಇಲ್ಲಾ ಜನರಿಗಾಗಿ ಕೆಲಸ ಮಾಡುತ್ತಿದ್ದಿರಾ..? ನಿರ್ಲಕ್ಷ್ಯ ತೋರಿದ್ದವರಿಗೆ ಅಮಾನತು ಮಾಡದೇ ಹೇಗೆ ತನಿಖೆ ನಡೆಸುತ್ತಿರಾ.? ಎಂದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
Comments are closed.