ರಾಷ್ಟ್ರೀಯ

ಮತದಾನ ಮಾಡಲು ಒಳಹೋದ ತಾಯಿ: ಕಂದನನ್ನು ಆರೈಕೆ ಮಾಡಿದ ಯೋಧ!

Pinterest LinkedIn Tumblr


ನವದೆಹಲಿ: 2019 ರ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಪ್ರಕ್ರಿಯೆ ಇಂದು ಮುಕ್ತಾಯವಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಮುಗಿದಿದೆ.

ಈ ಮಧ್ಯೆ ಮಹಿಳೆಯೋರ್ವರು ಮತದಾನ ಮಾಡಲು ಮತಗಟ್ಟೆ ಒಳಗೆ ಹೋದಾಗ, ಮತಗಟ್ಟೆಯ ಭದ್ರತೆಗೆ ನಿಯೋಜನೆಗೊಂಡಿದ್ದ CRPF ಯೋಧನೋರ್ವ ಆಕೆಯ ಕಂದನನ್ನು ಆರೈಕೆ ಮಾಡಿದ ಫೋಟೋ ಭಾರೀ ವೈರಲ್ ಆಗಿದೆ.

ಈ ಕುರಿತು ಟ್ವೀಟ್ ಮಾಡಿರುವ CRPF ಈ ಕಂದ ಸುರಕ್ಷಿತ ಕೈಗಳಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದೆ. ಇನ್ನು CRPF ಟ್ವೀಟ್ ಭಾರೀ ವೈರಲ್ ಆಗಿದ್ದು, ಯೋಧನ ಮಡಿಲಲ್ಲಿ ಮುಗುಳ್ನುತ್ತಾ ಆಟವಾಡುತ್ತಿದ್ದ ಕಂದನಿಗೆ ಎಲ್ಲರೂ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ.

Comments are closed.