ರಾಷ್ಟ್ರೀಯ

ಛತ್ತೀಸ್ ಘಡದಲ್ಲಿ ಮತ್ತೆ ಮಾವೋವಾದಿಗಳ ದಾಳಿ; 4 ಬಿಎಸ್ಎಫ್ ಯೋಧರು ಹುತಾತ್ಮ

Pinterest LinkedIn Tumblr

ಕನ್ಕೇರ್: ಛತ್ತೀಸ್ ಘಡದಲ್ಲಿ ಮತ್ತೆ ಮಾವೋವಾದಿಗಳ ದಾಳಿ ನಡೆದಿದ್ದು, 4 ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದರೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ರಾಜ್ಯದ ಕನ್ಕೇರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗ ಈ ಕೃತ್ಯ ಸಂಭವಿಸಿದೆ.

ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ನಕ್ಸಲರು ಸ್ಥಳೀಯರಿಗೆ ಕರೆ ನೀಡಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ಬಿಎಸ್ಎಫ್ ಯೋಧರು ಹಾಗೂ ಮಾವೋವಾದಿಗಳ ನಡುವಿನ ಗುಂಡಿನ ದಾಳಿಯಲ್ಲಿ 4 ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದು ಇಬ್ಬರು ಯೋಧರಿಗೆ ತೀವ್ರ ಗಾಯಗಳಾಗಿವೆ.

ಚುನಾವಣೆಗೂ ಮುನ್ನ ರಾಜ್ಯ ಪೊಲೀಸರು ಹಾಗೂ ಅರೆ ಸೇನಾಪಡೆ ನಕ್ಸಲರ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಸೇನೆ, ಪೊಲೀಸರ ಮೇಲೆ ನಕ್ಸಲರು ಪ್ರತಿ ದಾಳಿ ನಡೆಸಿದ್ದಾರೆ. ಏ.11, ಏ.18, ಏ.23 ರಂದು ಛತ್ತೀಸ್ ಘಡದ 11 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

Comments are closed.