ರಾಷ್ಟ್ರೀಯ

ಮತ್ತಷ್ಟು ದಾಳಿ ನಡೆಸುವುದಾಗಿ: ಹಿಜ್ಜುಲ್‌‌‌‌ ಮುಜಾಹಿದೀನ್‌‌ ಎಚ್ಚರಿಕೆ

Pinterest LinkedIn Tumblr


ದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಆತ್ಮಾಹುತಿ ನಡೆದ ಐದು ದಿನಗಳ ಅಂತರದಲ್ಲೇ ಕಣಿವೆ ರಾಜ್ಯದಲ್ಲಿ ಮತ್ತಷ್ಟು ಆತ್ಮಾಹುತಿ ದಾಳಿಗಳನ್ನು ನಡೆಸಲಾಗುವುದು ಎಂದು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಬೆದರಿಕೆ ಹಾಕಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಹಿಜ್ಬುಲ್ ಸಂಘಟನೆಯ ರಿಯಾಜ್ ನೈಕೋ 17 ಆಡಿಯೋ ಸಂದೇಶವನ್ನು ಸೋಮವಾರವೇ ಬಿಡುಗಡೆ ಮಾಡಿದ್ದು, ಪುಲ್ವಾಮಾದಲ್ಲಿ ದಾಳಿ ನಡೆಸಿದ ಆತ್ಮಾಹುತಿ ಬಾಂಬರ್ ಅದಿಲ್ ಅಹ್ಮದ್ ದಾರ್‌ನನ್ನು ರಿಯಾಜ್ ಹೊಗಳಿದ್ದಾನೆ.

‘ನಾವು ನಮ್ಮ ಜೀವಗಳನ್ನು ತ್ಯಾಗ ಮಾಡಲು ಸಿದ್ಧರಿದ್ದೇವೆ. ನಾವು ಸಾವನ್ನು ಆಹ್ವಾನಿಸುತ್ತೇವೆ. 15 ವರ್ಷದ ಬಾಲಕನೂ ತನ್ನ ದೇಹಕ್ಕೆ ಸ್ಫೋಟಕಗಳನ್ನು ಕಟ್ಟಿಕೊಂಡು ಸೇನೆಯ ವಾಹನಗಳ ಮೇಲೆ ದಾಳಿ ನಡೆಸುವ ಸಮಯ ದೂರವಿಲ್ಲ. ನಿಮ್ಮ ಸೇನೆ ಇಲ್ಲಿ ಇರುವವರೆಗೆ ನೀವು ಅಳುತ್ತಲೇ ಇರಬೇಕಾಗುತ್ತದೆ. ಸೈನಿಕರ ಮೃತ ದೇಹಗಳನ್ನು ಹೊತ್ತ ಶವಪೆಟ್ಟಿಗೆಗಳು ಇಲ್ಲಿಂದ ಹೊರ ಹೋಗುತ್ತಲೇ ಇರುತ್ತವೆ. ನಾವು ಸಾಯಲು ಸಿದ್ಧರಿದ್ದೇವೆ, ಆದರೆ ನಾವು ನಿಮ್ಮನ್ನು ಇಲ್ಲಿ ಬದುಕಲು ಬಿಡುವುದಿಲ್ಲ’ ಎಂದು ರಿಯಾಜ್ ನೈಕೋ ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾನೆ.

‘ಕಾಶ್ಮೀರಿ ಬೇಡಿಕೆಗಳನ್ನು ಕೇಂದ್ರ ಸರಕಾರ ಪುರಸ್ಕರಿಸುತ್ತಿಲ್ಲ. ಪುಲ್ವಾಮಾದಲ್ಲಿ ಸೈನಿಕರ ಮೇಲೆ ಆತ್ಮಾಹುತಿ ದಾಳಿ ನಡೆಸಿದ ಅದಿಲ್ ಕಾಶ್ಮೀರಿ ಯುವಕ. ಸೈನಿಕರಿಂದ ತನ್ನ ಮೇಲೆ ನಡೆದ ದೌರ್ಜನ್ಯಗಳಿಗೆ ಪ್ರತಿಯಾಗಿ ಆತ ಈ ದಾಳಿ ನಡೆಸಿದ್ದಾನೆ. ವಿಶ್ವದ ಯಾವುದೇ ಶಕ್ತಿ ಈ ರೀತಿಯ ದಾಳಿಗಳನ್ನು ತಡೆಯಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಕಾಶ್ಮೀರದಲ್ಲಿ ಸೇನೆ ಇರುತ್ತದೆಯೋ ಅಲ್ಲಿಯವರೆಗೆ ಸೈನಿಕರ ಮೇಲೆ ದಾಳಿ ನಡೆಯುತ್ತಲೇ ಇರುತ್ತದೆ’ ಎಂದು ರಿಯಾಜ್ ಹೇಳಿದ್ದಾನೆ.

Comments are closed.