ರಾಷ್ಟ್ರೀಯ

ಉಗ್ರ ನಿರ್ಮೂಲನೆಗೆ ಎಲ್ಲ ವಿರೋಧ ಪಕ್ಷಗಳ ಒಗ್ಗಟ್ಟು

Pinterest LinkedIn Tumblr


ನವದೆಹಲಿ: ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ಇಂದು ಎನ್​ಡಿಎ ಸರ್ಕಾರ ಸರ್ವಪಕ್ಷಗಳ ಸಭೆಯನ್ನು ನಡೆಸಿತು. ದಾಳಿಯನ್ನು ಖಂಡಿಸಿ ಎಲ್ಲ ಪಕ್ಷಗಳು ಒಗ್ಗಾಟ್ಟಾಗಿ ನಿಲ್ಲಬೇಕು ಮತ್ತು ಭಯೋತ್ಪಾದನೆ ನಿರ್ಮೂಲನೆಗೆ ಭದ್ರತಾ ಪಡೆಗೆ ಜೊತೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಸರ್ಕಾರ ಎಲ್ಲ ಪಕ್ಷಗಳಿಗೂ ಸೂಚನೆ ನೀಡಿತು.

ಗಡಿಯ ಸುತ್ತಲೂ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಸರ್ಕಾರ ಪ್ರೋತ್ಸಾಹ ನೀಡುತ್ತಿರುವುದನ್ನು ಎಲ್ಲ ಪಕ್ಷಗಳು ಖಂಡಿಸಿದವು. ಮತ್ತು ದಾಳಿಯಲ್ಲಿ ಮಡಿದ ಎಲ್ಲ ಸಿಆರ್​ಪಿಎಫ್​ ಯೋಧರಿಗೆ ಅಂತಿಮ ನಮನ ಸಲ್ಲಿಸಿದವು. ಭಾರತ ಏಕತೆ ಮತ್ತು ದೃಢತೆಯನ್ನು ಪ್ರದರ್ಶಿಸಬೇಕು ಎಂದು ಎಲ್ಲ ಪಕ್ಷಗಳು ಸಂಕಲ್ಪ ಮಾಡಿದವು.

ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಬ್​ ನಬಿ ಆಜಾದ್, ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ತೆಗೆದುಕೊಳ್ಳಬೇಕಾದ ಭವಿಷ್ಯ ಕ್ರಮಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಪಕ್ಷಗಳ ಅಧ್ಯಕ್ಷರನ್ನು ಮಾತುಕತೆಗೆ ಕರೆಯುವಂತೆ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಹೇಳಿದ್ದೆ. ಭಯೋತ್ಪಾದನೆ ನಿರ್ಮೂಲನೆ ಹಾಗೂ ದೇಶದ ರಕ್ಷಣೆ ವಿಷಯದಲ್ಲಿ ಎಲ್ಲ ವಿರೋಧ ಪಕ್ಷಗಳು ಸರ್ಕಾರ ಪರವಾಗಿ ನಿಲ್ಲಲಿವೆ ಎಂದು ಹೇಳಿದರು.

ಸರ್ವಪಕ್ಷ ಸಭೆಯಲ್ಲಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್​, ನರೇಂದ್ರ ಸಿಂಗ್ ತೋಮರ್, ಎನ್​ಸಿಪಿಯ ಶರದ್ ಪವಾರ್, ಸತೀಶ್​ ಚಂದ್ರ, ರಾಷ್ಟ್ರೀಯ ಜನತಾ ದಳದ ಜೆ.ಪಿ.ಯಾದವ್, ಸಿಪಿಐನ ಡಿ.ರಾಜಾ, ಸಿಪಿಎಂನ ಟಿ.ಕೆ.ರಂಗರಾಜನ್​, ಕಾಂಗ್ರೆಸ್​ನ ಕೆ.ವೇಣುಗೋಪಾಲ್, ಗುಲಾಮ್ ನಬಿ ಆಜಾದ್​, ಆನಂದ್​ ಶರ್ಮಾ, ಜ್ಯೋತಿರಾದಿತ್ಯ ಸಿಂಧ್ಯಾ, ಟಿಡಿಪಿಯ ರಾಮಮೋಹನ್​ ನಾಯ್ಡು, ಟಿಆರ್​ಎಸ್​ನ ಜೀತೇಂದ್ರ ರೆಡ್ಡಿ, ಜಮ್ಮು-ಕಾಶ್ಮೀರ ನ್ಯಾಷನಲ್​ ಕಾನ್ಫರೆನ್ಸ್​ನ ಫಾರೂಖ್​ ಅಬ್ದುಲ್ಲಾ, ಲೋಕ ಜನಶಕ್ತಿ ಪಕ್ಷದ ರಾಮ್​ ವಿಲಾಸ್​ ಪಾಸ್ವಾನ್, ಶಿರೋಮಣಿ ಅಕಾಲಿ ದಳದ ಚಂದು ಮಾಜ್ರ, ಆಮ್​ ಆದ್ಮಿ ಪಕ್ಷದ ಸಂಜಯ್​ ಸಿಂಗ್​, ಶಿವಸೇನೆಯ ಸಂಜಯ್​ ಟಾಟ್​, ರಾಷ್ಟ್ರೀಯ ಲೋಕ ಸಮತಾ ಪಕ್ಷದ ಉಪೇಂದ್ರ ಕುಶ್ವಾಸ್​, ಆಲ್​ ಇಂಡಿಯಾ ತೃಣಮೂಲ ಕಾಂಗ್ರೆಸ್​ನ ದೀರಕ್​ ಒ’ ಬ್ರಿಯಾನ್ ಹಾಗೂ ಸುದೀಪ್​ ಬಂದೋಪಾಧ್ಯಾಯ ಪಾಲ್ಗೊಂಡಿದ್ದರು.

Comments are closed.