ರಾಷ್ಟ್ರೀಯ

ಉಗ್ರ ದಾಳಿಯಾಗುವ ಕೆಲ ಕ್ಷಣಗಳ ಮೊದಲು ಸ್ಥಳದಲ್ಲಿದ್ದ ಶಿವಮೊಗ್ಗದ ಯೋಧ ಹೇಳುವುದೇನು?

Pinterest LinkedIn Tumblr
Indian paramilitary soldiersgar. 

ಬೆಂಗಳೂರು : ಉಗ್ರರ ದಾಳಿಗೆ ತುತ್ತಾದ ಪುಲ್ವಾಮಾ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವುದು ಸಾಮಾನ್ಯದ ಕೆಲಸವಲ್ಲ. ಉಗ್ರರ ಚಟುವಟಿಕೆಗಳು, ಗಲಭೆಗಳು, ಗುಂಡಿನ ಶಬ್ಧ, ಕೊರೆಯುವ ಚಳಿಯಂತಹ ವಾತಾವರಣದ ನಡುವೆ ಕೆಲಸ ಮಾಡುವುದು ಸವಾಲಿನ ಕೆಲಸ. ಇಂತಹ ವಾತಾವರಣದಲ್ಲಿ ದೇಶಕ್ಕಾಗಿ ದುಡಿಯುವ ಯೋಧರ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ಕಣ್ಣಾರೆ ಕಂಡ ಶಿವಮೊಗ್ಗದ ಯೋಧನೊಬ್ಬ ಅಲ್ಲಿನ ಪರಿಸ್ಥಿತಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ನಿನ್ನೆ ನಡೆದ ದಾಳಿ ನಡೆದ ಪ್ರದೇಶದಿಂದ ಕೇವಲ 7 ಕಿ.ಮೀ ದೂರದಲ್ಲಿದ್ದ ಶಿವಮೊಗ್ಗ ಮೂಲದ ಸಿಆರ್​ಪಿಎಫ್ ಯೋಧ ಘಟನೆ ನಡೆಯುವುದಕ್ಕೆ ಮುನ್ನ ಅಲ್ಲಿನ ಪರಿಸ್ಥಿತಿ ಹೇಗಿತ್ತು. ಏನಾಯಿತು ಎಂಬುದರ ಬಗ್ಗೆ ದೂರವಾಣಿಯ ಮೂಲಕ ನಿರೂಪಣೆ ಮಾಡಿದ್ದಾರೆ. ಅದರ ವಿವರ ಇಲ್ಲಿದೆ

ಸಾರ್ವಜನಿಕರನ್ನು ನಂಬುವುದು ಸಾಧ್ಯವಿಲ್ಲ

“ಈ ಪ್ರದೇಶದಲ್ಲಿ ರಸ್ತೆಯಲ್ಲಿ ಹೋಗುತ್ತಿರುವ ಸಾರ್ವಜನಿಕರನ್ನು ನಂಬಲಿಕ್ಕೆ ಸಾಧ್ಯವಿಲ್ಲ. ಇವರು ಒಂದು ರೀತಿಯಲ್ಲಿ ಉಗ್ರಗಾಮಿಗಳು. ದಾಳಿ ನಡೆದ ದಿನ ಬೆಳಿಗ್ಗೆ ನಾವು ಡ್ಯೂಟಿ ಮುಗಿಸಿಕೊಂಡು ವಾಪಸ್​ ನಮ್ಮ ಕ್ಯಾಂಪ್​ ಗೆ ಬಂದಿದ್ದೇವೆ. ನಾವು ಬಂದ ನಂತರ ಈ ಘಟನೆ ನಡೆದಿದೆ.. ಪುಲ್ವಾಮಾ ಜಿಲ್ಲೆ ಕಡಾಲ್ ಎನ್ನವ ಪ್ರದೇಶದಲ್ಲಿ ನಾವೆಲ್ಲಾ ಇದ್ದೇವೆ ಎಂದು ಮಾತು ಮುಂದುವರೆಸಿದರು”.

ಉಗ್ರರು ಕಾರಿನಲ್ಲಿ ಮೊದಲೇ ಆರ್​ ಡಿ ಎಕ್ಸ್​ ಬಾಂಬ್​ನ್ನು ಇಟ್ಟಿದ್ದರು ಎನ್ನಲಾಗಿದೆ. ಕೆಲ ಸೇನಾ ವಾಹನಗಳು ಸಾಗುತ್ತಿರುವಾಗ ಮಧ್ಯದಲ್ಲಿ ಬರುತ್ತಿದ್ದ ಒಂದು ವಾಹನಕ್ಕೆ ಉಗ್ರನು ಬಾಂಬ್​ ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿದ ಎಂದಿದ್ದಾರೆ.

ದೂರ ಸಾಗುವಾಗ ವಾಹನಗಳನ್ನು ಹೆಚ್ಚು ಚೆಕ್ ಮಾಡುವುದಿಲ್ಲ

ಇಲ್ಲಿ ವಾರಕ್ಕೆ ಎರಡು ಮೂರು ಎನ್​ಕೌಂಟರ್​ಗಳು ನಡೆಯುತ್ತಿರುತ್ತವೆ. ಪ್ರತಿ ದಿನ ರೋಟಿನ್ ಚೆಕ್​ ಆಪ್ ಮಾಡಲಾಗುತ್ತದೆ. ದೂರ ಸಾಗುವಾಗ ವಾಹನಗಳನ್ನು ಹೆಚ್ಚು ಚೆಕ್ ಮಾಡಲು ಆಗುವುದಿಲ್ಲ ಯಾಕೆಂದರೆ, ಜಾರ್ಖಂಡ್​, ಛತ್ತಿಸ್​ಗಡ್, ಜಮ್ಮು ಕಾಶ್ಮೀರ್ ರಾಜ್ಯಗಳು ತುಂಬಾ ಅಪಾಯಕಾರಿ. ಕೆಲವು ಬಾರಿ ಇಳಿದು ನೋಡಿದ ಸೈನಿಕರಲ್ಲಿ ಬದುಕುಳಿದವರು ತೀರಾ ಕಡಿಮೆ ಎಂದು ಹೇಳುತ್ತಾರೆ.

ಈ ದಾಳಿಯ ಮುಖ್ಯ ಉದ್ದೇಶ ಜಮ್ಮು ಕಾಶ್ಮೀರಕ್ಕೆ ವಿಶೇಷವಾಗಿ ನೀಡಲಾಗಿರುವ ಸ್ಥಾನಮಾನ 370 ನ್ನು ತೆಗೆಯಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಕ್ಕಾಗಿ ಇಲ್ಲಿ ದಾಳಿಗಳು ನಡೆಯುತ್ತಿರುತ್ತವೆ ಎನ್ನವುದನ್ನು ಇಲ್ಲಿಯ ಜನರು ಹೇಳುತ್ತಾರೆ.. ಈ ಹಿನ್ನೆಲೆಯಲ್ಲಿಯೇ ಸರ್ಕಾರ ಇಲ್ಲಿ ಹೆಚ್ಚು ಬಂದೋಬಸ್ತನ್ನು ಕೈಗೊಂಡಿದೆ. ಚುನಾವಣೆಯ ಉದ್ದೇಶದಿಂದ ದಾಳಿ ನಡೆದಿದೆ ಎಂಬ ಇನ್ನೊಂದು ವಾದ ಕೂಡ ನಡೆಯುತ್ತಲೇ ಇದೆ.

ಎಲ್ಲಾ ವಾಹನಗಳು ಒಟ್ಟಾಗಿ ಸಂಚರಿಸುತ್ತವೆ

ಈ ರೀತಿ ಘಟನೆ ಆಗುವುದರಿಂದ ಇಲ್ಲಿ ವಾಹನಗಳು ಒಂದೊಂದೇ ಸಂಚರಿಸುವುದು ಇಲ್ಲ. ವಾಹನ ರಸ್ತೆಗೆ ಇಳಿಯಿತು ಎಂದರೆ ಕನಿಷ್ಠ ಐದಾರು ವಾಹನ ಒಟ್ಟಿಗೆ ಸಾಗುತ್ತದೆ. ಸೇನಾ ವಾಹನ ಕೂಡ ಕೆಲಸಕ್ಕೆ ಹೋಗಬೇಕಾದರೂ ಐದು ಆರು ಬಸ್​ಗಳು ಒಟ್ಟಾಗಿಯೇ ಹೋಗುತ್ತವೆ. ಇಲ್ಲಿ ಖಾಸಗಿ ವಾಹನಗಳಲ್ಲಿ ಹೋದರೆ ಅಪಹರಣ ಮಾಡಿ ಸಾಯಿಸುತ್ತಾರೆ.

ಇಲ್ಲಿ ಜನಸಾಮಾನ್ಯರನ್ನು ನಂಬುವುದೇ ಕಷ್ಟ. ಬೇರೆ ಪ್ರದೇಶದವರ ಬಗ್ಗೆ ನಮಗೆ ಒಂದು ರೀತಿ ಕನಿಕರ ಇರುತ್ತದೆ. ಆದರೆ ಇಲ್ಲಿ ಹಾಗಿಲ್ಲ, ಇಲ್ಲಿ ಕಾಲೇಜು ಹುಡುಗಿಯರು ಕೂಡ ಕಲ್ಲು ಎಸೆಯುತ್ತಾರೆ. ಇವರು ಪ್ರತೇಕ ದೇಶ ಬೇಕು ಎಂದು ಹೋರಾಟ ಮಾಡುತ್ತಾರೆ. ಇಲ್ಲಿ ಇರುವ ಜನರಿಗೆ ಉಗ್ರ ಸಂಘಟನೆಗಳು ಜಾತಿ ಧರ್ಮ ಪ್ರಚೋದನೆ ಮಾಡುತ್ತವೆ. ನಮ್ಮವರನ್ನೇ ನಮ್ಮ ವಿರುದ್ಧ ಎತ್ತಿಕಟ್ಟಿ ಸಾಯಿಸುತ್ತಾರೆ ಎನ್ನುತ್ತಾ ಅಲ್ಲಿನ ಪರಿಸ್ಥಿತಿ ವಿವರಿಸುತ್ತಾರೆ.

ಇಲ್ಲಿನ ಬಹುದೊಡ್ಡ ಸಮಸ್ಯೆ ಎಂದರೆ, ರಾಜಕಾರಣಿಗಳು ಸರಿಯಾದ ನಿರ್ದೇಶನ ಮಾಡುವುದಿಲ್ಲ. 370ನೇ ವಿಧಿ ತೆರವುಗೊಳಿಸಿದರೆ ಅಧಿಕಾರ ನಮ್ಮ ಕೈ ತಪ್ಪುತ್ತದೆ ಎಂಬ ಭಯ ಅವರಿಗೆ ಎಂದರು.

Comments are closed.