ರಾಷ್ಟ್ರೀಯ

ಕೇಂದ್ರ ಬಜೆಟ್ 2019: ರೈತರಿಗೆ ಬಂಪರ್ ಕೊಡುಗೆ ! ಯೋಜನೆಗಳ ವಿವರ ಹೀಗಿದೆ…..

Pinterest LinkedIn Tumblr

ನವದೆಹಲಿ: 2019-20 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವ ಕೇಂದ್ರ ಸರ್ಕಾರ ರೈತರಿಗೆ ಬಂಪರ್ ಕೊಡುಗೆ ನೀಡಿದೆ.

ಸಣ್ಣ ಹಿಡುವಳಿದಾರರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ ಪಶುಸಂಗೋಪನೆ, ಮೀನುಗಾರಿಕೆ ಕ್ಷೇತ್ರಕ್ಕೆ ಭರಪೂರ ಯೋಜನೆಗಳನ್ನು ಘೋಷಿಸಲಾಗಿದ್ದು, ಗೋವುಗಳ ರಕ್ಷಣೆಗೆ ರಾಷ್ಟ್ರೀಯ ಕಮಾಧೇನು ಯೋಜನೆ ಘೋಷಣೆ ಮಾಡಲಾಗಿದೆ. ಕೃಷಿ ಕ್ಷೇತ್ರಕ್ಕೆ ಮೋದಿ ಬಜೆಟ್ ನಲ್ಲಿ ಘೋಷಣೆಯಾದ ಅನುದಾನ, ಯೋಜನೆಗಳ ವಿವರ ಹೀಗಿದೆ.

ಏನಿದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ
2 ಹೆಕ್ಟೇರ್ ಹಾಗೂ ಅದಕ್ಕಿಂತ ಕಡಿಮೆ ಇರುವ ಸಣ್ಣ ಹಿಡುವಳಿದಾರರಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿ (ತಿಂಗಳಿಗೆ 500 ರೂ) ರೈತರ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಿದೆ.
2018 ರ ಡಿಸೆಂಬರ್ ನಿಂದಲೇ ಜಾರಿ ಪೂರ್ವಾನ್ವಯ
ಪಶುಪಾಲನೆ ಮೀನುಗಾರಿಕೆ ಯೋಜನೆಗೆ 750 ಕೋಟಿ
ಪ್ರತಿ ಬಾರಿ 2 ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿ ಹಣ ವರ್ಗಾವಣೆ
ಸಕಾಲದಲ್ಲಿ ಸಾಲ ಪಾವತಿ ಮಾಡುವ ರೈತರಿಗೆ ಶೇ.3 ರಷ್ಟು ಬಡ್ಡಿ ವಿನಾಯಿತಿ.
ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಶೇ.2ರಷ್ಟು ಬಡ್ಡಿ ರಿಯಾಯಿತಿ. ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ.3ರಷ್ಟು ಬಡ್ಡಿ ವಿನಾಯಿತಿ.
ಈ ಯೋಜನೆಯಿಂದ 12 ಕೋಟಿ ರೈತರಿಗೆ ಲಾಭ ಯೋಜನೆಗಾಗಿ 75,000 ರೂ ಮೀಸಲು

Comments are closed.