ರಾಷ್ಟ್ರೀಯ

ದಿಢೀರ್ ನಿರ್ಧಾರದಿಂದ ಪ್ರಿಯಾಂಕಾ ರಾಜಕೀಯ ಪ್ರವೇಶ ಮಾಡಿಲ್ಲ: ರಾಹುಲ್

Pinterest LinkedIn Tumblr


ಭುವನೇಶ್ವರ್: ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ ದಿಢೀರ್ ನಿರ್ಧಾರವಲ್ಲ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ತಮ್ಮ ಸಹೋದರಿ ಮಕ್ಕಳು ದೊಡ್ಡವರಾದ ಮೇಲೆ ರಾಜಕೀಯಕ್ಕೆ ಬರಲು ನಿರ್ಧರಿಸಿದ್ದರು ಎಂದು ಶುಕ್ರವಾರ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸುವ ಕುರಿತು ಹಲವು ವರ್ಷಗಳ ಹಿಂದೆಯೇ ನಿರ್ಧರಿಸಲಾಗಿದೆ. ಆದರೆ ಮಕ್ಕಳಿಗಾಗಿ ಅವರು ವಿಳಂಬ ಮಾಡುತ್ತಿದ್ದರು ಎಂದು ರಾಹುಲ್ ಗಾಂಧಿ ಅವರು ಇಂದು ಭುವನೇಶ್ವರ್ ದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಈಗ ಅವರ ಮಕ್ಕಳು ದೊಡ್ಡವರಾಗಿದ್ದಾರೆ. ಒಬ್ಬ ಮಗ ಈಗಾಗಲೇ ವಿಶ್ವವಿದ್ಯಾಲಯ ಪ್ರವೇಶಿಸಿದ್ದಾರೆ. ಇನ್ನೊಬ್ಬರು ಸಹ ಬೆಳೆದು ದೊಡ್ಡವರಾಗಿದ್ದಾರೆ. ಹೀಗಾಗಿ ಈಗ ಸಕ್ರಿಯೆ ರಾಜಕೀಯಕ್ಕೆ ಬಂದಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಪ್ರಿಯಾಂಕಾ ರಾಜಕೀಯ ಪ್ರವೇಶ ಕುರಿತು ಕಾಂಗ್ರೆಸ್​ ಹಲವು ವರ್ಷಗಳಿಂದ ಚಿಂತನೆ ನಡೆಸಿತು. ನಾನು ಕೂಡ ಪ್ರಿಯಾಂಕಾಗೆ ರಾಜಕೀಯಕ್ಕೆ ಬರುವಂತೆ ಕೇಳುತ್ತಲೆ ಇದ್ದೆ. ಪ್ರಿಯಾಂಕಾ ಹಾಗೂ ನನ್ನ ಆಲೋಚನೆಗಳು ಶೇ.80ರಷ್ಟು ಸಾಮ್ಯಾತೆ ಹೊಂದಿದೆ, ಆಕೆ ದಿಡೀರ್​ ರಾಜಕೀಯಕ್ಕೆ ಬರಬೇಕು ಎಂದು ಬಯಸಿದ್ದಲ್ಲ. ಈ ಬಗ್ಗೆ ಅನೇಕ ವರ್ಷಗಳಿಂದ ಮಾತುಕತೆ ನಡೆದಿದ್ದವು. ರಾಜಕೀಯದಲ್ಲಿ ಅನೇಕ ಸಲಹೆಗಳನ್ನು ನೀಡುತ್ತ ಪ್ರಚಾರದಲ್ಲಿ ಅವರು ಭಾಗಿಯಾಗಿದ್ದರು. ಅವರು ರಾಜಕೀಯ ಪ್ರವೇಶವನ್ನು ಎಲ್ಲರೂ ಸ್ವಾಗತಿಸಿದ್ದಾರೆ ಎಂದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಮೋದಿ ಮತ್ತು ಪಟ್ನಾಯಕ್ ಮಧ್ಯ ನಂಟು ಇದೆ. ಈ ಇಬ್ಬರೂ ಅಧಿಕಾರಶಾಹಿ, ಸರ್ವಾಧಿಕಾರ ಮತ್ತು ಅಧಿಕಾರ ಕೇಂದ್ರೀಕರಣವನ್ನು ಬಲವಾಗಿ ನಂಬಿದ್ದಾರೆ ಎಂದು ಆರೋಪಿಸಿದರು.
ಒಡಿಶಾದಲ್ಲಿ ಬಿಜೆಡಿಯ ಅಭಿವೃದ್ಧಿ ಮಂತ್ರ ಬಿಜೆಪಿಯ ಗುಜರಾತ್ ಮಾದರಿಯನ್ನು ಹೊಲುತ್ತದೆ. ಪಟ್ನಾಯಕ್ ಮೋದಿಯ ಮತ್ತೊಂದು ಆವೃತ್ತಿ ಅಷ್ಟೇ. ಒಡಿಶಾವನ್ನು ಸರ್ವಾಧಿಕಾರಿಯಿಂದ ಕಿತ್ತಿಕೊಳ್ಳುವುದು ನನ್ನ ಗುರಿ ಎಂದರು ರಾಹುಲ್ ಹೇಳಿದ್ದಾರೆ.

Comments are closed.