ರಾಷ್ಟ್ರೀಯ

ತಮಿಳುನಾಡಿನ ಜನತೆ ರಾಹುಲ್’ರನ್ನು ಪ್ರಧಾನಿಯಾಗಿ ಕಾಣಲು ಬಯಸುತ್ತಿದ್ದಾರೆ: ಡಿಎಂಕೆ ಮುಖ್ಯಸ್ಥ ಸ್ಟಾಲಿನ್

Pinterest LinkedIn Tumblr

ನವದೆಹಲಿ: ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿ ಅವರು ಪ್ರಧಾನಿ ಆಗಬೇಕೆಂಬುದು ನಮ್ಮೆಲ್ಲರ ಆಶಯ. ತಮಿಳುನಾಡಿನ ಜನತೆ ಅವರೇ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ. ಮತ್ತೊಮ್ಮೆ ಹೇಳುತ್ತಿದ್ದೇನೆ ದೇಶವನ್ನು ಫ್ಯಾಸಿಸ್ಟ್​​ ಬಿಜೆಪಿಯಿಂದ ರಕ್ಷಿಸಲು ಯುಪಿಎ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ಹಾಗೆಯೇ ದೇಶದ ಪ್ರಧಾನಿಯಾಗಿ ರಾಹುಲ್​​​ರನ್ನು ನಾವು ಗೆಲ್ಲಿಸಬೇಕಿದೆ ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ತಿಳಿಸಿದ್ದಾರೆ.

ರಾಹುಲ್​​ ಗಾಂಧಿಯವರು ಪ್ರಧಾನಿಯಾಗುವುದರಲ್ಲಿ ತಪ್ಪೇನಿದೆ. ತಮಿಳುನಾಡಿನ ಜನತೆ ಅವರನ್ನು ಪ್ರಧಾನಿಯಾಗಿ ಕಾಣಲು ಬಯಸುತ್ತಿದ್ದಾರೆ. ನಿನ್ನೆ ನಡೆದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಾದೇಶಿಕ ಪಕ್ಷಗಳು ಶಕ್ತಿ ಪ್ರದರ್ಶನ ಮಾಡಿದೆವು. ಪಶ್ಚಿಮ ಬಂಗಾಳದ ಜನತೆ ಪ್ರಧಾನಿ ಯಾರಗಬೇಕೆಂಬುದನ್ನು ಚುನಾವಣೆ ಬಳಿಕ ನಿರ್ಧರಿಸಲು ಮುಂದಾಗಿದ್ದಾರೆ ಎಂದರು.

ಇನ್ನು ಪ್ರಧಾನಿ ವಿಷಯ ಆಯಾ ರಾಜ್ಯದ ಜನತೆಗೆ ಬಿಟ್ಟ ವಿಚಾರ. ಸಹಜವಾಗಿಯೇ ಎಲ್ಲರ ನಡುವೇ ಭಿನ್ನಾಭಿಪ್ರಾಯ ಇರುತ್ತದೆ. ದೇಶದಲ್ಲಿ ಭಿನ್ನತೆ ಇದ್ದರೆ ಮಾತ್ರ ಪ್ರಜಾಪ್ರಭುತ್ವ ಎಂದು ಕರೆಯಲಾಗುತ್ತದೆ. ಹೀಗಾಗಿ ನಮ್ಮ ರಾಜ್ಯದ ಅಭಿಪ್ರಾಯ ಮಾತ್ರ ರಾಹುಲ್​​ ಪ್ರಧಾನಿಯಾಗಬೇಕೆಂಬುದು. ಹೀಗಾಗಿ ದೇಶವನ್ನು ಉಳಿಸುವುದಕ್ಕಾಗಿ ಎಲ್ಲಾ ವಿರೋಧ ಪಕ್ಷಗಳೂ ಒಗ್ಗೂಡಿ ರಾಹುಲ್ ಗಾಂಧಿಯವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.

ಈ ಹಿಂದೆಯೂ ನರೇಂದ್ರ ಮೋದಿಯವರನ್ನು ಸೋಲಿಸಲು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್​ ಪ್ರಸ್ತಾಪ ಮಾಡಿದ್ದರು. ಚೆನ್ನೈನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್​ ಸೇರಿದಂತೆ ಡಿಎಂಕೆ ಒಗಟ್ಟಿನ ಶಕ್ತಿ ಪ್ರದರ್ಶನ ಮಾಡಿದ್ದವು. ಈ ವೇಳೆ ದ್ರಾವಿಡ ಚಳುವಳಿಯ ಕೊನೆಯ ಕೊಂಡಿ, ಮಾಜಿ ಸಿಎಂ ಕರುಣಾನಿಧಿಯವರ ಆಶಯದಂತೆಯೇ ಬಿಜೆಪಿಯೇತರ ಪಕ್ಷಗಳು ಪ್ರಧಾನಿ ಮೋದಿಯನ್ನು ಸೋಲಿಸುತ್ತೇವೆಂದು ಶಪಥಗೈದಿದ್ದರು.

ಪ್ರಧಾನಿ ನರೇಂದ್ರ ಮೋದಿಯವರ ಐದು ವರ್ಷಗಳ ಆಡಳಿತದಲ್ಲಿ ಭಾರತ 15 ವರ್ಷಗಳ ಹಿಂದೆ ಹೋಗಿದೆ. ನಾವು ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿಸಿದರೇ, ಭಾರತ ಅಭಿವೃದ್ದಿಯಲ್ಲಿ 50 ವರ್ಷ ಹಿಂದೆ ಹೋಗುವ ಸಾಧ್ಯತೆಯಿದೆ. ನರೇಂದ್ರ ಮೋದಿ ಅವರು ರಾಜನಂತೆಯೇ ವರ್ತಿಸುತ್ತಿದ್ದಾರೆ. ಇಲ್ಲಿ ಸರ್ವಾಧಿಕಾರ ನಡೆಸಲಾಗುತ್ತಿದೆ. ಹೀಗಾಗಿಯೇ ಕೇಂದ್ರ ವಿರೋಧ ಪಕ್ಷಗಳು ಒಗ್ಗಟ್ಟಾಗಿದ್ದೇವೆ. ಬಿಜೆಪಿಯನ್ನು ಸೋಲಿಸಿ ಪ್ರಜಾಪ್ರಭುತ್ವವನ್ನು ಕಾಪಾಡುತ್ತೇವೆ ಎಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್​ ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಮಿಳುನಾಡಿನಿಂದ ನಾವು ರಾಹುಲ್​​ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಗೋಷಿಸುತ್ತೇವೆ. ಈ ಬಾರಿ ಇಲ್ಲಿಂದಲೇ ಕಾಂಗ್ರೆಸ್​ ಅಧ್ಯಕ್ಷರನ್ನು ದೆಹಲಿಗೆ ಕಳಿಸುತ್ತೇವೆ. ಭಾರತದ ರಾಜಧಾನಿಯಲ್ಲಿರು ಫ್ಯಾಸಿಸ್ಟ್​​ ಮೋದಿಯನ್ನು ಸೋಲಿಸಲು ರಾಹುಲ್​​ ಗಾಂಧಿಯವರೇ ಪ್ರಧಾನಿ ಆಗಬೇಕಿದೆ. ನಾವು ಬಿಜೆಪಿಯನ್ನು ಸೋಲಿಸಿಯೇ ತೀರುತ್ತೇವೆ. ನಮ್ಮ ದೇಶದ ಸಂವಿಧಾನದ ಸ್ವಾಯತತ್ತೆಯನ್ನು ಉಳಿಸುತ್ತೇವೆ ಎಂದರು.

Comments are closed.