ರಾಷ್ಟ್ರೀಯ

ಬಿಜೆಪಿ ಮುಖಂಡ ದಿಢೀರ್ ರಾಜೀನಾಮೆ : ಶೀಘ್ರ ಕಾಂಗ್ರೆಸ್ ಸೇರ್ಪಡೆ..?

Pinterest LinkedIn Tumblr


ಪಾಟ್ನಾ: ಬಿಜೆಪಿ ಮಾಜಿ ಸಂಸದ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಬಿಹಾರದ ಪುರ್ನಿಯಾ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಉದಯ್ ಸಿಂಗ್ ಶುಕ್ರವಾರ ಬಿಜೆಪಿ ತೊರೆಯುತ್ತಿದ್ದು, ಇದಕ್ಕೆ ಪಕ್ಷದ ನಾಯಕರ ಮೇಲಿನ ಅಸಮಾಧಾನವೇ ಕಾರಣ ಎಂದು ಹೇಳಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಅಧಿಕಾರ ಹಂಚಿಕೆ ಮಾಡಿಕೊಂಡಿರುವುದೇ ತಮ್ಮ ಅಸಮಾಧಾನಕ್ಕೆ ಕಾರಣ ಎಂದಿದ್ದಾರೆ.

ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಒಳ್ಳೆಯ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಆದ್ದರಿಂದ ಬಿಜೆಪಿಯೂ ಕೂಡ ಇಲ್ಲಿ ಸೇರಿ ಸಂಪೂರ್ಣ ಸ್ಥಿತಿ ಹದಗೆಟ್ಟಿದೆ ಎಂದು ಸಿಂಗ್ ಆರೋಪಿಸಿದ್ದಾರೆ.

ಅಲ್ಲದೇ ಲೋಕಸಭಾ ಸೀಟು ಹಂಚಿಕೆ ಬಗ್ಗೆಯೂ ಕೂಡ ಅಸಮಾಧಾನಗೊಂಡಿದ್ದು, ತಮ್ಮ ಮುಂದಿನ ನಡೆ ಬಗ್ಗೆ ಯಾವುದೇ ರೀತಿಯ ಸುಳಿವನ್ನೂ ಕೂಡ ನೀಡಿಲ್ಲ.

ಆದರೆ ಕಾಂಗ್ರೆಸ್ ಬಗ್ಗೆ ಅತ್ಯಂತ ಮೃದು ಮನಸ್ಥಿತಿ ಹೊಂದಿದ್ದು, ಮಹಾಘಟ ಬಂಧನ್ ಸೇರುವ ಲಕ್ಷಣಗಳು ಕಂಡು ಬಂದಿವೆ.

ಅಲ್ಲದೇ ಇದೇ ವೇಳೆ ಸಿಂಗ್ ರಾಹುಲ್ ಗಾಂಧಿ ಅವರನ್ನು ಹೊಗಳಿದ್ದು, ದಿನದಿಂದ ದಿನಕ್ಕೆ ರಾಹುಲ್ ಪ್ರಸಿದ್ಧಿ ಹೆಚ್ಚುತ್ತಲೇ ಇದೆ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಎಂಬ ಹೇಳಿಕೆಯನ್ನೂ ಕೂಡ ತಾವು ಒಪ್ಪುವುದಿಲ್ಲ ಎಂದಿದ್ದಾರೆ.

Comments are closed.