ರಾಷ್ಟ್ರೀಯ

ಆಸ್ಪತ್ರೆಯ ಆಪರೇಷನ್​ ಥಿಯೇಟರ್​ನಲ್ಲಿ ನರ್ಸ್​ಗೆ ಚುಂಬಿಸಿದ ಸರ್ಜನ್ ! ಮುಂದೆ ಏನಾಯಿತು ನೋಡಿ…

Pinterest LinkedIn Tumblr

ಉಜ್ಜಯಿನಿ: ಆಪರೇಷನ್​ ಥಿಯೇಟರ್​ನಲ್ಲಿ ನರ್ಸ್​ಗೆ ಚುಂಬಿಸಿದ ಸಿವಿಲ್​ ಸರ್ಜನ್​ ಈಗ ತಮ್ಮ ಹುದ್ದೆಯನ್ನು ಕಳೆದುಕೊಂಡಿದ್ದಾರೆ.

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲಾಸ್ಪತ್ರೆಯ 49 ವರ್ಷದ ಸಿವಿಲ್​ ಸರ್ಜನ್​ಗೆ ಈಗ ಸಂಕಷ್ಟ ಎದುರಾಗಿದೆ. ಆಪರೇಶನ್​ ಥಿಯೇಟರ್​ನಲ್ಲಿ ನರ್ಸ್​ಗೆ ಚುಂಬಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅದು ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಆ ಘಟನೆ ನಡೆದಿದ್ದು ಯಾವಾಗ ಎಂದು ತಿಳಿದಿಲ್ಲ. ಆದರೆ, ವಿಡಿಯೋ ನೋಡಿದ ಬಳಿಕ ಕೂಡಲೇ ಸರ್ಜನ್​ನನ್ನು ವಜಾಗೊಳಿಸಲಾಗಿದೆ. ಹಾಗೇ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗೆ ಘಟನೆಯ ಬಗ್ಗೆ ಸ್ಪಷ್ಟನೆ ಕೇಳಿ ನೋಟಿಸ್​ ನೀಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಸದ್ಯ ಹುದ್ದೆಯಿಂದ ಕೆಳಗೆ ಇಳಿದಿರುವ ಸರ್ಜನ್​ ಎರಡು ದಿನಗಳಿಂದ ರಜೆಯಲ್ಲಿದ್ದು, ಅವರ ಸ್ಥಾನಕ್ಕೆ ಈಗಾಗಲೇ ಡಾ. ಪಿ.ಎನ್​.ವರ್ಮಾ ಅವರನ್ನು ನೇಮಕ ಮಾಡಲಾಗಿದೆ. ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಹೇಳಿದ್ದಾರೆ. ತಮಗೆ ಆಸ್ಪತ್ರೆಯಿಂದ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.