ರಾಷ್ಟ್ರೀಯ

ಗಡ್ಕರಿ ಉಪಪ್ರಧಾನಿ, ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿ ಅಧ್ಯಕ್ಷರಾಗಲಿ-ಸಂಘ ಪ್ರಿಯಾ ಗೌತಮ್

Pinterest LinkedIn Tumblr


ಲಕ್ನೋ: ಬಿಜೆಪಿಯಲ್ಲಿ ಈಗ ಆಂತರಿಕ ಕಲಹ ಹೆಚ್ಚಾಗಿದ್ದು ಇದಕ್ಕೆ ಪೂರಕ ಎನ್ನುವಂತೆ ಹಿರಿಯ ಬಿಜೆಪಿ ನಾಯಕ ಸಂಘಪ್ರಿಯಾ ಗೌತಮ್ ನೀಡಿರುವ ಹೇಳಿಕೆ. ಶನಿವಾರದಂದು ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಉಪಪ್ರಧಾನಿಯನ್ನಾಗಿ ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾನ್ ರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ರಾಜಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯನ್ನು ಅನುಭವಿಸುತ್ತಿರುವುದರಿಂದ ಅದನ್ನು ನಿಗಿಸುವ ವಿಚಾರವಾಗಿ ಅಮಿತ್ ಷಾ ಅವರು ಶ್ರಮಿಸಬೇಕು ಮತ್ತು ಅಧ್ಯಕ್ಷ ಪದವಿಯನ್ನು ಚೌಹಾನ್ ಅವರಿಗೆ ಹಸ್ತಾಂತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇನ್ನು ಮುಂದುವರೆದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕೆಂದಿದ್ದಾರೆ.ಇನ್ನು ಯೋಗಿ ಆದಿತ್ಯನಾಥ್ ರನ್ನು ಧಾರ್ಮಿಕ ಕಾರ್ಯಗಳಿಗಾಗಿ ಕಳಿಸಬೇಕೆಂದು ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಮ್ಯಾಜಿಕ್ ವರ್ಕೌಟ್ ಆಗುವ ಕುರಿತು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.ಒಂದು ವೇಳೆ ಸದ್ಯ ಚುನಾವಣೆ ನಡೆದರೆ ಕೆಲವು ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಸೋಲನ್ನು ಅನುಭವಿಸಲಿದೆ ಎಂದು ತಿಳಿಸಿದ್ದಾರೆ.88 ವರ್ಷದ ಸಂಘಪ್ರಿಯಾ ಗೌತಮ್ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Comments are closed.