ರಾಷ್ಟ್ರೀಯ

ಹಲ್ಲು ಉಜ್ಜುವಾಗ ಟೂತ್​​ಬ್ರಶ್​ ನುಂಗಿದ ಭೂಪ ! ಯಾರಿಗೂ ಹೇಳಿಲಿಲ್ಲ…ಕೊನೆಗೆ ಗೊತ್ತಾಗಿದ್ದು ಹೇಗೆ ಗೊತ್ತಾ…?

Pinterest LinkedIn Tumblr

ನವದೆಹಲಿ: ಕೆಲವೊಮ್ಮೆ ಸಣ್ಣಪುಟ್ಟ ನಿರ್ಲಕ್ಷ್ಯಗಳೂ ಜೀವಕ್ಕೇ ಕುತ್ತು ತಂದುಬಿಡುತ್ತವೆ. ಹಣೆಬರಹ ಸರಿಯಿಲ್ಲದಿದ್ದರೆ ಕುತ್ತಿಗೆಗೆ ಹಾಕಿಕೊಳ್ಳುವ ಟೈ ಕೂಡ ಉರುಳಾಗಿ ಪರಿಣಮಿಸುತ್ತದೆ. ದೆಹಲಿಯ ಈ ಭೂಪನದ್ದೂ ಅದೇ ಕತೆ.

ದೆಹಲಿಯ ಚಳಿಯಲ್ಲಿ ಬೆಳಗ್ಗೆ ಏಳುವುದೇ ದೊಡ್ಡ ಸಾಹಸ. ನಿದ್ದೆಗಣ್ಣಿನಲ್ಲಿ ಎದ್ದು, ಮನಸಿಲ್ಲದಿದ್ದರೂ ಬ್ರಶ್​ ಮಾಡಿ, ಸ್ನಾನ ಮಾಡಬೇಕಾದ ಅನಿವಾರ್ಯತೆ. ದೆಹಲಿಯ ಸೀಮಾಪುರಿಯಲ್ಲಿ ನೆಲೆಸಿರುವ ಅವಿದ್​ ಎಂಬ ವ್ಯಕ್ತಿ ಬೆಳಗ್ಗೆ ಬ್ರಶ್​ ಮಾಡಿದ ನಂತರ ಅದರ ಹಿಂಭಾಗದಿಂದ ನಾಲಿಗೆಯನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದ. ಅದೇನಾಯಿತೋ ಗೊತ್ತಿಲ್ಲ.. ಇದ್ದಕ್ಕಿದ್ದಂತೆ ಗಂಟಲೊಳಗೆ ಇಳಿದ ಬ್ರಶ್​ ಹೊರಬರಲೇ ಇಲ್ಲ!

36 ವರ್ಷ ವಯಸ್ಸಿನ ಅವಿದ್​ ಬ್ರಶ್​ ಮಾಡುವಾಗ ಟೂತ್​ಬ್ರಶ್​ ನುಂಗಿದ ಬಗ್ಗೆ ಮೊದಲು ಯಾರ ಬಳಿಯೂ ಹೇಳಿರಲಿಲ್ಲ. ಆದರೆ, ಮಾರನೇ ದಿನ ಎದ್ದಾಗ ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡ ಕಾರಣ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ನಾಲಿಗೆಯನ್ನು ಸ್ವಚ್ಛಗೊಳಿಸಿದ ನಂತರ ಗಂಟಲ ಬಳಿ ಸ್ವಚ್ಛಗೊಳಿಸುವಾಗ 12 ಸೆ.ಮೀ. ಉದ್ದದ ಬ್ರಶ್​ ಗಂಟಲಿನ ಒಳಗೆ ಇಳಿದಿತ್ತು. ಖಾಸಗಿ ಆಸ್ಪತ್ರೆಯಿಂದ ಅವಿದ್​ನನ್ನು ಎಐಐಎಂಎಸ್​ ಆಸ್ಪತ್ರೆಗೆ ಸೇರಿಸಲಾಯಿತು.

ಆಗ ಕೂಡ ವೈದ್ಯರ ಬಳಿ ತಾನು ಟೂತ್​ಬ್ರಶ್​ ನುಂಗಿರುವ ವಿಷಯವನ್ನು ಅವಿದ್​ ಹೇಳಿಕೊಂಡಿಲ್ಲ. ಹೀಗಾಗಿ, ವೈದ್ಯರು ಪೇನ್​ ಕಿಲ್ಲರ್​ ಮಾತ್ರೆಗಳನ್ನು ಕೊಟ್ಟು ಆತನ ನೋವನ್ನು ಕಡಿಮೆಗೊಳಿಸಲು ಪ್ರಯತ್ನಿಸಿದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ನಂತರ ಎಕ್ಸ್​ರೇ ಮತ್ತು ಎದೆಯ ಸಿಟಿ ಸ್ಕ್ಯಾನ್​ ಮಾಡಿದರೂ ಹೊಟ್ಟೆನೋವಿನ ಕಾರಣ ತಿಳಿಯಲಿಲ್ಲ. ಆಮೇಲೆ ಅಬ್ಡೋಮೆನ್​ (ಹೊಟ್ಟೆ) ಭಾಗದ ಸಿಟಿ ಸ್ಕ್ಯಾನಿಂಗ್​ ಮಾಡಿದಾಗ ಯಾವುದೋ ವಸ್ತು ಇರುವುದು ಪತ್ತೆಯಾಯಿತು. ಆಗ ಅವಿದ್​ ತಾನು ಆಕಸ್ಮಿಕವಾಗಿ ಟೂತ್​ ಬ್ರಶ್​ ನುಂಗಿರುವ ವಿಷಯವನ್ನು ಹೇಳಿದ್ದಾನೆ.

ಆ ಬ್ರಶ್​ನಿಂದ ಜೀರ್ಣಾಂಗಕ್ಕೆ ಏನಾದರೂ ಹಾನಿಯಾಗಿದೆಯಾ ಎಂದು ಪರಿಶೀಲಿಸಲಾಯಿತು. ಆದರೆ, ಅಬ್ಡಾಮೆನ್ ಭಾಗದಲ್ಲಿ ಆ ಬ್ರಶ್​ ಸಿಲುಕಿಕೊಂಡಿದ್ದರಿಂದ ಅದರಿಂದ ಬೇರಾವ ಭಾಗಕ್ಕೂ ತೊಂದರೆ ಆಗಿಲ್ಲ ಎಂಬುದು ಗೊತ್ತಾಯಿತು. ಹೀಗಾಗಿ, ಆಪರೇಷನ್​ ಮಾಡದೆ ಎಂಡೋಸ್ಕೋಪಿ ಮೂಲಕ ಆ ಬ್ರಶ್​ ಅನ್ನು ಹೊರತೆಗೆಯಲಾಯಿತು ಎಂದು ಎಐಐಎಂಎಸ್​ನ ತುರ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್​ ಅಗರವಾಲ್​ ತಿಳಿಸಿದ್ದಾರೆ.

Comments are closed.