ರಾಷ್ಟ್ರೀಯ

ಮೇಕೆದಾಟು ಯೋಜನೆಗೆ ವಿರೋಧ: ಲೋಕಸಭೆಯಲ್ಲಿ 26 ಸಂಸದರ ಅಮಾನತು

Pinterest LinkedIn Tumblr


ನವದೆಹಲಿ: ಮೇಕೆದಾಟು ಯೋಜನೆಯನ್ನು ವಿರೋಧಿಸಿ ಲೋಕಸಭೆಯಲ್ಲಿ ಕ್ಯಾತೆ ತೆಗೆದ 26 ಎಐಎಡಿಎಂಕೆ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅಮಾನತುಗೊಳಿಸಿದ್ದಾರೆ.

ಕರ್ನಾಟಕದಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಕೇಂದ್ರ ಸರಕಾರ ಹಸಿರು ನಿಶಾನೆ ನೀಡಿದ್ದನ್ನು ವಿರೋಧಿಸಿ ತಮಿಳುನಾಡಿನ 26 ಎಐಎಡಿಎಂಕೆ ಸಂಸದರು ಇಂದು ಲೋಕಸಭೆಯಲ್ಲಿ ನಿರಂತರ ಗದ್ದಲ ನಡೆಸಿದರು. ಇದರಿಂದಾಗಿ ಕಲಾಪಕ್ಕೆ ತೊಂದರೆಯಾದ ಕಾರಣದಿಂದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಆ ಎಲ್ಲಾ ಸಂಸದರನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ ಈ ಸಂಸದರು ಮುಂದಿನ ಐದು ಸೆಷೆನ್​ಗಳಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಲಾಗಿದೆ.

ಇದೇ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸುವುದು ನಮ್ಮ ಪ್ರಜಾತಾಂತ್ರಿಕ ಹಕ್ಕು. ಹಾಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಇದುವರೆಗೆ ನಮ್ಮ ಕೂಗಿಗೆ ಕೇಂದ್ರ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಎಐಎಡಿಎಂಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.