ರಾಷ್ಟ್ರೀಯ

140 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ!

Pinterest LinkedIn Tumblr


ನವದೆಹಲಿ: ಕಾನ್ಪುರದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಖತರ್ನಾಕ್​​ ಕಳ್ಳರ ಗ್ಯಾಂಗೊಂದು ಭಾರೀ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದೆ ಎನ್ನಲಾಗಿದೆ. ಬಿರ್ಜಾನ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್​ವೊಂದರಲ್ಲಿ ಸುಮಾರು 140 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳ ಕಳ್ಳತನವಾಗಿದೆ ಎಂದು ಪೊಲೀಸ್​​ ಇಲಾಖೆ ತಿಳಿಸಿದೆ.

ಇಬ್ಬರು ಮಾಲೀಕರ ನಡುವೇ ವ್ಯವಹಾರ ಸಂಬಧಿಸಿದಂತೆ ಮನಸ್ತಾಪವುಂಟಾಗಿದೆ. ಹೀಗಾಗಿ ಐದು ವರ್ಷಗಳಿಂದ ಜ್ಯುವೆಲ್ಲರಿ ಮುಚ್ಚಿತ್ತು ಎನ್ನಲಾಗಿದೆ. ಈ ವೇಳೆ 140 ಕೋಟಿಯಷ್ಟು ಮೌಲ್ಯದ ಚಿನ್ನಾಭರಣಗಳ ಕಳ್ಳತನವಾಗಿದೆ ಎಂದು ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ಧಾರೆ. ಈ ಬಗ್ಗೆ ತನಿಖೆ ಆರಂಭವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳ್ಳತನ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ. 10 ಸಾವಿರ ಕ್ಯಾರೆಟ್ ವಜ್ರ, 500 ಕೆ.ಜಿ. ಬೆಳ್ಳಿ, 100 ಕೆ.ಜಿ. ಚಿನ್ನ ಹಾಗು 5000 ಕ್ಯಾರಟ್ ಆಭರಣಗಳನ್ನು ಕಳ್ಳರು ಕದ್ದಿದ್ದಾರೆ ಎಂದು ಮಾಲೀಕರು ದೂರು ದಾಖಲಿಸಿದ್ಧಾರೆ. ದೂರಿನ ಆಧಾರದ ಮೇರೆಗೆ ತನಿಖೆ ನಡೆಯುತ್ತಿದೆ. ಇನ್ನು ತನಿಖೆ ನಡೆದ ಬಳಿಕವಷ್ಟೇ ಯಾರೆಲ್ಲ ದರೋಡೆ ಮಾಡಿದ್ಧಾರೆ ಎಂದು ತಿಳಿಯಲಿದೆ ಎನ್ನಲಾಗಿದೆ.

ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರು ಕಾನ್ಪುರ ಉತ್ತರ ವಿಭಾಗದ ಡಿಸಿಪಿ ಅವರು, ಜ್ಯುವೆಲ್ಲರಿ ಶಾಪ್​ ಸುತ್ತಮುತ್ತ​ ಹೆಚ್ಚಿನ ಭದ್ರತೆಯಿಲ್ಲ. ಅಪರಿಚಿತರೇ ಯಾರೋ ಒಳಗೆ ಪ್ರವೇಶಿಸಿ ಕಳ್ಳತನ ಮಾಡಿರುವ ಶಂಕೆಯಿದೆ. ಹೀಗಾಗಿ ಇದು ಖತರ್ನಾಕ್ ಕಳ್ಳರ ಗ್ಯಾಂಗ್​​​​ನ ಪರಿಚಿತರ ಕೃತ್ಯ. ಆರೋಪಿಗಳ ಬಗ್ಗೆ ಸುಳಿವು ದೊರೆತ ಕೂಡಲೇ ಬಂಧಿಸಲಾಗುವುದು ಎಂದರು.

Comments are closed.