ರಾಷ್ಟ್ರೀಯ

ಹೊಸ ವರ್ಷಕ್ಕೆ ಜಿಯೋ ಬಂಪರ್ ಕೊಡುಗೆ!

Pinterest LinkedIn Tumblr


ನವದೆಹಲಿ: ಆರಂಭದಿಂದಲೂ ಹಲವು ಆಕರ್ಷಕ ಆಫರ್‌ಗಳನ್ನು ಘೋಷಿಸುವ ಮೂಲಕ ಬಳಕೆದಾರರನ್ನು ಮೋಡಿ ಮಾಡುತ್ತಲೇ ಬಂದಿರುವ ದೇಶದ ಜನಪ್ರಿಯ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ಬಂಪರ್ ಕೊಡುಗೆ ಘೋಷಿಸಿದೆ. 399 ರೂ.ಗಳಿಗೆ ರೀಚಾರ್ಜ್ ಮಾಡಿಸುವ ಎಲ್ಲಾ ಗ್ರಾಹಕರಿಗೆ ಜಿಯೋ ಶೇ.100ರಷ್ಟು ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ.

AJIO ಸಹಭಾಗಿತ್ವದಲ್ಲಿ ರಿಲಯನ್ಸ್ ಜಿಯೋ ಹೊಸವರ್ಷಕ್ಕೆ ನೂತನ ಆಫರ್ ಘೋಷಣೆ ಮಾಡಿದ್ದು, AJIO ಕೂಪನ್ ರೂಪದಲ್ಲಿ ಶೇ.100 ಕ್ಯಾಶ್ ಬ್ಯಾಕ್ ನೀಡಲು ನಿರ್ಧರಿಸಿದೆ. ಅದರಂತೆ 399 ರೂ.ಗಳಿಗೆ ರೀಚಾರ್ಜ್ ಮಾಡಿಸುವ ಗ್ರಾಹಕರು ಚಾಲ್ತಿಯಲ್ಲಿರುವ AJIO ಆಫರ್ ಗೆ ಅನುಗುಣವಾಗಿ ತನ್ನ ಕೂಪನ್’ಗಳನ್ನು ರಿಡೀಮ್ ಮಾಡಿಕೊಳ್ಳಬಹುದು.

ರೀಚಾರ್ಜ್ ಬಳಿಕ MyJio ಆಪ್’ನ MyCoupons ವಿಭಾಗದಲ್ಲಿ 399 ರೂ. ಮೌಲ್ಯದ AJIO ಕೂಪನ್ ಕ್ರೆಡಿಟ್ ಆಗಲಿದೆ. ಈ ಕೂಪನ್ ಅನ್ನು AJIO ಅಪ್ಲಿಕೇಶನ್ ಮತ್ತು ವೆಬ್ಸೈಟ್ ನಲ್ಲಿ ಕನಿಷ್ಠ 1000 ರೂ.ಗೆ ಶಾಪಿಂಗ್ ಮಾಡುವ ಮೂಲಕ ರಿಡೀಮ್ ಮಾಡಿಕೊಳ್ಳಬಹುದು.

ಚಾಲ್ತಿಯಲ್ಲಿರುವ ಮತ್ತು ನೂತನ ಜಿಯೋ ಬಳಕೆದಾರರಿಬ್ಬರಿಗೂ ಈ ಆಫರ್ ಅನ್ವಯವಾಗಲಿದ್ದು, ಡಿಸೆಂಬರ್ 28 ರಿಂದ ಜನವರಿ 31ರವರೆಗಿನ ಸೀಮಿತ ಅವಧಿಯ ಕೊಡುಗೆ ಇದಾಗಿದೆ. ಈ ಅವಧಿಯಲ್ಲಿ ಗಳಿಸಿದ ಕೂಪನ್’ಗಳನ್ನು ಮಾರ್ಚ್ 15ರೊಳಗೆ ರಿಡೀಮ್ ಮಾಡಿಕೊಳ್ಳಬಹುದು ಎಂದು ಜಿಯೋ ಹೇಳಿದೆ.

Comments are closed.