ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ ನಂತರ ಕಲ್ಲು ತೂರಾಟ; ಪೊಲೀಸ್​​ ಕಾನ್ಸ್​​ಟೇಬಲ್​​ ಸಾವು!

Pinterest LinkedIn Tumblr


ನವದೆಹಲಿ: ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿ ನಂತರ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್​​ ಕಾನ್ಸ್​​ಟೇಬಲ್​​​ ಓರ್ವ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಘಾಝಿಪುರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ರ‍್ಯಾಲಿ ನಡೆದ ಎರಡೇ ಗಂಟೆಗಳಲ್ಲಿ ಐವತ್ತು ಜನರ ಗುಂಪೊಂದು ಪ್ರತಿಭಟನೆ ನಡೆಸಿತ್ತು. ಈ ವೇಳೆ ಪ್ರತಿಭಟನೆ ಬಿಸಿ ಹಿಂಸಾಚಾರಕ್ಕೆ ತಿರುಗಿ ಕಲ್ಲು ತೂರಾಟ ನಡೆದಿದೆ. ಈ ಕಲ್ಲು ತೂರಾಟಕ್ಕೆ ಪೊಲೀಸ್​​ ಕಾನ್ಸ್​​ಟೇಬಲ್​​ ಓರ್ವ ಬಲಿಯಾಗಿದ್ಧಾರೆ.

ಘಾಝಿಪುರದಲ್ಲಿ ಹತ್ಯೆಯಾದ ಪೊಲೀಸ್ ಕಾನ್ಸ್‌ಟೆಬಲ್​ ಅನ್ನು ಸುರೇಶ್ ವತ್ಸ್ ಎಂದು ಗುರುತಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿ ಮುಗಿಸಿ ಪೊಲೀಸ್​ ಠಾಣೆಗೆ ಹಿಂತಿರುಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಧಾನಿ ರ‍್ಯಾಲಿಯನ್ನು ಉದ್ದೇಶಸಿ ಮಾತಾಡಿದ್ದ ಸ್ಥಳದಲ್ಲಿಯೇ ನಿಶಾದ್​​ ಎಂಬ ಸಮುದಾಯದವರು ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಪ್ರತಿಭಟನಾನಿರತ ಗುಂಪು ಚದುರಿಸಲು ಪೊಲೀಸ್​​ ತಂಡ ಸ್ಥಳಕ್ಕೆ ಧಾವಿಸಿತ್ತು. ಈ ವೇಳೆ ಪೊಲೀಸ್​ ಹಾಗೂ ಪ್ರತಿಭಟನಕಾರರ ನಡುವೇ ಕೆಲ ಕಾಲ ಮಾತಿನ ಚಕಾಮಕಿ ನಡೆಯಿತು. ಸುರೇಶ್​ ಅವರನ್ನು ಒಳಗೊಂಡಿದ್ದ ಪೊಲೀಸ್​​ ತಂಡ ಅಲ್ಲಿಯೇ ಪ್ರತಿಭಟನೆಗೆ ಸೇರಿದ್ದ ಎಲ್ಲರನ್ನು ತೆರವುಗೊಳಿಸಲು ಮುಂದಾಯಿತು. ಆಕ್ರೋಶದಲ್ಲಿದ್ದ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲಿಯೇ ಪೊಲೀಸ್​ ತಂಡದಲ್ಲಿದ್ದ ಕಾನ್ಸ್​​ಟೇಬಲ್​​ ಸುರೇಶ್​​ ಕಲ್ಲು ತೂರಾಟದಲ್ಲಿ ಭಾರೀ ಗಾಯಗೊಂಡಿದ್ದಾರೆ. ಇನ್ನೇನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರಾವನಿಸುತ್ತಿದ್ದ ವೇಳೆ ದಾರಿ ಮಧ್ಯೆಯೇ ಕೊನೆಯುಸಿರು ಎಳೆದಿದ್ದಾರೆ.

ಇನ್ನು ಆರೋಪಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಅವರು ಸೂಚಿಸಿದ್ಧಾರೆ. ಅಲ್ಲದೇ ಕಾನ್ಸ್‌ಟೆಬಲ್ ಸುರೇಶ್ ವತ್ಸ್ ಅವರ ಪತ್ನಿಗೆ 40 ಲಕ್ಷ ರೂ ಪರಿಹಾರ ಧನ ಘೋಷಿಸಲಾಗಿದೆ. ಮುಂದೆ ತಮ್ಮ ಮಕ್ಕಳ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಸಿಎಂ ಕಚೇರಿಯಿಂದ ಬಿಡುಗಡೆಯಾದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆಯೂ ಉತ್ತರಪ್ರದೇಶದಲ್ಲಿ ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ತಾರಕಕ್ಕೇರಿದ್ದ ಪ್ರತಿಭಟನೆಯೂ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೇ ಮಾತಿನ ಚಕಾಮಕಿ ನಡೆದಿದೆ. ಆಕ್ರೋಶಗೊಂಡ ಪ್ರತಿಭಟನಕಾರರು ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಪೊಲೀಸರ ಮೇಲೆಯೂ ದಾಳಿ ನಡೆಸಿದ್ದು, ಈ ಗಲಭೆಯಲ್ಲಿ ಇನ್ಸ್‌ಪೆಕ್ಟರ್ ಸುಭೋದ್ ಕುಮಾರ್ ಸಿಂಗ್ ಎನ್ನುವವರು ಸಾವನ್ನಪ್ಪಿದ್ದರು.

Comments are closed.