ರಾಷ್ಟ್ರೀಯ

ದೆಹಲಿಯ ಆಶ್ರಯ ನಿವಾಸದಲ್ಲಿ ಬೈಗುಳ, ಗುಪ್ತಾಂಗಗಳಿಗೆ ಖಾರದ ಪುಡಿ ಎರಚಿ ಹುಡುಗಿಯರಿಗೆ ಕಿರುಕುಳ

Pinterest LinkedIn Tumblr


ದೆಹಲಿ: ಮನೆಯಲ್ಲಿನ ಕಷ್ಟ ಮರೆತು ಸರ್ಕಾರಿ ಆಶ್ರಯತಾಣ ಸೆರೆ ನೆಮ್ಮದಿಯಾಗಿ ಓದಿ ಮುಂದೆಬರಬೇಕು ಎಂದುಕೊಂಡ ಹುಡುಗಿಯರಿಗೆ ಅದೇ ಆಶ್ರಯತಾಣ ಈಗ ಅವರಿಗೆ ನರಕವಾಗಿದೆ.

ಆಶ್ರಯತಾಣದಲ್ಲಿನ ಹುಡುಗಿಯರು ಅಲ್ಲಿನ ಸಿಬ್ಬಂದಿಗೆ ವಿಧೇಯರಾಗಿಲ್ಲ ಎಂದಾದರೆ ಅವರಿಗೆ ಬೈಗುಳ, ಗಂಭೀರ ಶಿಕ್ಷೆಯ ಜೊತೆ ಅವರ ಗುಪ್ತಾಂಗಗಳಿಗೆ ಖಾರದ ಪುಡಿ ಎರಚಿ ಕ್ರೌರ್ಯ ಮರೆಯುತ್ತಾರೆ.

ಇಲ್ಲಿನ ದ್ವಾರಕದಲ್ಲಿನ ಹುಡುಗಿಯ ಆಶ್ರಯತಾಣಕ್ಕೆ ಮಹಿಳಾ ಆಯುಕ್ತರು ಭೇಟಿ ನೀಡಿದಾಗ ಸಂತ್ರಸ್ತ ಹುಡುಗಿಯರು ತಮಗೆ ಆಗುತ್ತಿರುವ ದೌರ್ಜನ್ಯವನ್ನು ಬಾಯ್ಬಿಟ್ಟಿದ್ದಾರೆ. ಆಯುಕ್ತರು 6ರಿಂದ 15 ವರ್ಷದೊಳಗಿನ ಹುಡುಗಿಯರೊಂದಿಗೆ ಸಮಲೋಚನೆ ನಡೆಸಿದಾಗ ಹೇಗೆ ಇಲ್ಲಿನ ಮಹಿಳಾ ಸಿಬ್ಬಂದಿ ತಮ್ಮನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ ಎಂಬುದು ಬೆಳಕಿಗೆ ಬಂದಿದೆ.

ತಾವು ಏನಾದರೂ ಧ್ವನಿ ಏರಿಸಿ ಮತಾನಾಡಿದರೆ ಅವರು ನಮಗೆ ಗಂಭೀರವಾದ ಕಠಿಣ ಶಿಕ್ಷೆ ನೀಡಲು ಮುಂದಾಗುತ್ತಾರೆ. ನಮ್ಮ ಕೈಯಲ್ಲೇ ಪಾತ್ರೆ, ಬಟ್ಟೆ, ರೂಂ , ಶೌಚಾಲಯವನ್ನು ತೊಳೆಸುತ್ತಾರೆ. ಆಶ್ರಯತಾಣದಲ್ಲಿ ಒಬ್ಬರೆ ಅಡುಗೆ ಭಟ್ಟರು ಇರುವುದರಿಂದ ಅಡುಗೆ ಕೆಲಸವನ್ನು ನಾವೇ ಮಾಡಬೇಕು. ಊಟ ಕೂಡ ಉತ್ತಮ ಗುಣಮಟ್ಟದಲ್ಲಿ ಇರುವುದಿಲ್ಲ ಎಂದು ಅಲ್ಲಿನ ಕಥೆಯನ್ನು ಬಿಚ್ಚಿಟ್ಟರು.

ಇನ್ನು ಬೇಸಿಗೆ ಹಾಗೂ ಚಳಿಗಾಲದಲ್ಲಿ ರಜೆ ಇದ್ದಾಗ ಕೂಡ ನಮಗೆ ಊರಿಗೆ ಹೋಗಲು ಬಿಡುವುದಿಲ್ಲ. ಅವರ ಮಾತನ್ನು ಧಿಕ್ಕರಿಸಿದರೆ, ಚೆನ್ನಾಗಿ ಹೊಡೆಯುತ್ತಾರೆ ಎಂದು ತಮ್ಮ ಸಂಕಟವನ್ನು ಆಯುಕ್ತರಿಗೆ ತಿಳಿಸಿದರು.

ಈ ಸಮಸ್ಯೆ ಆಲಿಸಿದ ಮಹಿಳಾ ಆಯುಕ್ತರು ಇಲ್ಲಿನ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನು ಇಲ್ಲಿನ ವಿದ್ಯಾರ್ಥಿಗಳಿಗೆ 24 ಗಂಟೆಯೂ ಸುರಕ್ಷತೆ ಒದಗಿಸಲು ಪೊಲೀಸರನ್ನು ನೇಮಕಮಾಡಲಾಗಿದೆ.

Comments are closed.