ರಾಷ್ಟ್ರೀಯ

ರಾಜನಾಥ್ ಸಿಂಗ್ ಭಾಷಣಕ್ಕೆ ಅಡ್ಡಿ; ರಾಮ ಮಂದಿರ ನಿರ್ಮಾಣ ಮಾಡುವ ಪಕ್ಷಕ್ಕೇ ನಮ್ಮ ಮತ ಎಂದು ಕೂಗಿದ ಸಾರ್ವಜನಿಕರು

Pinterest LinkedIn Tumblr

ಲಖನೌ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಉತ್ತರ ಪ್ರದೇಶದಲ್ಲಿ ಭಾಷಣ ಮಾಡುತ್ತಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇದೇ ವಿಷಯವಾಗಿ ಮುಜುಗರದ ಸನ್ನಿವೇಶ ಎದುರಿಸಿದ್ದಾರೆ.

ಡಿ.23 ರಂದು ಲಖನೌ ನಲ್ಲಿ ಮಾತನಾಡುತ್ತಿದ್ದ ರಾಜನಾಥ್ ಸಿಂಗ್ ಅವರ ಭಾಷಣಕ್ಕೆ ಅಡ್ಡಿ ಪಡಿಸಿದ ಸಾರ್ವಜನಿಕರು, ರಾಮ ಮಂದಿರ ನಿರ್ಮಾಣ ಮಾಡುವ ಪಕ್ಷಕ್ಕೇ ನಮ್ಮ ಮತ ಎಂದು ಕೂಗಿದ್ದಾರೆ.

ಲಖನೌ ಸಂಸದರೂ ಆಗಿರುವ ರಾಜನಾಥ್ ಸಿಂಗ್ ಯುವ ಕುಂಭ್ ನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಜನತೆ, ರಾಜನಾಥ್ ಸಿಂಗ್ ಭಾಷಣಕ್ಕೆ ಕೆಲವು ನಿಮಿಷಗಳ ಕಾಲ ಅಡ್ಡಿಪಡಿಸಿ ರಾಮ ಮಂದಿರ ನಿರ್ಮಾಣ ಮಾಡುವ ಪಕ್ಷಕ್ಕೇ ನಮ್ಮ ಮತ ಎಂದು ಕೂಗಿದ್ದಾರೆ.

ಆಯೋಜಕರು ಘೋಷಣೆ ಕೂಗುತ್ತಿದ್ದವರನ್ನು ಸಮಾಧಾನಪಡಿಸಿದ ನಂತರ ರಾಜನಾಥ್ ಭಾಷಣ ಮುಂದುವರೆಸಿದರು.

Comments are closed.