ರಾಷ್ಟ್ರೀಯ

ರಹಸ್ಯ ಸಂಖ್ಯೆ ಟ್ವೀಟ್ ಮಾಡಿ ತಲೆ ಕೆಡಿಸಿದ ಕೇಂದ್ರ ವಿದೇಶಾಂಗ ಸಚಿವೆ?

Pinterest LinkedIn Tumblr


ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಹಸ್ಯ ಸಂಖ್ಯೆಯೊಂದನ್ನು ಟ್ವೀಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇಂದು ಮಧ್ಯಾಹ್ನ ವೇಳೆಗೆ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಅವರು, ತಮ್ಮ ಟ್ವೀಟ್‍ನಲ್ಲಿ ಕೇವಲ 638781 ಎಂಬ ಸಂಖ್ಯೆಯನ್ನು ಬರೆದುಕೊಂಡಿದ್ದರು. ಆದರೆ ಬಳಿಕ ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಆದರೆ ಸುಷ್ಮಾ ಸ್ವರಾಜ್ ಟ್ವೀಟ್ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಟ್ವಿಟ್ಟಿಗರು ನಂಬರ್ ರಹಸ್ಯವನ್ನು ಡಿ ಕೋಡ್ ಮಾಡಲು ಮುಂದಾಗಿದ್ದಾರೆ.

ಕೆಲ ಟ್ವಿಟ್ಟಿಗರು ಸಂಖ್ಯೆಯ ಅರ್ಥವೇನು ಎಂದು ಪ್ರಶ್ನೆ ಮಾಡಿದ್ದರೆ, ಮತ್ತು ಕೆಲವರು ಇದು ಸಿಂಗಪೂರ್ ಪೋಸ್ಟಲ್ ಕೋಡ್, ಸುಷ್ಮಾ ಮೇಡಮ್ ಅವರು ಈ ಮೂಲಕ ನಮಗೇ ರಹಸ್ಯ ಸಂಕೇತವನ್ನು ರವಾನಿಸಿದ್ದಾರೆ ಎಂದು ಮರು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಸಚಿವರಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಸುಷ್ಮಾ ಸ್ವರಾಜ್ ಅವರು ಇರುತ್ತಾರೆ. ಈ ಮೂಲಕ ಹಲವು ಬಾರಿ ಜನರ ಮಸ್ಯೆ ಬಗೆ ಹರಿಸಲು ಕಾರ್ಯನಿರ್ವಹಿಸಿದ್ದಾರೆ. 2010 ರಲ್ಲಿ ಟ್ವಿಟ್ಟರ್ ಗೆ ಸೇರ್ಪಡೆ ಆಗಿರುವ ಸುಷ್ಮಾ ಸ್ವರಾಜ್ ಅವರು 12 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

Comments are closed.