ರಾಷ್ಟ್ರೀಯ

ಕಾಂಗ್ರೆಸ್​ ನೇತೃತ್ವದ ಮಹಾಘಟಬಂಧನ್​​ಗೆ ಸೇರ್ಪಡೆಯಾದ ಎನ್​ಡಿಎ ಸಖ್ಯ ತೊರೆದ ಉಪೇಂದ್ರ ಕುಶ್ವಾಹ

Pinterest LinkedIn Tumblr


ನವದೆಹಲಿ: ಇತ್ತೀಚೆಗಷ್ಟೇ ಎನ್​ಡಿಎ ಮೈತ್ರಿಕೂಟದಿಂದ ಹೊರನಡೆದಿರುವ ಮಾಜಿ ಕೇಂದ್ರ ಸಚಿವ ಹಾಗೂ ಆರ್​ಎಲ್​ಎಸ್​ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಇಂದು ಬಿಹಾರದ ಮಹಾಘಟ್​ಬಂಧನ್​ ಸೇರಿದ್ದಾರೆ. ಕಾಂಗ್ರೆಸ್​​ನ ಹಿರಿಯ ನಾಯಕ ಅಹಮ್ಮದ್​​ ಪಟೇಲ್​ ಸಮ್ಮುಖದಲ್ಲಿಯೇ ಉಪೇಂದ್ರ ಕುಶ್ವಾಹ ಮಹಾಘಟಬಂಧನ್​​ಗೆ ಬೆಂಬಲ ಘೋಷಿಸಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ನಡೆದ ಉಪೇಂದ್ರ ಕುಶ್ವಾಹ ಸೇರ್ಪಡೆ ಕಾರ್ಯಕ್ರಮದಲ್ಲಿ ಆರ್​ಜೆಡಿಯ ಮುಖ್ಯಸ್ಥ ತೇಜಸ್ವಿ ಯಾದವ್​​, ಎನ್​​ಸಿಪಿಯ ಶರದ್​ ಪವಾರ್​ ಭಾಗಿಯಾಗಿದ್ದರು ಎನ್ನುತ್ತಿವೆ ಮೂಲಗಳು.

ಈಗಾಗಲೇ ರಾಷ್ಟ್ರೀಯ ಲೋಕ ಸಮತಾ ಪಕ್ಷ ನಾಯಕ ಉಪೇಂದ್ರ ಕುಶ್ವಾಹ ಹಾಗೂ ಯುಪಿಎ ಘಟಕದ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿತ್ತು. ಅವರು ಪಕ್ಷ ಸೇರುವ ಕುರಿತು ಶೀಘ್ರದಲ್ಲೇ ನಿರ್ಧಾರ ತಿಳಿಸಲಿದ್ದಾರೆ ಎಂದಿದ್ದರು. ಈ ವೇಳೆ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​, ಹಿಂದೂಸ್ತಾನಿ ಅವಾಮ್​ ಮೋರ್ಚ್​ (ಜಾತ್ಯಾತೀತ) ಸಂಸ್ಥಾಪಕ ಜಿತನ್​ ರಾಮ್​ ಮಾಂಜಿ ಮತ್ತು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಉಪಸ್ಥಿತರಿರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದೀಗ ಉಪೇಂದ್ರ ಕುಶ್ವಾಹ ಮಹಾಘಟಬಂಧನ್​ಗೆ ಸೇರ್ಪಡೆಯಾಗಿದ್ದು, ವಿಪಕ್ಷ ನಾಯಕ ಶರದ್​ ಪವರ್​ ಜೊತೆಗೆ ಹಲವರು ಸಾಕ್ಷಿಯಾಗಿದ್ದರು ಎನ್ನಲಾಗಿದೆ.

ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರದಲ್ಲಿ ಮುನಿಸು ತೋರಿ ಎನ್​ಡಿಎ ಮೈತ್ರಿ ಕೂಟದಿಂದ ಹೊರ ಬಂದಿರುವ ಕುಶ್ವಾಹ ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಸಂಪುಟ ಸಚಿವನಾಗಿ 55 ತಿಂಗಳ ಕಾಲ ನಾನು ಸೇವೆ ಸಲ್ಲಿಸಿದ್ದೇನೆ. ನಿಮ್ಮ ನಾಯಕತ್ವದಿಂದ ನಾನು ಮೋಸ ಹೋಗಿದ್ದೇನೆ. ನೀವು ಚುನಾವಣೆಗೆ ಮುನ್ನ ಯಾವ ಭರವಸೆ ನೀಡಿದ್ದೀರಾ ಹಾಗೂ ಅಧಿಕಾರಕ್ಕೆ ಬಂದಮೇಲೆ ಏನು ಮಾಡಿದ್ದೀರಾ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಎನ್​ಡಿಎ ಮೈತ್ರಿಕೂಟದಿಂದ ಕುಶ್ವಾಹ ಹೊರಬರುತ್ತಿದ್ದಂತೆ ಹಿರಿಯ ಕಾಂಗ್ರೆಸ್​ ನಾಯಕ ಅಹ್ಮದ್​ ಪಟೇಲ್​ ಅವರನ್ನು ಭೇಟಿಯಾಗಿದ್ದರು. ಕುಶ್ವಾಹ ಯುಪಿಎ ಮೈತ್ರಿ ಸೇರುವುದರಿಂದಾಗಿ ಬಿಹಾರದಲ್ಲಿ ಎನ್​ಡಿಎ ವಿರುದ್ಧ ಅಲೆ ಸೃಷ್ಟಿಸಲು ಸಾಧ್ಯವಾzಲಿದೆ.

2019ರ ಚುನಾವಣೆಗೆ ಬಿಜೆಪಿ ವಿರುದ್ಧ ಮಹಾಮೈತ್ರಿಗೆ ಸಜ್ಜಾಗಿದ್ದು, ಎನ್​ಡಿಎಗೆ ಈ ಮೈತ್ರಿ ಸಮಸ್ಯೆ ಸೃಷ್ಟಿಸಿದೆ. ಲೋಕ ಜನಾಶಕ್ತಿ ಪಕ್ಷ (ಎಲ್​ಜೆಪಿ) ಸಂಸದಿಯ ಮಂಡಳಿ ಅಧ್ಯಕ್ಷ ಚಿರಾಗ್​ ಪಸ್ವಾನ್​ ಬಿಹಾರದಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಮಾತುಕತೆ ವಿಫಲವಾದರೆ ಅದು ಪಕ್ಷಕ್ಕೆ ದೊಡ್ಡ ಮಟ್ಟಕ್ಕೆ ಹಾನಿಯಾಗಲಿದೆ ಎಂದಿದ್ದರು.

ತೆಲುಗು ದೇಶಂ ಪಕ್ಷದ ಬಳಿಕ ಆರ್​ಎಲ್​ಎಸ್​ಪಿ ಎನ್​ಡಿಎ ಮೈತ್ರಿಯಿಂದ ಹೊರ ಬಂದ ಬೆನ್ನಲ್ಲೆ ಈ ಕುರಿತು ಟ್ವೀಟ್​ ಮಾಡಿದ ಪಾಸ್ವಾನ್​ ಮೈತ್ರಿಕೂಟವು ಒಂದು ನಿರ್ಣಾಯಕ ಹಂತದಲ್ಲಿದೆ. ಇಂತಹ ಸಮಯದಲ್ಲಿ, ಬಿಜೆಪಿ ಈ ಸಮಸ್ಯೆಗಳನ್ನು ತಡಮಾಡದೇ ಶೀಘ್ರವೇ ಪರಿಹರಿಸಬೇಕು ಎಂದರು.

ಇದೇ ಮೊದಲ ಬಾರಿ ಪಾಸ್ವಾನ್​ ಕೂಡ ಬಿಜೆಪಿ ಜೊತೆ ಸೀಟು ಹಂಚಿಕೆ ವಿರುದ್ಧ ಧ್ವನಿ ಎತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅಗೌರವ ಉಂಟಾದರೆ ನಾವು ಸಹಿಸುವುದಿಲ್ಲ ಎಂದು ಎಲ್​ಜೆಪಿ ನಾಯಕರು ತಿಳಿಸಿದ್ದರು ಕೂಡ.

Comments are closed.