ರಾಷ್ಟ್ರೀಯ

ಬಾರಾಮುಲ್ಲಾ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

Pinterest LinkedIn Tumblr


ಶ್ರೀನಗರ : ಭದ್ರತಾ ಪಡೆಗಳು ಮತ್ತು ಉಗ್ರರೊಂದಿಗೆ ನಡೆದಿರುವ ಬಾರಾಮುಲ್ಲಾ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರೊಂದಿಗಿನ ಗುಂಡಿನ ಕಾಳಗ ನಿಂತಿದ್ದು ಸೇನೆಯು ಈಗಲೂ ಉಗ್ರರಿಗಾಗಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ ನ ಬಾರಾತ್‌ಕಲಾನ್‌ – ಗುಂದ್‌ ಮೊಹಲ್ಲಾ ಪ್ರದೇಶದಲ್ಲಿ ಎನ್‌ಕೌಂಟರ್‌ನಡೆದಿತ್ತು. ಉಗ್ರರು ಈ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆಂಬ ಖಚಿತ ಮಾಹಿತಿ ದೊರಕಿದ ಕಾರಣ ಭದ್ರತಾ ಪಡೆಗಳು ಎನ್‌ಕೌಂಟರ್‌ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈದವು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Comments are closed.