ರಾಷ್ಟ್ರೀಯ

1 ಲೀಟರ್ ಪೆಟ್ರೋಲ್‌ಗೆ 250 ಕೀ.ಮಿ ಮೈಲೇಜ್ ನೀಡೋ ಹೊಸ ಕಾರು ಆವಿಷ್ಕಾರ!

Pinterest LinkedIn Tumblr


ಚೆನ್ನೈ: ಆಟೋಮೊಬೈಲ್ ಕ್ಷೇತ್ರ ಸದ್ಯ ಎಲೆಕ್ಟ್ರಿಕ್ ವಾಹನದತ್ತೆ ಗಮನ ಕೇಂದ್ರಿಕರಿಸಿದೆ. ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಇಂಧನದ ಬೆಲೆ ಗಗನಕ್ಕೇರಿತ್ತು. ಜೊತೆಗೆ ಮಾಲಿನ್ಯ ನಿಯಂತ್ರಿಸಲು ಎಲೆಕ್ಟ್ರಿಕ್ ವಾಹನ ಸೂಕ್ತ. ಆದರೆ ಸದ್ಯ 1 ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 250 ಕೀ.ಮಿ ಮೈಲೇಜ್ ನೀಡೋ ಹೊಸ ಕಾರು ಆವಿಷ್ಕಾರ ಮಾಡಲಾಗಿದೆ.

ಚೆನ್ನೈನಲ್ಲಿ ಆಯೋಜಿಸಲಾದ ಇಕೋ ಮ್ಯಾರಥಾನ್ ಎಕ್ಸ್ಪೋದಲ್ಲಿ ಈ ಕಾರು ಪರ್ದರ್ಶಿಸಲಾಗಿದೆ. ಮುಂಬೈನ ಕೆಜೆ ಸೋಮಯ್ಯ ಕಾಲೇಜಿನ ವಿದ್ಯಾರ್ಥಿಗಳು ಈ 250 ಕೀ.ಮಿ ಮೈಲೇಜ್ ಕಾರನ್ನ ಪರಿಚಯಿಸಿದ್ದಾರೆ. ಈ ಮೂಲಕ ಎಲ್ಲರ ಅಚ್ಚರಿಕೆಗೆ ಕಾರಣರಾಗಿದ್ದಾರೆ.

SRM ವಿಶ್ವಿವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರತಿ ಲೀಟರ್‌ಗೆ 100 ಕೀ.ಮಿ ಮೈಲೇಜ್ ನೀಡಬಲ್ಲ ಕಾರು ಪ್ರದರ್ಶಿಸಿದ್ದಾರೆ. ಇನ್ನು BITS ಪಿಲಾನಿ ತಂಡ 120 ಕೀ.ಮಿ ಮೈಲೇಜ್ ನೀಡಬಲ್ಲ ಕಾರನ್ನ ಆವಿಷ್ಕರಿಸಿದ್ದಾರೆ. ಆದರೆ ಈ ಎಲ್ಲಾ ಕಾರುಗಳಿಗೆ ಸೆಡ್ಡು ಹೊಡೆದಿರುವ ಸೋಮಯ್ಯ ಕಾಲೇಜು ವಿದ್ಯಾರ್ಥಿಗಳು ಕಾರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Comments are closed.