ರಾಷ್ಟ್ರೀಯ

ಬಿಎಸ್​ಎನ್​ಎಲ್​ ನೇಮಕಾತಿ: ತಿಂಗಳಿಗೆ 50 ಸಾವಿರ ರೂ. ಸಂಬಳ

Pinterest LinkedIn Tumblr


ಭಾರತ್ ಸಂಚಾರ್ ನಿಗಮ್ (ಬಿಎಸ್ಎನ್ಎಲ್) ಇಲಾಖೆ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ವಿಭಾಗದಲ್ಲಿ 300 ಹುದ್ದೆಗಳು ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳನ್ನು, ಐಡಿಎ ಪೇ ಸ್ಕೇಲ್ ನಿಯಮಗಳ ಅನುಸಾರ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆಯು ಆನ್​ಲೈನ್ ಮೂಲಕ ನಡೆಯಲಿದ್ದು, ಅಪ್ಲಿಕೇಶನ್​ ಶುಲ್ಕವನ್ನು ಆನ್​ಲೈನ್ ಮುಖಾಂತರವೇ ಪಾವತಿಸಬೇಕಾಗುತ್ತದೆ.

ಶಿಕ್ಷಣ ಅರ್ಹತೆಗಳು
-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಶೇ.60 ರಷ್ಟು ಅಂಕಗಳೊಂದಿಗೆ ಟೆಲಿಕಮ್ಯುನಿಕೇಷನ್​, ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ , ಎಲೆಕ್ಟ್ರಾನಿಕ್ಸ್​ ಕಂಪ್ಯೂಟರ್ / ಐಟಿ ಎಲೆಕ್ಟ್ರಿಕಲ್​ನಲ್ಲಿ ಪದವಿ ಮಾಡಿರಬೇಕು.

– ಅಭ್ಯರ್ಥಿಗಳು ಹೆಚ್ಚುವರಿಯಾಗಿ MBA ಅಥವಾ MTech ಪದವಿ ಹೊಂದಿರಬೇಕು.

ವೇತನ
ಈ ಹುದ್ದೆಗಳಿಗೆ ಇಲಾಖೆಯು ಮಾಸಿಕ ಸಂಬಳ ತಿಂಗಳಿಗೆ 24,900 ರಿಂದ 50,500 ವರೆಗೆ ನೀಡಲಿದೆ. ಅಲ್ಲದೆ ಐಡಿಎ, ಎಚ್ಆರ್​ಎ, ವೈದ್ಯಕೀಯ ಪ್ರಯೋಜನಗಳ ಅನುಕೂಲವನ್ನು ಕಂಪೆನಿಯು ಒದಗಿಸಲಿದೆ.

ಆಯ್ಕೆ ಪ್ರಕ್ರಿಯೆ

ಈ ಹುದ್ದೆಗಳಿಗೆ ಆನ್​ಲೈನ್​ ಮೂಲಕ ಪರೀಕ್ಷೆಗಳಿರಲಿದೆ. ಅಲ್ಲದೆ ಗ್ರೂಪ್ ಡಿಸ್ಕಶನ್ ಮತ್ತು ಇಂಟರ್​ವ್ಯೂ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 30 ವರ್ಷ ದಾಟಿರಬಾರದು. ಜೊತೆಗೆ ಸರ್ಕಾರದ ನಿಯಮಗಳಿಗನುಸಾರ ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ
ಮ್ಯಾನೇಜ್ಮೆಂಟ್​ ಟ್ರೈನಿ ಹುದ್ದೆಗಳಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬಿಎಸ್ಎನ್​ಎಲ್​ ಅಧಿಕೃತ ವೆಬ್​​ಸೈಟ್​ bsnl.co.in.ನಲ್ಲಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
http://www.externalbsnlexam.com/ ಈ ಲಿಂಕ್​ನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆ ಪ್ರಾರಂಭ- 26 ಡಿಸೆಂಬರ್ 2018
ಕೊನೆಯ ದಿನಾಂಕ – ಜನವರಿ 26, 2019

Comments are closed.