ರಾಷ್ಟ್ರೀಯ

ನಿಯೋಜಿತ ಮುಖ್ಯಮಂತ್ರಿಯಿಂದ ರಾಜ್ಯದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ!

Pinterest LinkedIn Tumblr


ಮಿಜೋರಾಂ: ಮಿಜೋರಾಂನಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಿಜೋ ನ್ಯಾಷನಲ್‌ ಫ್ರಂಟ್‌ ಪಕ್ಷದ ನಿಯೋಜಿತ ಮುಖ್ಯಮಂತ್ರಿ ಝೋರಾಂಥಂಗಾ ಅವರು, ತಾವು ನೀಡಿದ ಚುನಾವಣೆ ಭರವಸೆಯಂತೆ ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಗೊಳಿಸುತ್ತೇನೆ ಎಂದು ಪ್ರಕಟಿಸಿದ್ದಾರೆ.

ಅತಿಹೆಚ್ಚು ಸಾಕ್ಷರತೆ ಮತ್ತು ಕ್ರೈಸ್ತ ಸಮುದಾಯವನ್ನು ಹೊಂದಿರುವ ಮಿಜೋರಾಂನಲ್ಲಿ 1997ರಲ್ಲೇ ಆಗಿನ ಕಾಂಗ್ರೆಸ್‌ ಸರ್ಕಾರ, ಮದ್ಯಪಾನದ ಮೇಲೆ ನಿಷೇಧ ಹೇರಿತ್ತು. ಆದಾಗ್ಯೂ, 2014ರ ಮದ್ಯಪಾನ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರುವ ಮೂಲಕ 2015ರಲ್ಲಿ ಮದ್ಯಪಾನದ ಮೇಲಿನ ಸಂಪೂರ್ಣ ನಿಷೇಧವನ್ನು ತೆರವುಗೊಳಿಸಲಾಗಿತ್ತು. ಇದರ ನಂತರ, ರಾಜ್ಯಾದ್ಯಂತ ಮದ್ಯದ ಅಂಗಡಿಗಳು ತಲೆ ಎತ್ತಿದ್ದವು.

ಸದ್ಯ ಪಕ್ಷದಿಂದ ನಿಯೋಜಿತ ಮುಖ್ಯಮಂತ್ರಿ ಝೋರಾಂಥಂಗಾ ಪ್ರಕಟನೆ ಭಾರೀ ಚರ್ಚೆ ಮೂಡಿಸಿದೆ.

Comments are closed.