ರಾಷ್ಟ್ರೀಯ

ಮೃತ ತಂಗಿ ವಾಟ್ಸ್‌ಆ್ಯಪ್‌ನಲ್ಲಿ ಪತ್ತೆ

Pinterest LinkedIn Tumblr


ಗುಮ್ಲಾ: 8 ವರ್ಷದ ಹಿಂದೆ ಸತ್ತಿದ್ದಾಳೆ ಎಂದು ಹೇಳಲಾಗಿದ್ದ ಯುವತಿಯೋರ್ವಳು ಜೀವಂತವಾಗಿ ಪತ್ತೆಯಾಗಿದ್ದು, ಆಕೆ ಅನುಭವಿಸಿದ ನಕಯಾತನೆಗೆ ನ್ಯಾಯಬೇಕೆಂದು ಸಹೋದರನೀಗ ಕೋರ್ಟ್ ಮೆಟ್ಟಿಲೇರಿದ್ದಾನೆ.

ಸರಿತಾ ( ಹೆಸರು ಬದಲಿಸಲಾಗಿದೆ)ಳನ್ನು ಗುಮ್ಲಾದಿಂದ ಅಪಹರಿಸಿ ಮಾನವ ಕಳ್ಳಸಾಗಣೆ ಮಾಡಲಾಗಿತ್ತು. ಆಕೆಯನ್ನು ಮಾರಿದ್ದವರು ಸತ್ತಿದ್ದಾಳೆ ಎಂಬಂತೆ ಬಿಂಬಿಸಿದ್ದರು. ಇತ್ತೀಚಿಗೆ ವಾಟ್ಸ್‌ಆ್ಯಪ್‌ನಲ್ಲಿ ಆಕೆಯ ಫೋಟೋವನ್ನು ನೋಡಿದ ಸಹೋದರನಿಗೆ ತನ್ನ ಕಣ್ಣನ್ನು ತಾನೇ ನಂಬಲಾಗಲಿಲ್ಲ. ಸಂಬಳವನ್ನು ಸಹ ನೀಡದೆ ಮನೆಗೆಲಸದವಳಾಗಿ ಆಕೆಯನ್ನು ದುಡಿಸಿಕೊಳ್ಳಲಾಗುತ್ತಿದೆ ಎಂಬ ಕಟು ಸತ್ಯ ಕೂಡ ಬೆಳಕಿಗೆ ಬಂದಿದೆ.

ತಕ್ಷಣ ಮಾನವ ಕಳ್ಳಸಾಗಣೆ ವಿರೋಧಿ ಘಟಕವನ್ನು ಸಂಪರ್ಕಿಸಿದ ಆತ ತನ್ನ ತಂಗಿಯನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ ದಿಲ್ಲಿಯ ರಾಖಿ ಸಿಂಗ್ ಎಂಬಾತನ ಪಾತ್ರವಿದೆ. ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾನೆ.

Comments are closed.