ರಾಷ್ಟ್ರೀಯ

21 ವರ್ಷದ ನಂತರ ವಿಚ್ಛೇಧನ ಕೇಳಿದ ರಾಜಸ್ಥಾನದ ಬಿಜೆಪಿ ಶಾಸಕಿ, ರಾಜವಂಶಸ್ಥೆ ದಿಯಾ ಕುಮಾರಿ

Pinterest LinkedIn Tumblr


ನವದೆಹಲಿ: ಜೈಪುರದ ರಾಜವಂಶಸ್ಥೆ ಮತ್ತು ಬಿಜೆಪಿ ಶಾಸಕಿ ದಿಯಾ ಕುಮಾರಿ ಅವರು ತಮ್ಮ ಪತಿ ನರೇಂದ್ರ ಸಿಂಗ್​ ಅವರಿಂದ ವಿವಾಹ ವಿಚ್ಛೇದನಾ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇವರಿಬ್ಬರೂ 21 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

ಹಿಂದೂ ವಿವಾಹ ಕಾಯ್ದೆ ಸೆಕ್ಷನ್​ 13ಬಿ ಅಡಿ ಗಾಂಧಿ ನಗರದ ಕುಟುಂಬ ನ್ಯಾಯಾಲಯದಲ್ಲಿ ದಿಯಾ ಕುಮಾರಿ ಡೈವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲ ವರದಿಗಳ ಪ್ರಕಾರ, ಇವರಿಬ್ಬರೂ ಕೆಲ ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಮತ್ತು ಪ್ರತ್ಯೇಕವಾಗಲು ಪರಸ್ಪರ ಒಪ್ಪಿಯೇ ಡೈವೋರ್ಸ್​ ಪಡೆಯಲು ಕೋರ್ಟ್​ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ನರೇಂದ್ರ ಸಿಂಗ್ ಅವರು ಅಗರ್ಭ ಶ್ರೀಮಂತರಾಗಿದ್ದು, 1997 ಆಗಸ್ಟ್​ನಲ್ಲಿ ಸವಾಯಿ ಮಾಧವ್​ಪುರ ಶಾಸಕಿ ದಿಯಾ ಕುಮಾರಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ ಎರಡು ಗಂಡು ಮತ್ತು ಒಬ್ಬಳು ಮಗಳಿದ್ದಾಳೆ.

ಮೂಲಗಳ ಪ್ರಕಾರ, ಮುಂದಿನ ಲೋಕಸಭಾ ಚುನಾವಣೆಗೆ ರಾಜ ಕುಟುಂಬದ ಸದಸ್ಯರನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

Comments are closed.