ರಾಷ್ಟ್ರೀಯ

ಕೇರಳದ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ: ರಾಜ್ಯದ ಕೊಡಗು, ಮೈಸೂರು ಜನರಿಗೆ ಅನುಕೂಲ

Pinterest LinkedIn Tumblr


ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ಉದ್ಘಾಟಿಸಿದ್ದಾರೆ. ಬೆಳಿಗ್ಗೆ 10 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಕಣ್ಣೂರಿನಿಂದ ಅಬುದಾಬಿಗೆ ಹಾರಾಟ ನಡೆಸುವ ಏರ್​ ಇಂಡಿಯಾ ಏಕ್ಸ್​ಪ್ರೆಸ್​ ವಿಮಾನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ವಿಮಾನಯಾನಕ್ಕೆ ಚಾಲನೆ ನೀಡಿದರು.

ಏರ್​ ಇಂಡಿಯಾದ 737 ಬೋಯಿಂಗ್ ವಿಮಾನ ಕಣ್ಣೂರಿನಿಂದ ಚೊಚ್ಚಲ ಹಾರಾಟ ನಡೆಸಿದ್ದು, ಇದರಲ್ಲಿ 185 ಮಂದಿ ಪ್ರಯಾಣಿಕರಿದ್ದರು. ಇದೇ ವಿಮಾನ ಇಂದು ಸಂಜೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಅಬುಧಾಬಿಯಿಂದ ವಾಪಸ್​ ಆಗಲಿದೆ. ನಾಳೆಯಿಂದ ಅಂತರಾಷ್ಟ್ರೀಯ ಪ್ರಯಾಣದ ಸರಿಯಾದ ಸೇವೆ ಲಭ್ಯವಾಗಲಿದೆ ಎಂದು ಏರ್​ಪೋರ್ಟ್​ ಆಡಳಿತ ಮಂಡಳಿ ತಿಳಿಸಿದೆ.

ಬೆಂಗಳೂರು ಟು ಕಣ್ಣೂರು

ಬೆಳಿಗ್ಗೆ ಬೆಂಗಳೂರಿನಿಂದ ಗೋ ಏರ್​ ವಿಮಾನ ಕಣ್ಣೂರಿನ ಹೊಸ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಗೋ ಏರ್​ ವಿಮಾನ ಮತ್ತು ಇಂಡಿಗೊ ವಿಮಾನಗಳು ಕಣ್ಣೂರಿಗೆ ವಿಮಾನ ಸೇವೆಯನ್ನು ಒದಗಿಸಲಿದೆ.

ಮಡಿಕೇರಿ-ಮೈಸೂರು ಜನರಿಗೆ ಅನುಕೂಲ
ಕಣ್ಣೂರು ಏರ್​ಪೋರ್ಟ್ ಉದ್ಘಾಟನೆಯಿಂದ​ ಕೇರಳದ ಗಡಿ ಜಿಲ್ಲೆಗಳಾದ ಕೊಡಗು ಮತ್ತು ಮೈಸೂರು ಭಾಗದ ಜನರಿಗೆ ಅನುಕೂಲವಾಗಲಿದೆ. ಕೊಡಗು ಮತ್ತು ಮೈಸೂರು ಜಿಲ್ಲೆಗಳ ವಿಮಾನ ಪ್ರಯಾಣಿಕರು ಬೆಂಗಳೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಆಶ್ರಯಿಸುತ್ತಿದ್ದು, ಇನ್ನುಮುಂದೆ ಈ ಎರಡು ಏರ್​ಪೋರ್ಟ್​ಗಳಿಗಿಂತಲೂ ಕಣ್ಣೂರು ವಿಮಾನ ನಿಲ್ದಾಣ ಹತ್ತಿರವಾಗಲಿದೆ.

ನಗರ ಮತ್ತು ವಿಮಾನ ನಿಲ್ದಾಣ ದೂರ (ಕಿ.ಮೀ)
ಮೈಸೂರು – ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ 184 kms
ಮೈಸೂರು – ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 158 kms
ಮಡಿಕೇರಿ – ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ 275 kms
ಮಡಿಕೇರಿ – ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 90 kms
ಮಡಿಕೇರಿ – ಮೈಸೂರು ವಿಮಾನ ನಿಲ್ದಾಣ 130 kms
ವಿರಾಜಪೇಟೆ – ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 59 kms

Comments are closed.