ರಾಷ್ಟ್ರೀಯ

ಓವೈಸಿ ಬಿಟ್ಟುಬಂದರೆ ಸಹಕಾರ ನೀಡುತ್ತೇವೆ; ಕೆಸಿಆರ್​ಗೆ ಬಿಜೆಪಿ

Pinterest LinkedIn Tumblr


ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಕ್ಕೆ ಇನ್ನೆರಡು ದಿನ ಬಾಕಿ ಇದೆ. ಈ ನಡುವೆ, ಅಸಾದುದ್ದೀನ್​ ಓವೈಸಿ ಪಕ್ಷ ಎಐಎಂಐಎಂ ಪಕ್ಷವನ್ನು ತೊರೆದರೆ ಸಹಕಾರ ನೀಡುವುದಾಗಿ ಟಿಆರ್​ಎಸ್​ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್​ ಅವರಿಗೆ ತೆಲಂಗಾಣ ಬಿಜೆಪಿ ಹೇಳಿದೆ.

ತೆಲಂಗಾಣ ಬಿಜೆಪಿ ನಾಯಕ ಕೆ.ಲಕ್ಷ್ಮಣ್​ ನ್ಯೂಸ್​ 18ನೊಂದಿಗೆ ಮಾತನಾಡಿ, ತೆಲಂಗಾಣದಲ್ಲಿ ಬಿಜೆಪಿ ಸಹಕಾರವಿಲ್ಲದೇ ಯಾವ ಪಕ್ಷವೂ ಅಧಿಕಾರಕ್ಕ ಬರುವುದಿಲ್ಲ ಭವಿಷ್ಯ ನುಡಿದಿದ್ದಾರೆ.

“ಟಿಆರ್​ಎಸ್​ ನಿಲುವು ಸ್ಪಷ್ಟವಾಗಿದೆ. ಟಿಆರ್​ಎಸ್​, ಎಐಎಂಐಎಂ ಪಕ್ಷದೊಂದಿಗೆ ಮೈತ್ರಿಯಾಗಿದೆ. ಹೀಗಾಗಿ ಬಿಜೆಪಿ ಟಿಆರ್​ಎಸ್​ಗೆ ಸಹಕಾರ ನೀಡುವ ಪ್ರಶ್ನೆಯೇ ಬರುವುದಿಲ್ಲ. ಬಿಜೆಪಿ ಕಾಂಗ್ರೆಸ್ಸೇತರ ಮತ್ತು ಮುಸ್ಲಿಂಯೇತರ ಪಕ್ಷಗಳಿಗೆ ಮಾತ್ರ ಸಹಕಾರ ನೀಡುತ್ತದೆ. ಅಂತಿಮ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ತೆಗೆದುಕೊಳ್ಳುತ್ತಾರೆ. ಆದರೆ, ತೆಲಂಗಾಣದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವುದಿಲ್ಲ,” ಎಂದು ಲಕ್ಷ್ಮಣ್​ ಅಭಿಪ್ರಾಯಪಟ್ಟರು.

ಟಿಆರ್​ಎಸ್​ ಬಿಜೆಪಿಯ ಬಿ ಟೀಮ್​ ಎಂದು ಕಾಂಗ್ರೆಸ್​ ಮತ್ತು ಟಿಡಿಪಿ ಈ ಹಿಂದೆ ಆರೋಪ ಮಾಡಿತ್ತು. ಕೆಸಿಆರ್​ ವಿರುದ್ಧ ಬಿಜೆಪಿ ಕೂಡ ಇದೇ ರೀತಿಯ ಆರೋಪ ಮಾಡಿತ್ತು.

ಇದನ್ನು ಓದಿ: ತೆಲಂಗಾಣ ಚುನಾವಣೆ: ಕಾಂಗ್ರೆಸ್​​-ಟಿಡಿಪಿ ಲೆಕ್ಕಾಚಾರ vs ಟಿಆರ್​ಎಸ್​​ ಊಹೆ; ಯಾರಿಗೆ ಸಿಗಲಿದೆ ಗೆಲುವಿನ ಹಾರ?

ಈ ಹಿಂದೆ ಓವೈಸಿ, ಹೈದರಾಬಾದ್​ನಲ್ಲಿ ಸೋಲುವ ಸ್ಥಳಗಳಲ್ಲೂ ಪಕ್ಷ ಗೆಲ್ಲಲಿದೆ. ಕೆಸಿಆರ್​ ಮತ್ತೆ ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಹೇಳಿದ್ದರು. ಆದಾಗ್ಯೂ, ತಮ್ಮ ಪಕ್ಷ ಸರ್ಕಾರದ ಒಂದು ಭಾಗವಾಗಿ ಜೊತೆಯಾಗುವುದಿಲ್ಲ ಎಂದು ಹೇಳಿದ್ದರು.

ಮತದಾನ ಮುಗಿದ ನಂತರ ಹೊರಬಿದ್ದ ಮತಗಟ್ಟೆ ಸಮೀಕ್ಷೆಗಳಲ್ಲಿ ಕೆಸಿಆರ್​ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ಹೇಳಲಾಗಿದೆ. ರಿಪಬ್ಲಿಕ್​ ಟಿವಿ ಮತ್ತು ಟೈಮ್ಸ್​ ನೌ ಪ್ರಕಾರ ಟಿಆರ್​ಎಸ್​ 119 ವಿಧಾನಸಭಾ ಕ್ಷೇತ್ರಗಳಲ್ಲಿ 50ರಿಂದ 65 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ ಎಂದು ಹೇಳಿದೆ. ಟಿವಿ 9 ತೆಲುಗು ಮತ್ತು ಇಂಡಿಯಾ ಟುಡೇ ಪ್ರಕಾರ 75ರಿಂದ 85 ಮತ್ತು 75ರಿಂದ 91 ಸೀಟುಗಳನ್ನು ಗೆಲ್ಲಲಿದೆ ಎನ್ನಲಾಗಿದೆ. ಇನ್ನು ಕೆಲ ಮತಗಟ್ಟೆ ಸಮೀಕ್ಷೆಗಳು ತೆಲಂಗಾಣದಲ್ಲಿ ಟಿಆರ್​ಎಸ್​ ಮತ್ತು ಕಾಂಗ್ರೆಸ್​-ಟಿಡಿಪಿ ಮೈತ್ರಿಯ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ ಎಂದು ಹೇಳಿವೆ.

ಡಿಸೆಂಬರ್​ 11ರಂದು ಫಲಿತಾಂಶ ಪ್ರಕಟವಾಗಲಿದೆ. ಯಾರಿಗೆ ತೆಲಂಗಾಣ ಎಂಬುದು ಅಂದೇ ನಿರ್ಧಾರವಾಗಲಿದೆ.

Comments are closed.