ರಾಷ್ಟ್ರೀಯ

ವೀಡಿಯೋ ಮಾಡಿ ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆಗೆ ಶರಣು!

Pinterest LinkedIn Tumblr


ನವದೆಹಲಿ: 20 ವರ್ಷದ ಯುವಕನೊಬ್ಬ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿನ ಕಲ್ಯಾಣ ರೈಲ್ವೆ ಸ್ಟೇಷನ್ ನಲ್ಲಿ ರೈಲ್ವೆ ಹಳಿಗೆ ಹಾರುವ ಮುನ್ನ ವಿಡೀಯೋ ಮೆಸೇಜ್ ವೊಂದನ್ನು ಮಾಡಿದ್ದಾನೆ.

ಈ ಘಟನೆ ಗುರುವಾರದಂದು ನಡೆದಿದ್ದು ಆ ವ್ಯಕ್ತಿಯ ದೇಹದ ಭಾಗಗಳು ಚಿದ್ರವಾಗಿ ರೈಲ್ವೆ ಹಳಿಯ ಪಕ್ಕದಲ್ಲಿ ಬಿದ್ದಿವೆ.ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ರೋಹಿತ್ ಪರದೇಶಿ ಎಂದು ಗುರುತಿಸಲಾಗಿದ್ದು,ಆದರೆ ಈತನ ನಿರ್ಧಾರದ ಹಿಂದೆ ಇರುವವರನ್ನು ಇನ್ನು ಪತ್ತೆ ಹಚ್ಚಬೇಕಾಗಿದೆ.ಈತನ ಮೊಬೈಲ್ ವಿಡಿಯೋದಲ್ಲಿರುವ ಸಂದೇಶದ ಪ್ರಕಾರ ಈ ಘಟನೆಗೆ ಯಾರು ಕಾರಣಕರ್ತರಲ್ಲ ಎಂದು ಅವನು ಹೇಳಿಕೊಂಡಿದ್ದಾನೆ.

ಈ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಕಲ್ಯಾಣ ರೈಲ್ವೆ ಸ್ಟೇಷನ್ ಪೋಲಿಸ್ ಇನ್ಸ್ಪೆಕ್ಟರ್ ದಿನಕರ್ ಪಿನ್ಗ್ಲೆ ಪ್ರಕರಣವನ್ನು ದಾಖಲಾಗಿಸಿದೆ ಮತ್ತು ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ವೈರಲ್ ಆಗಿದೆ.ಆದ್ದರಿಂದ ಇದನ್ನು ಈಗ ತನಿಖೆ ಒಳಪಡಿಸಲಾಗಿದೆ.

Comments are closed.