ರಾಷ್ಟ್ರೀಯ

ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್​ ಗಳು ಇದ್ದರೆ ಅಪಾಯ ಗ್ಯಾರೆಂಟಿ: 22 ವೈರಸ್ ಅಪ್ಲಿಕೇಶನ್ ಪಟ್ಟಿ

Pinterest LinkedIn Tumblr


ಸ್ಮಾರ್ಟ್​ಫೋನ್​​ನ್ನು ಗುರಿಯಾಗಿಸಿರುವ ಹ್ಯಾಕರ್​​ಗಳಿಂದ ಬಳಕೆದಾರರ ಗೌಪ್ಯತೆ ಕಾಪಾಡಲು ಗೂಗಲ್​ ಪ್ಲೇ ಸ್ಟೋರ್ 22 ಅಪ್ಲಿಕೇಶನ್​ಗಳನ್ನು ತೆಗೆದು ಹಾಕಿದೆ. ಬ್ರಿಟಿಷ್ ಸೆಕ್ಯುರಿಟಿ ಸಾಫ್ಟ್​ವೇರ್ ಅ್ಯಂಡ್ ಹಾರ್ಡ್​ವೇರ್​ ಕಂಪೆನಿ Sophos ಪ್ರಕಾರ ಈ ಆ್ಯಪ್​ಗಳಿಂದ ಬಳಕೆದಾರರ ಡೇಟಾ ಸೋರಿಕೆಯಾಗುತ್ತಿತ್ತು ಎಂದು ತಿಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಆ್ಯಪ್​ಗಳನ್ನು ಕೈ ಬಿಡಲಾಗಿದೆ.

ವೈರಸ್​ಗಳಿಂದ ಕೂಡಿದ್ದ ಈ ಅಪ್ಲಿಕೇಶನ್​ಗಳನ್ನು ಈಗಾಗಲೇ 2 ಮಿಲಿಯನ್​ನಷ್ಟು ಬಳಕೆದಾರರು ಡೌನ್​ಲೋಡ್​ ಮಾಡಿಕೊಂಡಿದ್ದಾರೆ. ಇದರಿಂದ ಹ್ಯಾಕರ್​ಗಳು ಸ್ಮಾರ್ಟ್​ಫೋನ್​ನ ಬಳಕೆದಾರರ ಮಾಹಿತಿ ಕದಿಯಲು ಸುಲಭವಾಗುತ್ತಿತ್ತು. ಅದರಲ್ಲಿ 19 ಆ್ಯಪ್​ಗಳು ಈ ವರ್ಷ ಜೂನ್​ ನಂತರ ಬಿಡುಗಡೆಯಾಗಿತ್ತು ಎಂದು ತಿಳಿಸಲಾಗಿದೆ.

ಈ ಆ್ಯಪ್​ಗಳು Andr ಮತ್ತು Clickr ಆ್ಯಡ್​ ನೆಟ್​ವರ್ಕ್​ಗಳೊಂದಿಗೆ ಸಂಪರ್ಕ ಹೊಂದಿದ್ದು, ಈ ಮೂಲಕ ಫೇಕ್​ ಕ್ಲಿಕ್​ನಿಂದ ಆದಾಯವನ್ನು ಗಳಿಸುತ್ತಿದೆ ಎಂದು Sophos ಕಂಪೆನಿ ನಡೆಸಿದ ತನಿಖೆಯಿಂದ ತಿಳಿದು ಬಂದಿದೆ. ಈ ಎಲ್ಲ ಅಪ್ಲಿಕೇಶನ್​ಗಳು ವವ್ಯಸ್ಥಿತ ವೈರಸ್​ಗಳಿಂದ ಕೂಡಿದ್ದು, ಸ್ಮಾರ್ಟ್​ಫೋನ್​ ಬಳಕೆದಾರರನ್ನು ಟಾರ್ಗೆಟ್ ಮಾಡಲಾಗಿದೆ. ಇದರ ಸಹಾಯದಿಂದ ಹ್ಯಾಕರ್​​ಗಳು ಮೊಬೈಲ್ ಮೇಲೆ ದಾಳಿ ಮಾಡುತ್ತಿದೆ ಎಂದು ಎಚ್ಚರಿಸಲಾಗಿದೆ.

ಈ ಆ್ಯಪ್​ಗಳನ್ನು ಬಳಸಿದರೆ ಫೋನ್ ಬ್ಯಾಟರಿ ಮೇಲೆ ನೇರ ಪರಿಣಾಮ ಬೀರುತ್ತಿದೆ. ಅದೇ ರೀತಿ ಬಳಕೆದಾರರ ಡೇಟಾ ಮೇಲೆ ಕಣ್ಣಿಟ್ಟಿರುವ ಹ್ಯಾಕರ್​ಗಳು ಈ ವೈರಸ್​ ಆ್ಯಪ್​ಗಳ ಮೂಲಕ ನಿಮ್ಮ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ ಎಂದು ತಿಳಿಸಲಾಗಿದೆ. ಈ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿಕೊಂಡವರು ತಕ್ಷಣವೇ ಅನ್​ಇನ್​ಸ್ಟಾಲ್ ಮಾಡಿಕೊಳ್ಳುವ ಮೂಲಕ ಮುಂದಿನ ತೊಂದರೆಗಳಿಂದ ಪಾರಾಗಬಹುದು ಎಂದು ಸೊಪೋಸ್ ತಿಳಿಸಿದೆ.

22 ವೈರಸ್ ಅಪ್ಲಿಕೇಶನ್ ಪಟ್ಟಿ
ಪಾರ್ಕ್ ಫ್ಲ್ಯಾಶ್​ಲೈಟ್​ (Parkle FlashLight)
ಸ್ನೇಕ್ ಅಟ್ಯಾಕ್ ( Snake Attack)
ಮ್ಯಾಥ್ ಸೊಲ್ವರ್ (Math Solver)
ಶೇಪ್​ಸೊರ್ಟರ್ (ShapeSorter)
ಟೇಕ್​ ಎ ಟ್ರಿಪ್ (Tak A Trip)
ಮ್ಯಾಗ್ನೀಫೆ (Magnifeye)
ಜಾಯಿನ್ ಅಪ್ (Join Up)
ಝೊಂಬಿ ಕಿಲ್ಲರ್ (Zombie Killer)
ಸ್ಪೇಸ್ ರಾಕೆಟ್ (Space Rocket)
ನಿಯಾನ್ ಪಾಂಗ್ (Neon Pong)
ಜಸ್ಟ್​ ಫ್ಲ್ಯಾಶ್​​ಲೈಟ್ (Just Flashlight)
ಟೇಬಲ್ ಸಾಕರ್ (Table Soccer)
ಕ್ಲಿಫ್ ಡೈವರ್ (Cliff Diver)
ಬಾಕ್ಸ್ ಸ್ಟಾಕ್ (Box Stack)
ಜೆಲ್ಲಿ ಸ್ಲೈಸ್ (Jelly Slice)
ಎಕೆ ಬ್ಲ್ಯಾಕ್​ಜಾಕ್ (AK Blackjack)
ಕಲರ್​ ಟೈಲ್ಸ್ (Color Tiles)
ಅನಿಮಲ್ ಮ್ಯಾಚ್ (Animal Match)
ರೂಲೆಟ್ ಮೆನಿಯಾ (Roulette Mania)
ಹೆಕ್ಸಾಫಲ್ (HexaFall)
ಹೆಕ್ಸಾಬ್ಲಾಕ್ಸ್ (HexaBlocks)
ಪೇರ್​ಝಾಪ್ (PairZap)

Comments are closed.