ಬೆಂಗಳೂರು: ಅಪಾರ ಜನಸಾಗರವಿರುವ ಫೋಟೋವನ್ನು ಪೋಸ್ಟ್ ಮಾಡಿ ಜೋದ್ಪುರದಲ್ಲಿ ಮೋದಿ ರಾರಯಲಿಯಲ್ಲಿ ಭಾಗವಹಿಸಿದ್ದ ಜನಸಾಗರ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಿಷಿ ಬಗ್ರೀ ಎಂಬ ಹೆಸರಿನ ಟ್ವೀಟರ್ ಖಾತೆಯು, ಈ ಪೋಟೋವನ್ನು ಪೋಸ್ಟ್ ಮಾಡಿ, ‘ಇವು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಜೋದ್ಪುರ ಚುನಾವಣಾ ರಾರಯಲಿಯ ಚಿತ್ರಗಳು. ಇದನ್ನು ನೋಡಿ ಕಾಂಗ್ರೆಸ್ ನಾಯಕರು ಆತಂಕಗೊಂಡಿರಬಹುದು’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಮಾಡಿ ಅದು ವೈರಲ್ ಆದ ಬಳಿಕ ಟ್ವೀಟನ್ನು ಡಿಲೀಟ್ ಮಾಡಲಾಗಿದೆ.
ಆದ ನಿಜಕ್ಕೂ ಈ ಫೋಟೋಗಳು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಜೋದ್ಪುರದಲ್ಲಿ ನಡೆಸಿದ ರಾಲಿಯ ಫೋಟೋವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ಈ ಫೋಟೋಗಳು ಜೋದ್ಪುರ ಇತ್ತೀಚಿನ ಚುನಾವಣಾ ರಾರಯಲಿಗೇ ಸಂಬಂಧಿಸಿದವಲ್ಲ ಎಂಬುದು ದೃಢವಾಗಿದೆ. ಆಲ್ಟ್ನ್ಯೂಸ್ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲಿಸಿದಾಗ ಇವು ನವೆಂಬರ್ 28, 2013ರ ನರೇಂದ್ರ ಮೋದಿಯವರ ಜೋದ್ಪುರ ರಾರಯಲಿ ಫೋಟೋಗಳು ಎಂಬುದು ಪತ್ತೆಯಾಗಿದೆ.
ಮೊದಲನೇ ಚಿತ್ರವನ್ನು ಬಿಜೆಪಿ ಐಟಿ ಹೆಡ್ ಅಮಿತ್ ಮಾಳ್ವಿಯಾ ಮತ್ತು ಎಂಎಲ್ಎ ಪಿಯೂಷ್ ದೇಸಾಯಿ 2013 ನವೆಂಬರ್ನಂದು ಟ್ವೀಟ್ ಮಾಡಿದ್ದರು. ಎರಡನೇ ಚಿತ್ರ, ಅದೇ ದಿನ ನರೇಂದ್ರ ಮೋದಿ ನಡೆಸಿದ್ದ ರಾರಯಲಿಯ ಇನ್ನಿತರ ಫೋಟೋಗಳು. ಮೂರನೇ ಫೋಟೋ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ ಹುಮಾಯುನ್ ಬೆನಿವಾಲ್ 2018 ಜನವರಿಯಲ್ಲಿ ಆಯೋಜಿಸಿದ್ದ ಕಿಸಾನ್ ಹಂಕಾರ್ ರಾರಯಲಿಯ ಫೋಟೋ. ಹೀಗೆ ವಿವಿಧ ಸಂದರ್ಭಗಳ ಫೋಟೋವನ್ನು ಒಗ್ಗೂಡಿಸಿ, ಇತ್ತೀಚೆಗೆ ಜೋದ್ಪುರದಲ್ಲಿ ನೇಂದ್ರ ಮೋದಿ ಕೈಗೊಂಡಿದ್ದ ಚುನಾವಣಾ ರಾರಯಲಿಯಲ್ಲಿ ಸೇರಿದ್ದ ಜನಸಾಗರ ಎಂದು ಸುಳ್ಳುಸುದ್ದಿ ಹರಡಲಾಗಿದೆ.
-ವೈರಲ್ ಚೆಕ್
Comments are closed.