ರಾಷ್ಟ್ರೀಯ

ಪ್ರಯಾಗ್​ರಾಜ್​ನಲ್ಲಿ ಜನವರಿಯಿಂದ ಮಾರ್ಚ್​ವರೆಗೆ ಮದುವೆ ಮಾಡುವಂತಿಲ್ಲ; ಯೋಗಿ

Pinterest LinkedIn Tumblr


ಲಕ್ನೋ: ಹೊಸ ವರ್ಷ 2019ರ ಆರಂಭದಲ್ಲಿ ಜನವರಿ ಮತ್ತು ಮಾರ್ಚ್​ ವೇಳೆ ಮದುವೆಯಾಗಬೇಕು ಎಂದು ಕನಸುಕಾಣುತ್ತಿದ್ದ ಪ್ರಯಾಗ್​ರಾಜ್​ನ ಜನರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್​ ಶಾಕ್​ ನೀಡಿದ್ದಾರೆ.

ಪ್ರಯಾಗರಾಜ್​ನಲ್ಲಿ ಜನವರಿ ಹಾಗೂ ಮಾರ್ಚ್​ ನಡುವೆ ಮದುವೆ ನಿಶ್ಚಯ ಮಾಡಿಕೊಂಡಿದ್ದರೆ ಅದನ್ನು ಮುಂದೂಡಿ ಅಥವಾ ನಿಮ್ಮ ಮದುವೆ ಸ್ಥಳವನ್ನು ಬದಲಾಯಿಸಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಕಾರಣ ಕುಂಭಮೇಳ.

ಮದುವೆ ನಿಶ್ಚಯಿಸಿಕೊಂಡಿರುವ ಕುಟುಂಬಸ್ಥರು ಈಗಾಗಲೇ ಅತಿಥಿ ಗೃಹಗಳಿಗೆ ಮುಂಗಡ ಹಣ ಪಾವತಿ ಮಾಡಿ ಬುಕಿಂಗ್​ ಮಾಡಿಕೊಂಡಿದ್ದಾರೆ. ಈಗ ಸರ್ಕಾರದ ಈ ಹೊಸ ನಿಯಮದಿಂದಾಗಿ ಅನೇಕ ಜನರು ಮದುವೆ ದಿನಾಂಕವನ್ನು ಮುಂದೂಡಿಸಿದ್ದು, ಕೆಲವರು ಸಮೀಪದ ಜಿಲ್ಲೆಯ ಸ್ಥಳಗಳಿಗೆ ಬದಲಿಸಿಕೊಂಡಿದ್ದಾರೆ. ಮದುವೆ ಸುಗ್ಗಿ ಸಮಯದಲ್ಲಿ ಸರ್ಕಾರದ ಈ ನಿರ್ಣಯ ಅನೇಕ ವ್ಯವಹಾರಗಳ ಮೇಲೂ ಪರಿಣಾಮ ಬೀರಿದೆ.

ಕುಂಭ ಸ್ನಾನಕ್ಕೆ ಒಂದು ದಿನ ಮುಂಚಿತವಾಗಿ ಯಾವುದೇ ಮದುವೆ ಕಾರ್ಯವನ್ನು ನಡೆಸುವಂತಿಲ್ಲ ಎಂದು ಸರ್ಕಾರದಿಂದ ಜಿಲ್ಲಾಧಿಕಾರಿಗಳಿಗೂ ಆದೇಶ ರವಾನೆಯಾಗಿದೆ, ಈ ಹಿನ್ನಲೆಯಲ್ಲಿ ಹಲವರು ಈಗಾಗಲೇ ಬುಕ್ಕಿಂಗ್​ ರದ್ದುಗೊಳಿಸಿದ್ದಾರೆ.

ಜನವರಿಯಲ್ಲಿ ಮಕರ ಸಂಕ್ರಾತಿ ಹಾಗೂ ಪುಷ್ಯ ಪೂರ್ಣಿಮಾದಂದು ಪವಿತ್ರ ಸ್ನಾನವನ್ನು ಇಲ್ಲಿ ನಡೆಸಲಾಗುತ್ತದೆ. ಫೆಬ್ರವರಿಯಲ್ಲಿ ಮೌನಿ ಅಮವಾಸ್ಯೆ, ಬಸಂತ್​ ಪಂಚಮಿ ಹಾಗೂ ಮಗಾಯಿ ಪೂರ್ಣಿಮ ಇನ್ನು ಮಾರ್ಚ್​ನಲ್ಲಿ ಮಹಾಶಿವರಾತ್ರಿಯಂದು ಪವಿತ್ರ ಸ್ನಾನವನ್ನು ಜನರು ಮಾಡುತ್ತಾರೆ, ಈ ಪವಿತ್ರ ಆಚರಣೆಗಾಗಿ ಅನೇಕ ಭಕ್ತರು ಇಲ್ಲಿಗೆ ಆಗಮಿಸಿ, ಸ್ನಾನ ಕೈಗೊಳ್ಳುತ್ತಾರೆ.

Comments are closed.