ರಾಷ್ಟ್ರೀಯ

ತಮ್ಮ ಮೊಬೈಲ್‍ ಗಳಲ್ಲಿ ಹತ್ಯೆ ದೃಶ್ಯ ಸೆರೆ ಹಿಡಿಯುತ್ತ ನಿಂತ ಜನ!

Pinterest LinkedIn Tumblr


ಹೈದರಾಬಾದ್: ಜಗಳದ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯುತ್ತ ಜನರು ನಿಂತಿದ್ದು, ಯಾರೊಬ್ಬರೂ ಹಲ್ಲೆಯನ್ನು ತಡೆಯಲು ಮುಂದಾಗದೆ ಅಮಾನವೀಯತೆ ಮೆರದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಹೈದರಾಬಾದ್‍ನ ಜನನಿಬಿಡ ಪ್ರದೇಶವಾಗಿರುವ ನಯಾಪೌಲ್ ಸಮೀಪದ ಮೀರ್ ಚೌಕ್ ಎಂಬಲ್ಲಿ ಅಮಾನವೀಯ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಟೋ ಮಾಲೀಕ ಹಾಗೂ ಚಾಲಕ ಪರಸ್ಪರ ಜಗಳವಾಡಿ, ಮಾರಾಮಾರಿ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.

ಆಟೋ ಚಾಲಕ ಶಾಕೀರ್ ಖುರೇಷಿ (30) ಕೊಲೆಯಾದ ವ್ಯಕ್ತಿ. ಮಾಲೀಕ ಅಬ್ದುಲ್ (29) ಹತ್ಯೆ ಮಾಡಿದ ಆರೋಪಿ. ಅಬ್ದುಲ್‍ನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ವಿವರ: ಆರೋಪಿ ಅಬ್ದುಲ್ ತನ್ನ ಬಳಿ ಇರುವ ಆಟೋಗಳನ್ನು ಬೇರೆಯವರಿಗೆ ಬಾಡಿಗೆ ನೀಡುತ್ತಿದ್ದ. ಆದರೆ ಇಂದು ಶಾಕೀರ್ ಖುರೇಷಿ ಮತ್ತು ಅಬ್ದುಲ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಪರಿಣಾಮ ಇಬ್ಬರೂ ಹೊಡೆದಾಡಿ ಕೊಂಡಿದ್ದಾರೆ. ಬಳಿಕ ಅಬ್ದುಲ್ ತನ್ನ ಬಳಿಯಿದ್ದ ಚಾಕುವಿನಿಂದ ಶಾಕೀರ್ ಗೆ ಇರಿದು ಕೊಲೆ ಮಾಡಿದ್ದಾನೆ.

ಘಟನಾ ಸ್ಥಳದಲ್ಲಿ ಸಾವಿರಾರು ಜನರು ಸೇರಿದ್ದು, ಯಾರೊಬ್ಬರು ಹತ್ಯೆಯನ್ನು ತಡೆಯಲು ಮುಂದಾಗಲಿಲ್ಲ. ಹೊರತಾಗಿ ದೂರದಲ್ಲಿ ನಿಂತು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

Comments are closed.