ರಾಷ್ಟ್ರೀಯ

ಹಾಲಿ ಸರ್ಕಾರ ಕೇವಲ ವಿಗ್ರಹ ನಿರ್ಮಾಣಕ್ಕೇ ಲಾಯಕ್ಕು, ರಾಮ ಮಂದಿರ ನಿರ್ಮಾಣಕ್ಕಲ್ಲ: ಸ್ವಾಮಿಜೀಗಳ ಆಕ್ರೋಶ

Pinterest LinkedIn Tumblr

ನವದೆಹಲಿ: ಹಾಲಿ ಸರ್ಕಾರ ಕೇವಲ ವಿಗ್ರಹ ನಿರ್ಮಾಣಕ್ಕೇ ಲಾಯಕ್ಕು, ರಾಮ ಮಂದಿರ ನಿರ್ಮಾಣಕ್ಕಲ್ಲ ಎಂದು ಪರಮ ಧರ್ಮ ಸಂಸದ್ ಆಕ್ರೋಶ ವ್ಯಕ್ತಪಡಿಸಿದೆ.

ಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ಬೃಹತ್ ರಾಮನ ವಿಗ್ರಹ ನಿರ್ಮಾಣ ಸಂಬಂಧ ಕಳೆದ ನವೆಂಬರ್ 2ರಂದು ನಡೆದ ವಿಶ್ವ ಹಿಂದೂ ಪರಿಷತ್ ಸಭೆಯನ್ನು ರಾಜಕೀಯ ನಾಟಕ ಎಂದು ಕರೆದಿರುವ ದೇಶದ ಪ್ರಮುಖ ಮಠಾಧೀಶರ ಒಕ್ಕೂಟ ಪರಮ ಧರ್ಮ ಸಂಸದ್, ಹಾಲಿ ಸರ್ಕಾರ ಕೇವಲ ವಿಗ್ರಹಗಳನ್ನು ನಿರ್ಮಾಣ ಮಾಡುವುದಕ್ಕಷ್ಟೇ ಲಾಯಕ್ಕು, ರಾಮಮಂದಿರ ನಿರ್ಮಾಣಕ್ಕಲ್ಲ ಎಂದು ಕಿಡಿಕಾರಿದೆ.

ಅಂತೆಯೇ ಯಾರೇ ಆಗಲಿ ಶ್ರೀರಾಮನನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳಬಾರದು. ಬಿಜೆಪಿ ಸರ್ಕಾರದ ಮೇಲೆ ನಮಗೆ ಸಾಕಷ್ಟು ಭರವಸೆ ಇತ್ತು. ಕ್ರಮೇಣ ಅದು ಕಡಿಮೆಯಾಗುತ್ತಿದ್ದು, ಈ ಸರ್ಕಾರ ಕೇವಲ ವಿಗ್ರಹಗಳನ್ನು ನಿರ್ಮಾಣ ಮಾಡುವುದಕ್ಕಷ್ಟೇ ಲಾಯಕ್ಕು, ರಾಮಮಂದಿರ ನಿರ್ಮಾಣಕ್ಕಲ್ಲ ಎಂದು ಸಂಸದ್ ನ ದ್ವಾರಕಾ-ಶಾರದಾ ಮತ್ತು ಜ್ಯೋತಿಶ್ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಹೇಳಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರ ರಾಮನ ವಿಗ್ರಹ ನಿರ್ಮಾಣ ಯೋಜನೆಯನ್ನು ವಿರೋಧಿಸಿದ ಅವರು, ಶ್ರೀರಾಮನ ವಿಗ್ರಹಕ್ಕಿಂತ ಮೊದಲು ರಾಮಮಂದಿರ ನಿರ್ಮಾಣವಾಗಬೇಕು. ಇದು ಎಲ್ಲ ಹಿಂದೂಗಳ ದಶಕಗಳ ಆಸೆಯಾಗಿದೆ ಎಂದು ಹೇಳಿದರು.

1992ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. ಅಲ್ಲದೆ ಸಾಕ್ಷಿ ಸಮೇತ ಅದು ರಾಮಮಂದಿರ.. ಮಸೀದಿ ಅಲ್ಲ ಎಂದು ಸಾಬೀತು ಪಡಿಸಲಾಗಿತ್ತು. ಅಲ್ಲದೆ ಅದು ಹಿಂದಿನಿಂದಲೂ ಮಸೀದಿಯಾಗಿತ್ತು ಎಂಬ ವಾದಕ್ಕೆ ಪುಷ್ಠಿ ನೀಡುವ ಯಾವುದೇ ರೀತಿಯ ಪುರಾವೆ ಮುಸ್ಲಿಮರ ಬಳಿ ಇಲ್ಲ. ಹೀಗಿದ್ದೂ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಮೀನಾಮೇಷ ಎಣಿಸುತ್ತಿದೆ. ಇದು ಸರಿಯಲ್ಲ. ಯಾವುದೇ ರಾಜಕೀಯ ಪಕ್ಷಗಳಿಂದಲೂ ರಾಮಮಂದಿರ ನಿರ್ಮಾಣ ಸಾಧ್ಯವಾಗಿಲ್ಲ. ಆದರೆ ರಾಮಮಂದಿರ ನಿರ್ಮಾಣದ ಹೆಸರಲ್ಲಿ ಹಿಂದೂಗಳ ಭಾವನೆಗಳೊಂದಿಗೆ ಆಟವಾಡಿ ತಮ್ಮ ಮತ ಪೆಟ್ಟಿಗೆಯನ್ನು ತುಂಬಿಸಿಕೊಳ್ಳುತ್ತಿವೆ ಎಂದು ಕಿಡಿಕಾರಿದ್ದಾರೆ.

Comments are closed.