ರಾಷ್ಟ್ರೀಯ

ರಾಮಮಂದಿರ ನಿರ್ಮಾಣಕ್ಕೆ ದಿನಾಂಕ ಘೋಷಿಸಿ: ಶಿವಸೇನೆ

Pinterest LinkedIn Tumblr


ಹೊಸದಿಲ್ಲಿ: ಮಂದಿರ ನಿರ್ಮಾಣ ಕುರಿತಂತೆ ಕ್ರಮಕ್ಕೆ ಆಗ್ರಹಿಸಿ ಭಾನುವಾರ ಶಿವಸೇನೆ ಅಯೋಧ್ಯೆಯಲ್ಲಿ ಧರ್ಮ ಸಭಾ ಆಯೋಜಿಸಿದ್ದು, ಹಿಂದು ಪರ ವಿವಿಧ ಸಂಘಟನೆಗಳ ನಾಯಕರು, ಕಾರ್ಯಕರ್ತರು, ಸಾಧು-ಸಂತರಯ ಅಯೋಧ್ಯೆಯಲ್ಲಿ ಜಮಾಯಿಸಿದ್ದಾರೆ. ಈ ನಡುವೆ ರಾಮಮಂದಿರ ನಿರ್ಮಾಣಕ್ಕೆ ದಿನಾಂಕ ಘೋಷಿಸುವಂತೆ ಶಿವಸೇನೆ ಆಗ್ರಹಿಸಿದೆ.

ಶಿವಸೇನಾ ಮುಖ್ಯಸ್ಥ ಉಧ್ದವ್ ಠಾಕ್ರೆ ಕೂಡ ಶನಿವಾರವೇ ಆಗಮಿಸಿದ್ದು, ಕಾರ್ಯಕರ್ತರಿಗೆ ಹುರುಪು ನೀಡಿದ್ದಾರೆ. ವಿಶ್ವ ಹಿಂದು ಪರಿಷತ್ ಕೂಡ ಪ್ರತ್ಯೇಕವಾಗಿ ಕಾರ್ಯಕ್ರಮ ಆಯೋಜಿಸಿದೆ.

ಅಯೋಧ್ಯೆಯಲ್ಲಿ ಬೃಹತ್ ಸಂಖ್ಯೆಯ ಕಾರ್ಯಕರ್ತರು ಸೇರುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ. ಪೊಲೀಸ್ ಅಧಿಕಾರಿಗಳು, ಕಾನ್ಸ್‌ಟೆಬಲ್‌ಗಳು, ವಿಶೇಷ ಭದ್ರತಾ ಪಡೆ, ರಿಸರ್ವ್ ಪೊಲೀಸ್, ಕಮಾಂಡೋ ಮತ್ತು ಡ್ರೋನ್‌ಗಳನ್ನು ಕೂಡ ಒದಗಿಸಿ ಭದ್ರತೆ ಕಲ್ಪಿಸಲಾಗಿದೆ.

ಭಾನುವಾರದ ಕಾರ್ಯಕ್ರಮಕ್ಕೆ 3 ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದ್ದು, ರ‍್ಯಾಲಿ ನಡೆಸಲು ಶಿವಸೇನೆಗೆ ಅನುಮತಿ ದೊರೆತಿಲ್ಲ.

ಶನಿವಾರ ಅಯೋಧ್ಯೆಗೆ ಆಗಮಿಸಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ರಾಮ ಮಂದಿರ ನಿರ್ಮಾಣ ಆರಂಭಿಸಲು ದಿನ ನಿಗದಿಪಡಿಸಿ ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

ಬಿಜೆಪಿ ಕುಂಭಕರ್ಣ ಎಂದ ಶಿವಸೇನೆ
ಮಂದಿರ ನಿರ್ಮಾಣ ವಿಚಾರದಲ್ಲಿ ಬಿಜೆಪಿಯದ್ದು ಕುಂಭಕರ್ಣ ನಿದ್ದೆ ಎಂದು ಶಿವಸೇನೆ ಹೇಳಿದೆ. ಮಂದಿರ ನಿರ್ಮಾಣಕ್ಕೆ ಸೂಕ್ತ ಕಾನೂನು ರೂಪಿಸುವುದು, ಸುಗ್ರೀವಾಜ್ಞೆ ಹೊರಡಿಸಲು ಬಿಜೆಪಿ ಮನಸ್ಸು ಮಾಡುತ್ತಿಲ್ಲ ಎಂದು ಅದು ಹೇಳಿದೆ.

ಜನರು ತಾಳ್ಮೆ ಕಳೆದುಕೊಂಡಿದ್ದಾರೆ
ರಾಮ ಮಂದಿರ ನಿರ್ಮಾಣ ಕುರಿತು ಜನರು ತಾಳ್ಮೆ ಕಳೆದುಕೊಂಡಿದ್ದಾರೆ. ಜನರೇ ಮಂದಿರ ನಿರ್ಮಾಣ ಮಾಡಲಿದ್ದಾರೆ ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಮಂದಿರ ನಿರ್ಮಾಣಕ್ಕೆ ಕಾನೂನು ತರಲಿ
ಕೇಂದ್ರ ಸರಕಾರ ಶೀಘ್ರವೇ ಸೂಕ್ತ ಕಾನೂನು ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

Comments are closed.