ಜಾಕ್ರಿತ್… ಈ ಹೆಸರು ಕೇಳಿದೊಡನೆ ಮಿಲಿಟರಿ ಪಡೆಯಲ್ಲಿದ್ದವರಿಗೆ ಅದೇನೋ ಗೌರವ. ಮೇಜರ್ ಸ್ಥಾನಕ್ಕೆ ನ್ಯಾಯ ಸಲ್ಲಿಸುವ ಏಕವ್ಯಕ್ತಿ ಜಾಕ್ರಿತ್ ಎಂಬ ಅಭಿಪ್ರಾಯಗಳು ಸೇನಾಪಡೆಯಲ್ಲಿದ್ದ ಕಿರಿಯರ ಮನದಲ್ಲಿತ್ತು. ಆದರೆ ಅವರ ಮೇಲೊಂದು ಅಪಾದನೆ ಕೇಳಿ ಬಂದಾಗ ಯಾರೂ ಕೂಡ ಒಪ್ಪುವ ಸ್ಥಿತಿಯಲ್ಲಿರಲಿಲ್ಲ. ಮೊದಲಿಗೆ ಅದನ್ನು ಯಾರೂ ಸಹ ನಂಬಿರಲಿಲ್ಲ. ಜಾಕ್ರಿತ್ ಎಂಬ ಅಧಿಕಾರಿಯನ್ನು ಮುಗಿಸಲು ಹಿರಿಯ ಅಧಿಕಾರಿಗಳು ನಡೆಸಿರುವ ಸಂಚು ಎಂಬ ಮಾತುಗಳು ಕೂಡ ಕ್ಯಾಂಪ್ನಲ್ಲಿ ಹರಿದಾಡಿತ್ತು.
ಆದರೆ ಅಸಲಿಗೆ ಅಲ್ಲಿ ನಡೆದದ್ದೇನು? ಜಾಕ್ರಿತ್ನಂತಹ ಸೇನಾಧಿಕಾರಿ ಮೇಲೆ ಮಾಡಿದ ಆರೋಪವೇನು? ನಿಜವಾಗಲೂ ಹೀರೋ ಎನಿಸಿಕೊಂಡ ಅಧಿಕಾರಿ ಝೀರೋ ಆಗಿ ಸೇನೆಯಿಂದ ಹೊರ ಬಂದರಾ? ಹೌದು, ಶ್ರೇಷ್ಠ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ಒಬ್ಬ ಸೇನಾಧಿಕಾರಿ ಕಹಾನಿ ಇದು. ಅದಕ್ಕಿಂತಲೂ ಹೀರೋ ಎನಿಸಿಕೊಂಡ ವ್ಯಕ್ತಿಯೊಬ್ಬರ ನೈಜಕಥೆ.
ಇಂದಿನ ಯುವಕ-ಯುವತಿಯರಂತೆ 43ರ ಹರೆಯದಲ್ಲೂ ಮೇಜರ್ ಜಾಕ್ರಿತ್ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದರು. ಫೇಸ್ಬುಕ್, ವಾಟ್ಸಪ್ನಂತಹ ಸೋಶಿಯಲ್ ನೆಟ್ವರ್ಕ್ನ್ನು ಲೀಲಾಜಾಲವಾಗಿ ಬಳಸಿಕೊಳ್ಳುವ ಪ್ರವೀಣ್ಯತೆ ಪಡೆದಿದ್ದರು. ಹೀಗಾಗಿಯೇ ಅವರ ಪ್ರೊಫೈಲ್ ಎಲ್ಲರನ್ನು ಆರ್ಕಷಿಸುತ್ತಿತ್ತು. ಮುಖ್ಯವಾಗಿ ಹದಿ ಹರೆಯದ ಹುಡುಗರನ್ನು. ಹೀಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಹುಡುಗರೊಂದಿಗೆ ಹೆಚ್ಚಾಗಿ ಫ್ರೆಂಡ್ಶಿಪ್ ಬೆಳೆಸಿಕೊಳ್ಳುತ್ತಿದ್ದರು. ಸೇನಾ ಲೀಡರ್ ಆಗಿದ್ದರಿಂದಲೋ, ಜಾಕ್ರಿತ್ ಪ್ರತಿ ಮಾತುಗಳಿಗೆ ಹುಡುಗರು ಹೆಚ್ಚು ಆಕರ್ಷಿತರಾಗುತ್ತಿದ್ದರು. ತಮ್ಮ ಮಾತಿನ ಛಾತಿ ಮೂಲಕ ಹುಡುಗರನ್ನು ತಲೆದೂಗುವಂತೆ ಮಾಡುವ ಕಲೆ ಜಾಕ್ರಿತ್ಗೆ ಸಿದ್ಧಿಸಿದಂತಿತ್ತು.
ಹೊಸ ಹೊಸ ಫ್ರೆಂಡ್ಸ್ಗಳೊಂದಿಗೆ ಅನೇಕ ವಿಷಯಗಳನ್ನು ಚರ್ಚಿಸುತ್ತಿದ್ದರು. ತನಗೆ ಇಷ್ಟವಾದ ಹುಡುಗರನ್ನು ಭಾವನಾತ್ಮಕ ವಿಷಯಗಳ ಮೂಲಕ ಸೆಳೆಯುತ್ತಿದ್ದ. ಅಲ್ಲದೆ ಸೇನೆ ಸೇರ್ಪಡೆ ಕುರಿತು ಚರ್ಚಿಸುತ್ತಾ ಅವರ ನಗ್ನ ಚಿತ್ರಗಳನ್ನು ಕಳುಹಿಸಲು ಕೇಳಿಕೊಳ್ಳುತ್ತಿದ್ದ. ಹಾಗೆ ತುಂಬಾ ಆಪ್ತರಾದ ಹುಡುಗರೊಂದಿಗೆ ಹರಟೆ ಹೊಡೆಯುತ್ತಾ ಸಲಿಂಗ ಸಂಬಂಧಗಳ ಕುರಿತು ಅಭಿಪ್ರಾಯ ಕೇಳುತ್ತಿದ್ದರು. ಆರಂಭದಲ್ಲಿ ಜಾಕ್ರಿತ್ ಮನದಲ್ಲೇನಿದೆ ಎಂದು ಹುಡುಗರಿಗೆ ಅರ್ಥವಾಗುತ್ತಿರಲಿಲ್ಲ.
ಹಾಗೆಯೇ ಅದೊಂದು ದಿನ ಹುಡುಗನೊಬ್ಬ ಮೇಜರ್ನನ್ನು ಭೇಟಿಯಾಗಿದ್ದ. ಈ ಭೇಟಿಯ ಬಳಿಕವಷ್ಟೇ ಜಾಕ್ರಿತ್ನ ‘ನಗ್ನ’ ಸತ್ಯಗಳು ಬಾಲಕನಿಗೆ ಮುಂದೆ ಅನಾವರಣವಾಯಿತು. ಆದರೆ ಮೇಜರ್ನ ಮನದ ಇಚ್ಛೆಯನ್ನು ಪೂರೈಸುವ ಇರಾದೆಯಂತು ಹುಡುಗನಿಗಿರಲಿಲ್ಲ. ಹೀಗಾಗಿ ಈ ಹಿಂದೆ ಕಳುಹಿಸಿದ ನಗ್ನ ಚಿತ್ರಗಳನ್ನು ಜಾಕ್ರಿತ್ ಬಾಲಕನ ಮುಂದಿಟ್ಟಿದ್ದಾನೆ. ಅಲ್ಲದೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದ. ಹೀಗೆ ಬ್ಯಾಕ್ಮೇಲ್ ಮಾಡುವ ಮೂಲಕ ಆ ಹುಡುಗನ ಜೊತೆ ದೈಹಿಕ ಸಂಪರ್ಕ ಬೆಳೆಸಿದ.
ಈ ಸಂಬಂಧವನ್ನು ಜಾಕ್ರಿತ್ ಕೆಲ ವರ್ಷಗಳವರೆಗೆ ಮುಂದುವರೆಸಿದನು. ಬಲವಂತದಿಂದಲೇ ಹುಡುಗನನ್ನು ಲೈಂಗಿಕವಾಗಿ ಪೀಡಿಸಿಕೊಂಡಿದ್ದ. ಆದರೆ ಇಂತಹ ಸಂಬಂಧ ಜಾಕ್ರಿತ್ಗೆ ಇದೇ ಮೊದಲಾಗಿರಲಿಲ್ಲ. ಅದಾಗಲೇ 70ಕ್ಕೂ ಹೆಚ್ಚು ಹುಡುಗರನ್ನು ಜಾಕ್ರಿತ್ ಲೈಂಗಿಕವಾಗಿ ಬಳಸಿಕೊಂಡಿದ್ದನು. ಆದರೆ ಅದರಲ್ಲೊಬ್ಬ ನೀಡಿದ ದೂರಿನಿಂದ ಜಾಕ್ರಿತ್ ಎಂಬ ಮೇಜರ್ನ ಅಸಲಿ ರೂಪ ಅನಾವರಣಗೊಳ್ಳಲು ಸಹಾಯಕವಾಯಿತು.
ದೂರು ದಾಖಲಿಸಿ ಜಾಕ್ರಿತ್ನನ್ನು ಬಂಧಿಸಲು ತೆರಳಿದ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ತನಿಖೆ ವೇಳೆ ಮನೆಯನ್ನು ಪರಿಶೀಲಿಸಿದಾಗ ಏಡ್ಸ್ ರೋಗಿಗಳಿಗೆ ನೀಡುವ ಔಷಧಿಗಳು ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಈ ಬಗ್ಗೆ ಪೊಲೀಸರಿಗೆ ಸಂಶಯ ಮೂಡಿದ್ದು, ವಿಚಾರಣೆ ನಡೆಸಿದಾಗ ಜಾಕ್ರಿತ್ ಹೆಚ್ಐವಿ ಪೀಡಿತ ಎಂಬ ಅಂಶ ಬೆಳಕಿಗೆ ಬಂದಿದೆ. ಲೈಂಗಿಕ ಹತಾಶೆಯಿಂದ ಬಳಲುತ್ತಿದ್ದನು. ಈ ಕಾರಣದಿಂದ ತನ್ನ ಲೈಂಗಿಕ ತೃಪ್ತಿಗೆ ಹುಡುಗರನ್ನು ಬಳಸಿಕೊಳ್ಳುತ್ತಿದ್ದ ಎಂಬ ಅಂಶ ಬೆಳಕಿಗೆ ಬಂತು. ಅಲ್ಲದೆ ಅವರಿಗೂ ಹೆಚ್ಐವಿ ಸೋಂಕನ್ನು ವರ್ಗಾಯಿಸಿ ಏಡ್ಸ್ ಎಂಬ ಮಹಾಮಾರಿಯನ್ನು ಎಲ್ಲರಿಗೂ ಹರಡುವಂತೆ ಮಾಡುವ ದುರುದ್ದೇಶ ಹೊಂದಿದ್ದನು.
ಅದಾಗಲೇ ಸೇನೆಯ ಮೇಜರ್ ಆಗಿದ್ದರಿಂದ ಜಾಕ್ರಿತ್ನ್ನು ಬಂಧಿಸಿ ಜೈಲುಗಟ್ಟುವಂತಿರಲಿಲ್ಲ. ಹೀಗಾಗಿ ಬಂಧಿಸಿದ ಪೊಲೀಸರು ಕೋರ್ಟ್ಗೆ ಹಾಜರು ಪಡಿಸಿದರು. ಆದರೆ ಜಾಕ್ರಿತ್ ಯಾವುದೇ ಕೊಲೆ ಮಾಡಿರದ ಕಾರಣದಿಂದ ಅವನ ಮೇಲೆ ದೊಡ್ಡ ಮಟ್ಟ ಕೇಸು ದಾಖಲಿಸಲು ಪೊಲೀಸರು ವಿಫಲರಾಗಿದ್ದರು. ಅದರಂತೆ ಬೆದರಿಕೆ , ಮೋಸ, ಬ್ಲಾಕ್ಮೇಲ್ ಮತ್ತು ಲೈಂಗಿಕ ಕಿರುಕುಳ ಸಂಬಂಧಿ ಕೇಸುಗಳನ್ನು ಜಡಿದು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಕೋರ್ಟ್ ನಿರ್ದೇಶಿಸಿತು. ಇಲ್ಲೂ ಕೂಡ ಮೇಲ್ನೋಟಕ್ಕೆ ಜಾಕ್ರಿತ್ ಗೆಲುವು ಸಾಧಿಸಿದ್ದರು. ಏಕೆಂದರೆ ಥಾಯ್ಲೆಂಡ್ನ ಕಾನೂನು ಪ್ರಕಾರ ಒಬ್ಬ ವ್ಯಕ್ತಿಯ ಮೇಲೆ ಹಲವು ರೀತಿಯ ಕೇಸುಗಳಿದ್ದರೂ ಒಂದೇ ಬಾರಿ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಜಾಕ್ರಿತ್ ಮೇಲೆ ಈಗ ಕೋರ್ಟಿನಲ್ಲಿ ಕೇಸು ನಡೆಯುತ್ತಿದೆ. ಸಾಕ್ಷಿಗಾಗಿ ಪೊಲೀಸರು ತಡಕಾಡುತ್ತಿದ್ದಾರೆ.
ಭಾರತದಲ್ಲೂ ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಸಲಿಂಗಕಾಮಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗೆ ಲೈಂಗಿಕ ದೌರ್ಜನ್ಯ ಎಸೆಗುವ ವ್ಯಕ್ತಿಗಳನ್ನು ಮಾನಸಿಕ ಸ್ಥಿತಿಗಳನ್ನು ಆಧರಿಸಿ ತೀರ್ಪು ನೀಡಲಾಗುತ್ತದೆ. ಒಂದಾರ್ಥದಲ್ಲಿ ಇಂತಹದೊಂದು ಕಾನೂನನ್ನು ಜನರು ದುರುಪಯೋಗ ಪಡಿಸಿ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಇಲ್ಲಿ ಅತ್ಯಾಚಾರ ಎಸೆಗುವ ಅಥವಾ ದೌರ್ಜನ್ಯ ಎಸೆಗುವ ವ್ಯಕ್ತಿಗಳ ವಿರುದ್ಧ ಕೊಲೆ ಆರೋಪ ಹೊರಿಸಿ ಬಂಧನದಲ್ಲಿಡಬೇಕಾಗಿರುವುದು ಅತ್ಯಗತ್ಯ ಎಂದು ನಿವೃತ್ತ ಐಪಿಎಸ್ ಅಧಿಕಾರಿ ವಿಜಯ್ ವಾತೆ ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಅಮೆರಿಕದಲ್ಲಿ ಮೇಜರ್ ಜಾಕ್ರಿತ್ ನಡೆಸಿದ ಈ ದೌರ್ಜನ್ಯದಿಂದ ಮುಂದೆ ಈ ಹುಡುಗರ ಜೀವನದಲ್ಲಿ ಪರಿಣಾಮ ಬೀರಬಹುದು. ಹಾಗೆಯೇ ಅತ್ಯಾಧುನಿಕ ಔಷಧಿಗಳ ಮೂಲಕ ಹುಡುಗರ ರೋಗವನ್ನು ಗುಣಪಡಿಸುವ ವ್ಯವಸ್ಥೆ ಮಾಡಬೇಕೆಂದು ಕೋರ್ಟ್ ನಿರ್ದೇಶಿಸಿದೆ. ಒಂದು ಅಂಕಿ ಅಂಶದ ಪ್ರಕಾರ ಈ ಹುಡುಗರ ಜೀವವನ್ನು ಉಳಿಸಲು ಲಕ್ಷಾಂತರ ಡಾಲರ್ ಖರ್ಚು ಮಾಡಬೇಕಾಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಜಾಕ್ರಿತ್ ಕೇವಲ 70 ಮಕ್ಕಳೊಂದಿಗೆ ಮಾತ್ರವಲ್ಲ ಲೈಂಗಿಕ ಸಂಬಂಧ ಬೆಳೆಸಿರುವುದು ಎಂಬ ಸಂದೇಹಗಳು ಕೂಡ ತನಿಖಾಧಿಕಾರಿಗಳಿಗಿದೆ. ಒಟ್ಟಿನಲ್ಲಿ ಮೇಜರ್ ಜಾಕ್ರಿತ್ ಹೆಸರು ಕೇಳಿದೊಡನೆ ಎದ್ದು ಬಿದ್ದು ಓಡುತ್ತಿದ್ದ ಕಿರಿಯ ಅಧಿಕಾರಿಗಳಿಗೆ ತಾವು ಎಂತಹ ವ್ಯಕ್ತಿಯನ್ನು ಆದರ್ಶವಾಗಿಟ್ಟುಕೊಂಡೆವು ಎಂಬುದು ನಿಧಾನಕ್ಕೆ ಅರ್ಥವಾಗಿದೆ.
Comments are closed.