ರಾಷ್ಟ್ರೀಯ

ಅಮರಾವತಿಯಲ್ಲಿ ಪಟೇಲ್‌ ಪ್ರತಿಮೆಗಿಂತ ಎತ್ತರದ ಆಂಧ್ರ ವಿಧಾನಸಭೆ!

Pinterest LinkedIn Tumblr


ವಿಜಯವಾಡ: ಬಿಜೆಪಿ ವಿರುದ್ಧ ರಾಜಕೀಯ ಹಠ ಸಾಧನೆಗೆ ಮುಂದಾಗಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಗುಜರಾತಿನಲ್ಲಿ ನಿರ್ಮಿಸಿರುವ 182 ಮೀಟರ್‌ ಎತ್ತರದ ಸರ್ದಾರ್‌ ಪಟೇಲ್‌ ಪ್ರತಿಮೆಯನ್ನು ಮೀರಿಸುವ ವಿಧಾನಸಭೆ ಕಟ್ಟಡವನ್ನು ತಮ್ಮ ರಾಜ್ಯದ ರಾಜಧಾನಿಯಲ್ಲಿ ನಿರ್ಮಿಸುವ ಘೋಷಣೆ ಮಾಡಿದ್ದಾರೆ.
ಅಮರಾವತಿಯಲ್ಲಿ ಕಟ್ಟಲು ಉದ್ದೇಶಿಸಿರುವ ವಿಧಾನಸಭೆ ಕಟ್ಟಡವು ಸರ್ದಾರ್‌ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆಗಿಂತ ಎತ್ತರ ಇರಲಿದೆ. ಅದು ಪೂರ್ಣಗೊಂಡರೆ ದೇಶದಲ್ಲಿಯೇ ಅತಿ ಎತ್ತರದ ಕಟ್ಟಡ ಎನ್ನುವ ಹೆಗ್ಗಳಿಕೆ ಪಡೆಯಲಿದೆ ಎಂದು ನಾಯ್ಡು ತಿಳಿಸಿದ್ದಾರೆ.
ಇಂಗ್ಲೆಂಡ್‌ ಮೂಲದ ವಾಸ್ತುಶಿಲ್ಪಿ ನಾರ್ಮ ಫೋಸ್ಟರ್ಸ್‌, ಈ ಉದ್ದೇಶಿತ ಕಟ್ಟಡದ ರೂಪುರೇಷೆ ಸಿದ್ಧಪಡಿಸಿದ್ದು, ಅದಕ್ಕೆ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ರಾಜ್ಯ ಸರಕಾರ ಒಪ್ಪಿಗೆ ಕೂಡ ನೀಡಿದೆ. ಮೂರು ಅಂತಸ್ತು ಒಳಗೊಂಡ 182 ಮೀಟರ್‌ ಎತ್ತರದ ಕಟ್ಟಡದ ಜತೆಗೆ ಸುರುಳಿಯಾಕಾರದ 250 ಮೀಟರ್‌ ಗಗನಚುಂಬಿ ಗೋಪುರವೂ ನಿರ್ಮಾಣಗೊಳ್ಳಲಿದೆಯಂತೆ.

ಎತ್ತರದ ಪೈಪೋಟಿ?(ಪ್ರಸ್ತಾವಿತವೂ ಸೇರಿ)
ಪಟೇಲ್‌ ಏಕತಾ ಪ್ರತಿಮೆ-೧೮೨ ಮೀ.
ಅಯೋಧ್ಯೆ ರಾಮ ವಿಗ್ರಹ- 201 ಮೀ

ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ-೨೧೨ ಮೀ.
ಕರ್ನಾಟಕದಲ್ಲಿ ಕಾವೇರಿ ಪ್ರತಿಮೆ-೧೨೫ ಮೀ.
ಆಂಧ್ರ ವಿಧಾನಸಭೆ- ೨೫೦ ಮೀ.

Comments are closed.