ರಾಷ್ಟ್ರೀಯ

ವ್ಯಾಪಾರದಲ್ಲಿ ಮುಗ್ಗರಿಸಿದ ಅಂಬಾನಿ: ಕೆನಡಾದ ಹೂಡಿಕೆದಾರ ಬ್ರೂಕ್ ಫೀಲ್ಡ್ ಗೆ ಕಂಪನಿ ಮಾರಾಟ!

Pinterest LinkedIn Tumblr


ನವದೆಹಲಿ: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮುಟ್ಟಿದ್ದೇಲ್ಲವೂ ಚಿನ್ನವೇ. ಮುಖೇಶ್ ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿ, ಅದರಲ್ಲಿ ಅವರು ಯಶಸ್ಸು ಕಾಣುವುದು ಶತಸಿದ್ಧ.

ಆದರೆ ಇದೇ ಮೊದಲ ಬಾರಿಗೆ ಮುಖೇಶ್ ವ್ಯಾಪಾರದ ಲೆಕ್ಕಾಚಾರದಲ್ಲಿ ಮುಗ್ಗರಿಸಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ಈಸ್ಟ್-ವೆಸ್ಟ್ ನ್ಯಾಚುರಲ್ ಗ್ಯಾಸ್ ಪೈಪ್‌ಲೈನ್ ನಷ್ಟದಲ್ಲಿದ್ದು, ಅದನ್ನು ಮಾರಾಟ ಮಾಡಲು ಮುಖೇಶ್ ನಿರ್ಧರಿಸಿದ್ದಾರೆ.

ಹೌದು, ಮುಖೇಶ್ ಅಂಬಾನಿ ಒಡೆತನದ ಈಸ್ಟ್-ವೆಸ್ಟ್ ನ್ಯಾಚುರಲ್ ಗ್ಯಾಸ್ ಪೈಪ್‌ಲೈನ್ ನಷ್ಟದಲ್ಲಿದ್ದು, ಇದನ್ನು ಕೆನಡಾದ ಹೂಡಿಕೆದಾರ ಬ್ರೂಕ್ ಫೀಲ್ಡ್ ಖರೀದಿಸಲು ಮುಂದೆ ಬಂದಿದ್ದಾರೆ.

ಆಂಧ್ರಪ್ರದೇಶದ ಕಾಕಿನಾಡದಿಂದ ಗುಜರಾತ್‌ನ ಬರೂಚ್ ವರೆಗಿನ ಒಟ್ಟು 1,400 ಕಿ.ಮೀ ಉದ್ದದ ಈ ಪೈಪ್‌ಲೈನ್ ಅಂಬಾನಿಗೆ ನಿರೀಕ್ಷಿತ ಲಾಭ ತಂದು ಕೊಟ್ಟಿಲ್ಲ ಎನ್ನಲಾಗಿದೆ. ಈ ಯೋಜನೆ ದಿನಕ್ಕೆ 80 ಮಿಲಿಯನ್ ಕ್ಯೂಬಿಕ್ ಮೀಟರ್ ನೈಸರ್ಗಿಕ ಇಂಧನವನ್ನು ಉತ್ಪಾದಿಸುತ್ತಿತ್ತು.

ಇನ್ನು ಅಂಬಾನಿ ಈ ಪೈಪ್ ಲೈನ್ ಅನ್ನು ಕೆನಡಾದ ಹೂಡಿಕೆದಾರ ಬ್ರೂಕ್ ಫೀಲ್ಡ್ ಅವರಿಗೆ ಮಾರಾಟ ಮಾಡಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಕ ಮಂಡಳಿ ಅನುಮತಿ ನೀಡಿದೆ ಎನ್ನಲಾಗಿದೆ.

Comments are closed.