ರಾಷ್ಟ್ರೀಯ

ಸಾಲ ನೀಡಿದ ತನ್ನ ಉದ್ಯಮ ಪಾಲುದಾರನನ್ನು ಹತ್ಯೆ ಮಾಡಿ, ಬಳಿಕ ಆತ್ಮಹತ್ಯೆಗೆ ನಿರಾಕರಿಸಿದ ಪತ್ನಿಯನ್ನೂ ಕೊಂದ ಪಾಪಿ

Pinterest LinkedIn Tumblr

ಗುರುಗ್ರಾಮ: ವ್ಯಕ್ತಿಯೊಬ್ಬ 40 ಲಕ್ಷ ರುಪಾಯಿ ಸಾಲ ತೀರಿಸಲು ಸಾಧ್ಯವಾಗದೆ ಸಾಲ ನೀಡಿದ ತನ್ನ ಉದ್ಯಮ ಪಾಲುದಾರನನ್ನು ಹತ್ಯೆ ಮಾಡಿ, ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಬಳಿಕ ಆತ್ಮಹತ್ಯೆಗೆ ನಿರಾಕರಿಸಿದ ತನ್ನ ಪತ್ನಿಯನ್ನು ಕೊಂದ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜೋಡಿ ಕೊಲೆಯ ಆರೋಪಿ ಹರ್ನೆಕ್ ಸಿಂಗ್ ತನ್ನ ಬ್ಯುಸಿನೆಸ್ ಪಾರ್ಟರ್ ಜಸ್ಕರನ್ ಸಿಂಗ್ ಅವರಿಂದ 40 ಲಕ್ಷ ರುಪಾಯಿ ಸಾಲ ಪಡೆದಿದ್ದ. ಸಾಲ ಮರುಪಾವತಿಸುವಂತೆ ಪದೆೇಪದೆ ಪೀಡಿಸುತ್ತಿದ್ದ ಜಸ್ಕರನ್ ನನ್ನು ಕಳೆದ ಅಕ್ಬೋರ್ 14ರಂದು ತನ್ನ ಪತ್ನಿ ಹಾಗೂ ಮತ್ತೊಬ್ಬನ ಸಹಾದಿಂದ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಜಸ್ಕರನ್ ನನ್ನು ಹತ್ಯೆ ಮಾಡಿ, 24ರಿಂದ 25 ತುಂಡು ಮಾಡಿ, ಆದನ್ನು ಬ್ಯಾಗ್ ಗೆ ತುಂಬಿ ತಮ್ಮ ಸ್ವಸ್ಥಳ ಲುಧಿಯಾನಕ್ಕೆ ತೆಗೆದುಕೊಂಡು ಹೋಗಿದ್ದರು ಎಂದು ಗುರುಗ್ರಾಮ ಪೊಲೀಸ್ ಪಿಆರ್ ಒ ಸುಭಾಶ್ ಬೋಕನ್ ಅವರು ಹೇಳಿದ್ದಾರೆ.

ಲುಧಿಯಾನಕ್ಕೆ ಹೋಗುವಾಗ ಆರೋಪಿಗಳು ದಾರಿ ಮಧ್ಯ ನಿಗೂಢ ಪ್ರದೇಶದಲ್ಲಿ ದೇಹವನ್ನು ಬೀಸಾಡಿದ್ದಾರೆ.

ಅಕ್ಟೋಬರ್ 22ರಂದು ಲುಧಿಯಾನದಿಂದ ವಾಪಸ್ ಗುರುಗ್ರಾಮಕ್ಕೆ ಬರುವಾಗ ಹರ್ನೆಕ್ ಸಿಂಗ್ ತನ್ನ ಪತ್ನಿ ಗುರ್ಮೇರ್ ಕೌರ್ ಗೆ ಇಬ್ಬರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೊಣ ಎಂದು ಹೇಳಿದ್ದಾನೆ. ಆದರೆ ಆತ್ಮಹತ್ಯೆಗೆ ನಿರಾಕರಿಸಿದ ಪತ್ನಿಯ ಕತ್ತು ಸೀಳಿ ಹರ್ನೆಕ್ ಸಿಂಗ್ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಗಾಯಮಾಡಿಕೊಂಡು ದರೋಡೆಕೋರರು ಪತ್ನಿಯನ್ನು ಹತ್ಯೆ ಮಾಡಿದರು ಪೊಲೀಸರಿಗೆ ತಿಳಿಸಿದ್ದಾರೆ. ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ ಹರ್ನೆಕ್ ಸಿಂಗ್ ಜೋಡಿ ಕೊಲೆಯ ತಪ್ಪೊಪ್ಪಿಕೊಂಡಿದ್ದಾನೆ ಎಂದು ಬೊಕನ್ ತಿಳಿಸಿದ್ದಾರೆ.

Comments are closed.