ರಾಷ್ಟ್ರೀಯ

ಪೆಟ್ರೋಲ್, ಡೀಸೆಲ್ ದರ ಇಳಿಸಿದ್ದ ಬೆನ್ನಲ್ಲೇ ಮತ್ತೆ ಬೆಲೆ ಏರಿಕೆ !

Pinterest LinkedIn Tumblr

ನವದೆಹಲಿ: ಗ್ರಾಹಕರ ಮೇಲಿನ ಹೊರೆ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಇಳಿಕೆ ಮಾಡಿದರೂ, ತೈಲ ಕಂಪನಿಗಳು ಮಾತ್ರ ಬೆಲೆ ಏರಿಕೆ ಮಾಡುತ್ತಲೇ ಇವೆ.

ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಶುಕ್ರವಾರವಷ್ಟೇ ರೂ.2.50 ಇಳಿಕೆ ಮಾಡಿತ್ತು. ಆದರೆ, ಇದಾದ ಮಾರನೇ ದಿನವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಪರ್ವ ಆರಂಭವಾಗಿದೆ.

ಭಾನುವಾರವಷಅಟೇ ಪೆಟ್ರೋಲ್ ಬೆಲೆ 14 ಪೈಸೆ ಏರಿಕೆ ಮಾಡಿದ್ದ ತೈಲ ಕಂಪನಿಗಳು ಇಂದೂ ಕೂಡ ಮತ್ತೆ ಏರಿಕೆ ಮಾಡಿದ್ದು, ಪೆಟ್ರೋಲ್ ಬೆಲೆಯಲ್ಲಿ 21 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 29 ಪೈಸೆ ಏರಿಕೆ ಮಾಡಿವೆ.

ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ಬೆಲೆ ಪ್ರತೀ ಲೀಟರ್’ಗೆ ರೂ.82.3 ಹಾಗೂ ಡೀಸೆಲ್ ಬೆಲೆ ಪ್ರತೀ ಲೀಟರ್’ಗೆ ರೂ.73.82 ಆಗಿದೆ.

ಇನ್ನು ವಾಣಿಜ್ಯ ನರಗದಲ್ಲಿ ಪೆಟ್ರೋಲ್ ದರ 21 ಪೈಸೆ ಹಾಗೂ ಡೀಸೆಲ್ ದರ 31 ಪೈಸೆ ಏರಿಕೆಯಾಗಿದ್ದು, ಮುಂಬೈ ನಲ್ಲಿ ಇಂದಿನ ಪೆಟ್ರೋಲ್ ದರ ರೂ.87.50 ಹಾಗೂ ಡೀಸೆಲ್ ದರ ರೂ.77.37 ಇದೆ.

Comments are closed.