ರಾಷ್ಟ್ರೀಯ

ಸೆಕ್ಸ್ ವೀಡಿಯೊ ತೋರಿಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಂಶುಪಾಲ !

Pinterest LinkedIn Tumblr

ಪುಣೆ: ವಿದ್ಯಾರ್ಥಿಗೆ ಶಾಲೆಯ ಪ್ರಾಂಶುಪಾಲರೇ ಪೋರ್ನ್ ವಿಡಿಯೋ ತೋರಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

14 ವರ್ಷದ ವಿದ್ಯಾರ್ಥಿಗೆ ಪ್ರಾಂಶುಪಾಲರು ಪೋರ್ನ್ ವಿಡಿಯೋ ತೋರಿಸಿರುವುದು ತಿಳಿದಿದ್ದರೂ, ವಿದ್ಯಾರ್ಥಿಗೆ ಮೌನವಾಗಿರುವಂತೆ ಮಹಿಳಾ ಆಪ್ತಸಲಹೆಗಾರ ಸೂಚಿಸಿರುವುದೂ ಬೆಳಕಿಗೆ ಬಂದಿದೆ.

ಪೋರ್ನ್ ವಿಡಿಯೋ ತೋರಿಸಿದ ಪ್ರಾಂಶುಪಾಲರು ಹಾಗೂ ಘಟನೆಯ ಬಗ್ಗೆ ಅರಿವಿದ್ದರೂ ಸುಮ್ಮನೆ ಇರುವಂತೆ ಸೂಚಿಸಿದ ಮಹಿಳಾ ಆಪ್ತಸಲಹೆಗಾರರ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಧಿಕಾರಿಗಳ ಪ್ರಕಾರ ಮಾರ್ಚ್ ನಲ್ಲಿ ನಡೆದಿರುವ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಶಾಲೆಯಲ್ಲಿ ಪ್ರಾಂಶುಪಾಲರು ಪೋರ್ನ್ ವಿಡಿಯೋ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿರುವುದರ ಬಗ್ಗೆ ವಿದ್ಯಾರ್ಥಿ ಶಾಲೆಯ ಆಪ್ತಸಲಹೆಗಾರರ ಬಳಿ ದೂರು ನೀಡಿದ್ದಾನೆ.

ಪ್ರಾಂಶುಪಾಲರ ವಿರುದ್ಧ ಮಾತನಾಡಿದರೆ ತನ್ನ ಕೆಲಸಕ್ಕೆ ಕುತ್ತು ಬರಲಿದೆ ಎಂಬ ಭಯದಿಂದಾಗಿ ಆಪ್ತ ಸಲಹೆಗಾರರು ವಿದ್ಯಾರ್ಥಿಗೆ ಈ ವಿಷಯದ ಬಗ್ಗೆ ಮೌನವಾಗಿರುವಂತೆ ಸೂಚಿಸಿದ್ದಾರೆ. ಈ ನಡುವೆ ವಿದ್ಯಾರ್ಥಿಯ ಶಿಕ್ಷಣಕ್ಕೆ ಕುತ್ತುಬರಬಹುದೆಂಬ ಭಯದಿಂದಾಗಿ ಪೋಷಕರೂ ಸಹ ಮೌನವಾಗಿದ್ದರು. ಆದರೆ ಪೊಲೀಸರಿಗೆ ಈ ಘಟನೆ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶಾಲೆಯನ್ನು ಸಂಪರ್ಕಿಸಿದ್ದಾರೆ.

Comments are closed.