ರಾಷ್ಟ್ರೀಯ

ಭಾರತ ಶಾಂತಿಯನ್ನು ಬಯಸುತ್ತದೆ. ಅದಕ್ಕಾಗಿ ನಮ್ಮ ಆತ್ಮಗೌರವವನ್ನು ಬಲಿ ಕೊಡುವುದಿಲ್ಲ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ಭಾರತಕ್ಕೆ ಶಾಂತಿ ಮುಖ್ಯ, ಆದರೆ ನಮ್ಮ ಆತ್ಮಗೌರವವನ್ನು ಬಲಿಯ ಮೂಲಕವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ತಮ್ಮ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ ಅದಕ್ಕಾಗಿ ನಮ್ಮ ಆತ್ಮಗೌರವವನ್ನು ಬಲಿ ಕೊಡುವುದಿಲ್ಲ. ಬಹುಶಃ ಈಗ ಎಲ್ಲರಿಗೂ ಅರ್ಥವಾಗಿರುತ್ತದೆ. ನಮ್ಮ ಸೈನಿಕರು ಯಾವುದೇ ಪರಿಸ್ಥಿತಿಗೂ ಸೂಕ್ತ ಉತ್ತರ ನೀಡಲಿದ್ದಾರೆ ಎಂದು. ಎಂತಹುದೇ ಪರಿಸ್ಥಿತಿಯಲ್ಲಿ ಭಾರತದ ಶಾಂತಿ ಕದಡಲು ನಮ್ಮ ಸೈನಿಕರು ಅನುವು ಮಾಡಿಕೊಡುವುದಿಲ್ಲ. ಶಾಂತಿಗೆ ನಾವು ಖಂಡಿತಾ ಬದ್ಧ ಆದರೆ, ಸ್ವಾಭಿಮಾನ ಮತ್ತು ಸಾರ್ವಭೌಮತ್ವದ ಬಲಿಯಿಂದಲ್ಲ ಎಂದು ಹೇಳಿದರು.

ಸೇನೆಯ 2ನೇ ವರ್ಷದ ಸರ್ಜಿಕಲ್ ದಾಳಿ ಸಂಭ್ರಮಾಚರಣೆ ಪೂರ್ಣಗೊಂಡ ಬೆನ್ನಲ್ಲೇ ಪ್ರಧಾನಿ ಮೋದಿ ತಮ್ಮ ವಾರದ ಮನ್ ಕಿ ಬಾತ್ ನಲ್ಲಿ ಭಾರತೀಯ ಸೇನೆ ಮತ್ತು ಗಡಿ ಭದ್ರತೆ ಕುರಿತು ಮಾತನಾಡಿದರು. ಭಾರತದ ಪ್ರತೀಯೋರ್ವ ಯುವಕನೂ ಭಾರತೀಯ ಸೇನೆ ಕುರಿತು ಅರಿಯಬೇಕು ಎಂದು ಹೇಳಿದರು. ವಿಶ್ವಯುದ್ಧದ ಸಂದರ್ಭದಲ್ಲಿ ದೇಶದ 2 ಲಕ್ಷಕ್ಕೂ ಅಧಿಕ ಮಂದಿ ಸೈನಿಕರು ಬಲಿದಾನ ಮಾಡಿದ್ದಾರೆ.

ವಿಶ್ವಯುದ್ಧದ ಸಂದರ್ಭದಲ್ಲಿ ಸಂಬಂಧವೇ ಇಲ್ಲದ ಯುದ್ಧದಲ್ಲಿ ದೇಶದ ಸೈನಿಕರು ಸಾವನ್ನಪ್ಪಿದ್ದರು. ಇದರಿಂದಲೇ ತಿಳಿಯುತ್ತದೆ ನಮ್ಮ ಧ್ಯೇಯ ಕೇವಲ ವಿಶ್ವಶಾಂತಿ. ಇದೇ ಕಾರಣಕ್ಕಾಗಿ ವಿಶ್ವಯುದ್ಧದಲ್ಲಿ ನಮ್ಮ ಸೈನಿಕರು ಪಾಲ್ಗೊಂಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದರು.

Comments are closed.