ಹೊಸದಿಲ್ಲಿ: ಆಯೋಧ್ಯೆ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ 1994ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದ್ದು, ತೀರ್ಪು ಕುರಿತು ಹಲವು ಪ್ರಮುಖರ ಅಭಿಪ್ರಾಯ, ಹೇಳಿಕೆ ಇಲ್ಲಿದೆ.
ರಾಮಚಂದ್ರ ಭೂಮಿ ಕುರಿತ ವಿವಾದ ಕೂಡಲೇ ಅಂತ್ಯಗೊಳ್ಳಬೇಕು. ದೇಶದ ಬಹುತೇಕ ಜನತೆ ಈ ಸಮಸ್ಯೆಗೆ ಪರಿಹಾರ ಬಯಸಿದೆ. ಪ್ರಕರಣ ಬೇಗನೇ ಇತ್ಯರ್ಥವಾಗಲಿ ಎಂದು ಮನವಿ ಮಾಡುತ್ತೇವೆ.
ಯೋಗಿ ಅದಿತ್ಯನಾಥ್, ಉತ್ತರ ಪ್ರದೇಶ ಸಿಎಂ
ಈ ಪ್ರಕರಣವನ್ನು ಸಾಂವಿಧಾಬಿಕ ಪೀಠ ನಿರ್ವಹಿಸಿದರೆ ಚೆನ್ನಾಗಿರುತ್ತದೆ. ದೇಶದಲ್ಲಿನ ಜಾತ್ಯಾತೀತೆಯ ವಿರೋಧಿಗಳು ಈ ಪ್ರಕರಣದ ತೀರ್ಪನ್ನು ಅವರ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ಬಯಸಬಹುದು.
ಅಸಾದುದ್ದೀನ್ ಓವೈಸಿ, ಎಐಎಂಐಎಂ
ರಾಮ ಜನ್ಮಭೂಮಿ ಪ್ರಕರಣದಲ್ಲಿ ಅ. 29, 2018ರಿಂದ ಮೂವರು ಸದಸ್ಯರ ಸುಪ್ರೀಂ ಕೋರ್ಟ್‌ನ ಪೀಠ ವಿಚಾರಣೆ ನಡೆಸಲಿದೆ. ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.
ಆರ್‌ಎಸ್‌ಎಸ್
ರಾಮ ಜನ್ಮಭೂಮಿ ಕುರಿತ ಮನವಿ ವಿಚಾರಣೆಗೆ ಇದು ಸಕಾಲವಾಗಿದ್ದು, ಅಡೆತಡೆಗಳು ದೂರವಾಗಿವೆ.
ಅಲೋಕ್ ಕುಮಾರ್, ವಿಎಚ್‌ಪಿ
ಇದು ಧಾರ್ಮಿಕತೆಗೆ ಸಂಬಂಧಿಸಿದ ವಿವಾದವಲ್ಲ. ಆಯೋಧ್ಯೆ ಹಿಂದುಗಳ ಪವಿತ್ರ ಸ್ಥಳವಾಗಿದೆ. ಮುಸ್ಲಿಮರಿಗಾದರೆ ಮೆಕ್ಕಾ ಇದೆ.
ಉಮಾ ಭಾರತಿ, ಬಿಜೆಪಿ
ಅಯೋಧ್ಯೆ ಪ್ರಕರಣದಲ್ಲಿ ಇಸ್ಮಾಯಿಲ್ ಫಾರೂಕ್ ಕೇಸ್ ಯಾವುದೇ ಪರಿಣಾಮ ಬೀರುವುದಿಲ್ಲ. ಮಸೀದಿ ನಿರ್ಮಾಣವಾಗಿರುವುದು ನಮಾಜ್ ಮಾಡಲೆಂದೇ ಮತ್ತು ಅದು ನಮ್ಮ ಧರ್ಮದ ಒಂದು ಅಂಗವೇ ಆಗಿದೆ.
ಮೌಲಾನ ಖಾಲಿದ್ ರಶೀದ್ ಫಿರಂಗಿಮಹಲಿ, ಎಐಎಂಪಿಎಲ್‌ಬಿ
ಇದು ನಮಗೆ ಹಿನ್ನಡೆಯಲ್ಲ, ವಿಚಾರಣೆ ಈಗಷ್ಟೇ ಆರಂಭವಾಗಿದೆ. 1994ರ ಇಸ್ಮಾಯಿಲ್ ಫಾರೂಕ್ ಕೇಸ್ ಇದಕ್ಕೂ ಸಂಬಂಧವಿಲ್ಲ.
ಅಡ್ವೋಕೇಟ್ ಝಾಪರ್ಯಾಬ್ ಜೀಲಾನಿ
ಬಹುಸಂಖ್ಯಾತ ತೀರ್ಪು ಬಹುಸಂಖ್ಯಾತರನ್ನು ಓಲೈಸುತ್ತದೆ. ಅಲ್ಪಸಂಖ್ಯಾತ ತೀರ್ಪು ಅಲ್ಪಸಂಖ್ಯಾತರನ್ನು ಓಲೈಸುತ್ತದೆ. ಎಲ್ಲರನ್ನೂ ಸಮಾಧಾನಿಸಲು ಸುಪ್ರೀಂಕೋರ್ಟ್ ಒಂದೇ ದನಿಯಲ್ಲಿ ಮಾತನಾಡಬೇಕು.
ರಾಜೀವ್ ಧವನ್, ಅಯೋಧ್ಯೆ ಪ್ರಕರಣದಲ್ಲಿ ಅರ್ಜಿದಾರನ ಸಲಹೆಗಾರ
ರಾಮಜನ್ಮಭೂಮಿಯಲ್ಲಿ ಪೂಜೆ ಸಲ್ಲಿಸಲು ನನಗೆ ಅವಕಾಶವಿದೆ. ಸುಪ್ರೀಂಕೋರ್ಟ್ ಇದನ್ನು ಈಗ ಸಾಧ್ಯವಾಗಿಸಿದೆ. ಸುನ್ನಿ ಬೋರ್ಡ್‌ಗೆ ಅಲ್ಲಿನ ಸ್ಥಳದ ಮೇಲೆ ಈಗ ಹಕ್ಕಿಲ್ಲ. ರಾಮ ಮಂದಿನ ನಿರ್ಮಾಣ ಕಾರ್ಯ ಬೇಗನೇ ಆರಂಭವಾಗಲಿದೆ.
ಸುಬ್ರಮಣಿಯನ್ ಸ್ವಾಮಿ, ಬಿಜೆಪಿ.
Comments are closed.