ರಾಷ್ಟ್ರೀಯ

ಮೊಘಲ್ ವಂಶಸ್ಥನಿಂದ ಬಾಬರ್ ಕಾಲದ ರಾಮ ಮಂದಿರ ಧ್ವಂಸಕ್ಕೆ ಕ್ಷಮೆಯಾಚನೆ

Pinterest LinkedIn Tumblr


ಲಖನೌ: ಸ್ವಯಂ ಘೋಷಿತ ಮೊಘಲ್ ರಾಜವಂಶಸ್ಥ ಬಹದ್ದೂರ್ ಷಾ ಜಾಫರ್, ಯೊಕೂಬ್ ಹಬ್ಬೀಬುದ್ದೀನ್ ಟುಸಿ ಅವರು, 1558ರಲ್ಲಿ ತಮ್ಮ ಪೂರ್ವಿಕರ ಸೇನಾಧಿಪತಿ ಅಯೋಧ್ಯೆಯಲ್ಲಿ ರಾಮಮಂದಿರ ಧ್ವಂಸ ಮಾಡಿದ್ದಕ್ಕೆ ಹಿಂದೂ ಸಮುದಾಯವರಲ್ಲಿ ಕ್ಷಮೆ ಕೋರಿದ್ದಾರೆ.

16ನೇ ಶತಮಾನದಲ್ಲಿ ತಮ್ಮ ಪೂರ್ವಜ ಬಾಬರ್‌ನ ಸೇನಾಧಿಪತಿ ಮೀರ್ ಬಕ್ವಿ ಅಯೋಧ್ಯೆಯಲ್ಲಿನ ರಾಮ ಮಂದಿರವನ್ನು ಧ್ವಂಸಗೊಳಿಸಿದ್ದಕ್ಕೆ ಬಾಬರನ 6ನೇ ತಲೆಮಾರಿನ ಕುಡಿಯಾಗಿರುವ ನಾನು, ಸಮಸ್ತ ಹಿಂದೂ ಬಾಂಧವರಲ್ಲಿ ಹಾಗೂ ರಾಮ ಭಕ್ತರಲ್ಲಿ ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತಿದ್ದೇನೆ ಹಾಗೂ ರಾಮ ಮಂದಿರ ಪುನರ್ ನಿರ್ಮಾಣಕ್ಕೆ ಸಂಪೂರ್ಣವಾಗಿ ಬೆಂಬಲ ನೀಡುತ್ತೇನೆ ಎಂದು ಅವರು ಹಿಂದೂ ಮಹಾಸಭೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ ಅವರಿಗೆ ಪತ್ರ ಹಸ್ತಾಂತರಿಸಿದ ಬಳಿಕ ಮಾತನಾಡಿದ ಟುಸಿ, ಬಾಬರ್ ಕೂಡ ತನ್ನ ಸೇನಾಧಿಕಾರಿಯ ಕೃತ್ಯವನ್ನು ಖಂಡಿಸಿದ್ದರು ಹಾಗೂ ಇದೊಂದು ಘೋರ ತಪ್ಪು ಬೇಸರ ವ್ಯಕ್ತಪಡಿಸಿದ್ದರು ಎಂದಿದ್ದಾರೆ.

ಅಯೋಧ್ಯ ವಿವಾದವನ್ನು ಮುಂದಿಟ್ಟುಕೊಂಡು ಯಾರು ಕೂಡ ರಾಜಕೀಯ ಮಾಡಬಾರದು ಎಂದಿರುವ ಟುಸಿ, ವಿವಾದ ಸಂಬಂಧ ನ್ಯಾಯಾಲಯ ಮೊರೆ ಹೋಗಿರುವ ಮುಸ್ಲಿಂ ಬಾಂಧವರು ತಮ್ಮ ಅರ್ಜಿಯನ್ನು ಹಿಂಪಡೆಯುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.

Comments are closed.