ರಾಷ್ಟ್ರೀಯ

ಭಾರತೀಯ ರೈಲ್ವೆ ಇಲಾಖೆಯ ಹಗರಣ​​: ಲಾಲೂ ಕುಟಂಬಕ್ಕೆ ಸಮನ್ಸ್​​!

Pinterest LinkedIn Tumblr


ನವದೆಹಲಿ: ‘ಐಆರ್​ಸಿಟಿಸಿ (ಭಾರತೀಯ ರೈಲ್ವೆ ಇಲಾಖೆ)’ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಲಯವೂ ಬಿಹಾರ್​ ಮಾಜಿ ಮುಖ್ಯಮಂತ್ರಿ, ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​​ ಕುಟುಂಬಕ್ಕೆ ಸಮನ್ಸ್​​ ಜಾರಿಗೊಳಿಸಿದೆ. ಲಾಲೂ ಅವರ ಹೆಂಡತಿ ರಾಬ್ರಿ ದೇವಿ, ಮಗ ತೇಜಸ್ವಿ ಯಾದವ್​​ ಸೇರಿದಂತೆ ಮೂವರು ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಎನ್ನಲಾಗಿದೆ.

​​ಅಡಿಷನಲ್​​ ಸೆಷನ್ಸ್​​ ಜಡ್ಜ್​​​(ಎಸ್​ಎಸ್​​ಜೆ) ​ಅರುಣ್​ ಭಾರಸ್ವಜ್​ ಅವರು ಲಾಲೂ ಕುಟುಂಬದ ವಿರುದ್ಧ ಸಲ್ಲಿಸಿದ್ದ​ ದೋಷಾರೋಪಣ ಪಟ್ಟಿ ಕೈಗೆತ್ತಿಕೊಂಡಿದ್ದು, ಅಕ್ಟೋಬರ್​​ 6ರಂದು ವಿಚಾರಣೆ ಹಾಜರಾಗುವಂತೆ ಸೂಚಿಸಿದ್ದಾರೆ. ಸದ್ಯ ರಾಂಚಿ ಜೈಲಿನಲ್ಲಿ ಸೆರೆಮನೆ ವಾಸವಾಗಿರುವ ಲಾಲೂ ಪ್ರಸಾದ್​ ಕೂಡ ಕೋರ್ಟ್​​ ವಿಚರಾಣೆಯಲ್ಲಿ ಭಾಗಿಯಾಗಲಿದ್ದಾರೆ.

ಈ ಹಿಂದೆ ರೈಲ್ವೆ ಟೆಂಡರ್ ಸಂಬಂಧ ಲಾಲೂ ಪ್ರಸಾದ್ ಯಾದವ್, ಹಾಗೂ ಕುಟುಂಬಸ್ಥರ ವಿರುದ್ಧ ಜಾರಿ ನಿರ್ದೇನಾಲಯವು ಪ್ರಕರಣ ದಾಖಲಿಸಿಕೊಂಡು ಚಾರ್ಜ್ ಶೀಟ್ ಹಾಕಿತ್ತು. ರಾಬ್ರಿ ದೇವಿ, ತೇಜಸ್ವಿ ಯಾದವ್, ಪಿಸಿ ಗುಪ್ರಾ, ಲಾರಾ ಪ್ರಾಜೆಕ್ಟ್ ಎಲ್ಎಲ್ ಟಿ ಹಾಗೂ ಇನ್ನಿತರ ಸಂಸ್ಥೆಗಳು ಹಗರಣದಲ್ಲಿ ಪಾಲುದಾರರು ಎಂದು ಆರೋಪಿಸಲಾಗಿತ್ತು.

ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಲೈಟ್ ಮಾರ್ಕೆಟಿಂಗ್ ಗೆ ಸೇರಿರುವ 44.75 ಕೋಟಿ ರು ಗಳನ್ನು ಇಡಿ ವಶಪಡಿಕೊಡಿತ್ತು. ಅಲ್ಲದೇ ಲಾಲೂ ಅವರು ರೈಲ್ವೆ ಸಚಿವರಾಗಿದ್ದ 2004-2009ರ ಅವಧಿಯಲ್ಲಿ ರಾಂಚಿ ಮತ್ತು ಪುರಿಯಲ್ಲಿ ಐಆರ್‌ಸಿಟಿಸಿ ಹೋಟೆಲ್‌ಗಳ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಕಂಪೆನಿಯೊಂದಕ್ಕೆ ನೀಡುವಲ್ಲಿ ಅಕ್ರಮಗಳು ನಡೆದಿವೆ ಎನ್ನಲಾಗಿತ್ತು.

ರೈಲ್ವೆ ಹೋಟೆಲ್ ಹಗರಣ: ಲಾಲೂ ಕುಟುಂಬದ ವಿರುದ್ಧ ಎಫ್ಐಆರ್ ಹಾಕಲಾಗಿದೆ. ರಾಂಚಿಯಲ್ಲಿನ ರೈಲ್ವೆ ಸುಪರ್ದಿಯ ಹೋಟೆಲ್ ಗಳನ್ನು ನಿರ್ವಹಿಸಲು ಸುಜಾತಾ ಹೋಟೆಲ್ ಗೆ ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಟೆಂಡರ್ ನಿಯಮ ಸೇರಿದಂತೆ ಎಲ್ಲಾ ನಿಯಮಗಳನ್ನು ಮೀರಲಾಗಿತ್ತು ಎಂದು ಸಿಬಿಐ ಕೂಡ ಆರೋಪಿಸಿದೆ.

Comments are closed.