ರಾಷ್ಟ್ರೀಯ

ವಿಶ್ವದ ಅತಿ ಎತ್ತರದ ‘ಏಕತೆಯ ಪ್ರತಿಮೆ’ ಅ.31ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

Pinterest LinkedIn Tumblr

ನವದೆಹಲಿ: ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ವ್ಯಾಖ್ಯಾನಿಸಲಾಗಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಏಕತೆಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31ರಂದು ಅನಾವರಣಗೊಳಿಸಲಿದ್ದಾರೆ.

182 ಮೀಟರ್ ಎತ್ತರದ ಈ ಪ್ರತಿನೆಯು ದೇಶದ ಏಕತೆ ಮತ್ತು ಸಮಗ್ರತೆಯ ಚಿಹ್ನೆಯಾಗಿದ್ದು, ಇದನ್ನು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮದಿನಾಚರಣೆಯೆಂದು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಹೇಳಿದ್ದಾರೆ.

2013ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭ್ ಭಾಯ್ ಪಟೇಲ್ ರ ಪ್ರತಿಮೆ ಸ್ಥಾಪನೆ ಮಾಡುವ ಘೋಷಣೆ ಮಾಡಿದ್ದರು. ಅಲ್ಲದೆ ಪ್ರತಿಮೆ ನಿರ್ಮಾಣಕ್ಕೆ ದೇಶದಾದ್ಯಂತ ಕಬ್ಬಿಣ, ಮರಳು ಮತ್ತು ನೀರನ್ನು ಸಂಗ್ರಹಿಸಿದ್ದರು.

ನರೇಂದ್ರ ಮೋದಿ ಅವರು ಈ ಬಗ್ಗೆ ಘೋಷಣೆ ಮಾಡಿದಾಗ, ಇದು ಖಾಲಿ ಮಾತಷ್ಟೇ ಎಂದು ವಿರೋಧಪಕ್ಷಗಳು ಹೀಗಳೆದಿದ್ದವು. ಆದರೆ ಈಗ ವಿಶ್ವ ಮಟ್ಟದ ವ್ಯವಸ್ಥೆಯೊಂದಿಗೆ ತಲೆ ಎತ್ತಿದೆ. ಕಾಂಗ್ರೆಸ್ ನವರು ಸರ್ದಾರ್ ಪಟೇಲ್ ರನ್ನು ಮೂಲೆಗುಂಪು ಮಾಡಿದ್ದರು. ಮೋದಿಯವರು ಈಗ ಪಟೇಲ್ ಮತ್ತು ಅವರ ಕೆಲಸವನ್ನು ಜಗತ್ತಿನ ಮುಂದೆ ತಂದಿದ್ದಾರೆ ಎಂದು ರೂಪಾಣಿ ಹೇಳಿದ್ದಾರೆ.

Comments are closed.